Karnataka Times
Trending Stories, Viral News, Gossips & Everything in Kannada

Loan: ಎಮೆರ್ಜೆನ್ಸಿ ಸಮಯದಲ್ಲಿ ಬ್ಯಾಂಕ್ ಗಳು ಎಫ್ಡಿ ಹಣದ ಮೇಲೆ ಎಷ್ಟು ಸಾಲ ಕೊಡುತ್ತದೆ?

advertisement

ಇಂದು ಪ್ರತಿ ಯೊಬ್ಬ ವ್ಯಕ್ತಿಯು ಮನೆ (Home) ಕಟ್ಟಬೇಕು ಅಥವಾ ಚಿನ್ನ (Gold) ಖರೀದಿ ಮಾಡಬೇಕು ಇತ್ಯಾದಿಗಳಿಗೆ ಸಾಲದ ಅವಶ್ಯ ಕತೆ ಇದ್ದೆ ಇರುತ್ತದೆ. ಸಾಲ ಅಂತ ಬಂದಾಗ ಬ್ಯಾಂಕ್ ಸಾಲ (Bank Loan), ವೈಯಕ್ತಿಕ ಸಾಲ (Personal Loan) ಇದ್ದೆ ಇರುತ್ತದೆ. ಹೆಚ್ಚಿನವರು ಸಾಲ ಮಾಡುವಾಗ ಯಾವುದರಲ್ಲಿ ಬಡ್ಡಿ ಕಡಿಮೆ ಎಂದು ಆಯ್ದುಕೊಂಡು ಆಯ್ಕೆ ಮಾಡುತ್ತಾರೆ. ಯಾಕಂದ್ರೆ ಸಾಲ ಪಡೆಯುದ್ದಕ್ಕಿಂತ ಹೆಚ್ಚು ಸಾಲ ಕಟ್ಟುವ ಹೊರೆಯು ಹೆಚ್ಚಾಗುತ್ತದೆ. ಇನ್ನೂ ತುರ್ತು ಹಣ ಬೇಕು ಅಂದಾಗ ಬ್ಯಾಂಕ್ ಗಳಲ್ಲಿ ಸಿಗುವುದು ಕಷ್ಟಕರ. ಹಣಕಾಸು ತುರ್ತು ಎಂಬ ಸಂದರ್ಭದಲ್ಲಿ ಎಫ್​.ಡಿ. ಮೇಲೆ ಹೆಚ್ಚಿನವರು ಸಾಲ (Loan) ಪಡೆದುಕೊಳ್ಳುತ್ತಾರೆ. ಹಾಗಿಂದ್ರೆ ಯಾವ ರೀತಿ ಸಾಲ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

ಅಡಮಾನ ಇಟ್ಟು ಸಾಲ:

ಕಷ್ಟ ಕಾಲದಲ್ಲಿ ಸಹಾಯವಾಗಬೇಕು ‌ ಎಂಬ ನಿಟ್ಟಿನಲ್ಲಿ ಹಣ ವನ್ನು ಸೇವೆಂಗ್ ಮಾಡಿ ಇಡುವುದು, ಅಥವಾ FD ಇಡುವುದು ಇತ್ಯಾದಿ. ನಿಮ್ಮಲ್ಲಿನ Fixed Deposit ಇದ್ದಲ್ಲಿ ಅದರ ಮೇಲೆ ಸಾಲ ಪಡೆಯಬಹುದು ಮತ್ತು ಅತ್ಯಂತ ವೇಗವಾಗಿ ಹಣ ಪಡೆದುಕೊಳ್ಳಬಹುದು. ಹೌದು ಬ್ಯಾಂಕ್​ನಲ್ಲಿ ಎಫ್​ಡಿ ಇದೆ ಎಂದಾದರೆ ಅದನ್ನೇ ಅಡಮಾನ ಇಟ್ಟು ತಕ್ಷಣವೇ ಸಾಲ ಪಡೆಯಲು ಸಹ ಅವಕಾಶ ಇದೆ.

ಎಫ್ ಡಿ ಸಾಲ ಉತ್ತಮ:

 

advertisement

 

ಎಫ್‌ಡಿ ಮೂಲಕ ಸಾಲವನ್ನು ಮಾಡುವುದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ವೈಯಕ್ತಿಕ ಸಾಲ (Personal Loan) ಅಥವಾ ಕ್ರೆಡಿಟ್ ಕಾರ್ಡ್ (Credit Card) ಮುಂಗಡಗಳಂತಹ ಸಾಲಗಳಿಗೆ ಹೋಲಿಕೆ ಮಾಡಿದ್ರೆ ಎಫ್‌ಡಿಗಳ ಮೇಲಿನ ಸಾಲ ಸುರಕ್ಷಿತ ಯಾಕಂದ್ರೆ ಕಡಿಮೆ ಬಡ್ಡಿದರ ಇದರಲ್ಲಿ ಇರುತ್ತದೆ. ಇನ್ನೂ ಕಡಿಮೆ ಅವಧಿಯಲ್ಲಿ ಸಾಲವನ್ನು ಮರುಪಾವತಿಸಲು ಅವಕಾಶ ಸಹ ಇದೆ.‌ ಅದೇ ರೀತಿ ನೀವು ಸಾಲವನ್ನು ಮರುಪಾವತಿ ಮಾಡಿದ ನಂತರ, ಎಫ್‌ಡಿಯಲ್ಲಿ ಬ್ಯಾಲೆನ್ಸ್ ಇದ್ದರೆ ನೀವು ಆ ಹಣವನ್ನು ತುರ್ತು ಸಂದರ್ಭದಲ್ಲಿ ಬಳಸಬಹುದು.

ಎಷ್ಟು ಲೋನ್ ನೀಡುತ್ತದೆ?

ಬ್ಯಾಂಕ್​ಗಳು ಎಫ್​.ಡಿ. ಒಟ್ಟು ಮೊತ್ತದ ಮೇಲೆ ಶೇ 85 ರಿಂದ ಶೇ 95 ರ ತನಕ ಲೋನ್ (Loan) ನೀಡಲಿದೆ.‌ ಅಂದ್ರೆ ನೀವು ಒಂದು ಲಕ್ಷ ಎಫ್. ಡಿ. ಇಟ್ಟರೆ ಎಂಬತ್ತು ಸಾವಿರ ತನಕ ಸಾಲ ದೊರೆಯುತ್ತದೆ. ಇನ್ನೂ ನೀವು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವುದರಿಂದ ನಿಮ್ಮ Credit Score ಸಹ ಹೆಚ್ಚಾಗುತ್ತದೆ. ಅಷ್ಟೆ ಅಲ್ಲದೆ ನೀವು ಇಲ್ಲಿ ಬಳಸುವ ಮೊತ್ತಕ್ಕೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ. ಒಟ್ಟಿನಲ್ಲಿ ಸಾಲ ಬೇಕಾದಲ್ಲಿ ಸುರಕ್ಷಿತ ಹೂಡಿಕೆಯಾದ ಎಫ್‌ಡಿಯಲ್ಲಿ ಹಣ ಡೆಪಾಸಿಟ್ ಮಾಡಿ, ಬೇಕದಾಗ ಸಾಲ ಪಡೆಯುದು ಉತ್ತಮ ಆಯ್ಕೆ ಎನ್ನಬಹುದು.

advertisement

Leave A Reply

Your email address will not be published.