Karnataka Times
Trending Stories, Viral News, Gossips & Everything in Kannada

Gold Price: ಮಹಿಳೆಯರ ಮುಖದಲ್ಲಿ ಮಂದಹಾಸ, ಆಗಸ್ಟ್ ನ ಬಂಗಾರದ ಬೆಲೆ ತಿಳಿಸಿದ ತಜ್ಞರು

advertisement

Gold Price Today Bangalore: ಇಂದು ಚಿನ್ನ ಅತೀ ಬೇಡಿಕೆಯ ವಸ್ತು ವಾಗಿದ್ದು ಇದರ ಖರೀದಿ ಗೆ ಹೆಚ್ಚಿನ ಜನರು ಆಸಕ್ತಿ ವಹಿಸ್ತಾ ಇದ್ದಾರೆ‌.ಹೂಡಿಕೆ ಅಂತ ಬಂದಾಗ ಮೊದಲು ಆದ್ಯತೆ ಯನ್ನು ನೀಡುವುದು ಚಿನ್ನಕ್ಕಾಗಿಯೇ ಹಾಗಾಗಿ ಮಾರುಕಟ್ಟೆ ಯಲ್ಲಿ ಬೆಳೆ ಹೆಚ್ಚಿದ್ದರೂ ಇದರ ಬೇಡಿಕೆ ಹೆಚ್ಚುತ್ತಲೇ ಇದೆ.ಶುಭ ಸಮಾರಂಭಕ್ಕೂ ಅಗತ್ಯ ವಾಗಿರುವ ಬಂಗಾರ ಧಾರ್ಮಿಕ ಮಹತ್ವವನ್ನೂ ಕೂಡ ಪಡೆದುಕೊಂಡಿದೆ.ಹಾಗಾಗಿ ಚಿನ್ನ ಬಹು ಮುಖ್ಯ ವಸ್ತು ಎನ್ನಬಹುದು.

WhatsApp Join Now
Telegram Join Now

ಹೂಡಿಕೆ ಮಾಡಲು ಉತ್ತಮ ಆಯ್ಕೆ
ಚಿನ್ನದ ಹೂಡಿಕೆಯಲ್ಲಿ ಎಂದಿಗೂ ಲಾಸ್ ಆಗುವುದಿಲ್ಲ, ಮುಂದಿನ ದಿನದಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚು ಆಗಲಿದೆ ಎಂಬುದು ತಜ್ಞರ ಅಭಿಪ್ರಾಯ ವಾಗಿದೆ.ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಾಣಬಹುದಾಗಿದ್ದು, ಈ ವರ್ಷಾಂತ್ಯಕ್ಕೆ 85 ಸಾವಿರಕ್ಕೆ ಏರಬಹುದು ಎನ್ನಲಾಗಿದೆ.ಹಾಗಾಗಿ ‌ಚಿನ್ನವನ್ನು ತುರ್ತು ಪರಿಸ್ಥಿತಿ,ಕಷ್ಟ ಇದ್ದರೂ ಚಿನ್ನವನ್ನು ಮಾರಾಟ ಮಾಡುವ ಮೂಲಕ ಅಥವಾ ಅದರ ಮೇಲೆ ಸಾಲವನ್ನು ತೆಗೆದುಕೊಳ್ಳುವ ಮೂಲಕ ಬಳಸಿ ಕೊಳ್ಳಬಹುದು.

gold price today
Image Source: Mint

ಆಗಸ್ಟ್ ನಲ್ಲಿ ಖರೀದಿ ಗೆ ಉತ್ತಮ ಆಯ್ಕೆ

advertisement

ಈ ವಾರದಲ್ಲಿ ಚಿನ್ನದ ಬೆಲೆ ಸ್ವಲ್ಪ ನಿರಾಳ ಎನಿಸಿದೆ.ಹೌದು ಹೋದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಅಲ್ಪ ಮಟ್ಟಿಗೆ ಮೊತ್ತ ಕಡಿಮೆ ಯಾಗಿದ್ದು ಆಗಸ್ಟ್‌ ತಿಂಗಳಿನಲ್ಲಿ ಚಿನ್ನದ ದರ ಮತ್ತಷ್ಟು ಕಡಿಮೆ ಯಾಗಲಿದೆ ಎನ್ನುವ ಮಾಹಿತಿ ಯನ್ನು ತಜ್ಞರು ನೀಡಿದ್ದಾರೆ.ಹಾಗಾಗಿ ಚಿನ್ನ ಖರೀದಿ ಮಾಡಲು ಆಗಸ್ಟ್ ತಿಂಗಳು ಉತ್ತಮ ಸಮಯ ಎಂದೇ ಹೇಳಬಹುದು.

ಎಷ್ಟು ಇದೆ ಬೆಲೆ?
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಚಿನ್ನದ ಬೆಲೆ ರೂ. 6,575 ಆಗಿದ್ದು ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಬೆಲೆಯು ರೂ. 6,625, ರೂ. 6,575, ರೂ. 6,575 ಮೊತ್ತ ಆಗಿದೆ.ದೆಹಲಿಯಲ್ಲಿ ಇಂದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ ರೂ 6589 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ರೂ 7187 ಆಗಿದೆ.gold price today

ಬೆಳ್ಳಿ ದರ
ಬೆಳ್ಳಿ ಬೆಲೆಯಲ್ಲಿ ಕೂಡ ಭರ್ಜರಿ ಕಡಿಮೆ ಆಗಿದರ. ಅಂತೂ ಇಂತೂ ಬೆಳ್ಳಿ ಬೆಲೆ ಮತ್ತೆ 90,000 ರೂಪಾಯಿ ಆಗಿದ್ದು 90,950 ಇದ್ದ ಪ್ರತಿ ಕೆ.ಜಿ. ಬೆಳ್ಳಿ ಧಾರಣೆ 1,450 ರೂಪಾಯಿ ಕುಸಿದಿದೆ‌..ಹಾಗಾಗಿ ಬೆಳ್ಳಿ ದರವು ಕಡಿಮೆ ಯಾಗಿದೆ.

ಯಾಕಾಗಿ ಕಡಿಮೆ?
ಆಗಸ್ಟ್‌ ತಿಂಗಳಿನಲ್ಲಿ ಚಿನ್ನದ ದರ 5500 ರೂಗೆ ಇಳಿಯುವ ಸಾಧ್ಯತೆ ಹೆಚ್ಚಿದೆ.   ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ, ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಚಿನ್ನದ ದರ ನಿರ್ಧಾರವಾಗುತ್ತದೆ.ರಾಜಕೀಯ ಸಂಘರ್ಷ, ಆರ್ಥಿಕ ಅನಿಶ್ಚಿತತೆ ಅಥವಾ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ಸಮಯದಲ್ಲಿ ಚಿನ್ನದ ದರ ಬದಲಾವಣೆ ಆಗಲಿದೆ.

advertisement

Leave A Reply

Your email address will not be published.