Karnataka Times
Trending Stories, Viral News, Gossips & Everything in Kannada

Gruha Lakshmi Money: ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಯಾವಾಗ ಬಿಡುಗಡೆ ಯಾಗಲಿದೆ?

advertisement

ಇಂದು ಮಹಿಳೆಯರು ಕೂಡ ಶಿಕ್ಷಣ ವಂತರಾಗಿದ್ದು ತಾನು ದುಡಿಯಬೇಕು ಎನ್ನುವ ಹಂಬಲ ಮಹಿಳೆಯರಲ್ಲಿ ಕೂಡ ಹೆಚ್ಚಾಗಿದೆ. ಹಾಗಾಗಿ ಎಲ್ಲ ಕ್ಷೇತ್ರದಲ್ಲಿಯು ಮಹಿಳೆಯರು ತೊಡಗಿ ಕೊಂಡಿದ್ದು ಅರ್ಥಿಕ ವಾಗಿಯು ಸಬಲ ರಾಗುತ್ತಿದ್ದಾರೆ. ಸರಕಾರ ಕೂಡ ಮಹಿಳೆಯರನ್ನು ಆರ್ಥಿಕ ವಾಗಿ ಬೆಂಬಲಿಸುತ್ತಿದ್ದು ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ‌. ಈ ಭಾರಿ ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯನ್ನು ಪರಿಚಯ ಮಾಡಿದ್ದು ತಿಂಗಳಿಗೆ ಎರಡು ಸಾವಿರ ರೂ ಮನೆಯ ಹಿರಿಯ ಮಹಿಳೆಯ ಖಾತೆಗೆ ಜಮೆ ಯಾಗುತ್ತಿದೆ.

WhatsApp Join Now
Telegram Join Now

ಯಾವಾಗ ಹಣ ಬರಲಿದೆ?

 

Image Source: Udayavani

 

ಜೂನ್ ತಿಂಗಳ ಗೃಹಲಕ್ಷ್ಮಿ ಹಣ (Gruha Lakshmi Money) ವೂ ಮೊದಲ ವಾರದಲ್ಲಿ ಅಥವಾ 20 ರ ಒಳಗೆ ಮಹಿಳಾ ಫಲಾನುಭವಿಗಳಿಗೆ ಈ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ ಯಾಗಲಿದೆ.ಕೆಲವರಿಗೆ ಹತ್ತನೇ ಕಂತಿನ ಹಣವೂ ಖಾತೆಗೆ ಜಮೆ ಯಾಗಿಲ್ಲ. ಹಾಗಾಗಿ ಈ ಹಣವನ್ನೂ‌ಕೂಡ ಜೂನ್ ತಿಂಗಳಿನಲ್ಲಿಯೇ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ವಿವಿಧ ಮೂಲಗಳಿಂದ ಲಭ್ಯ ವಾಗಿದೆ.

advertisement

ಹಣ ಬಾರದೇ ಇದ್ದಲ್ಲಿ?

ಒಂದು ವೇಳೆ ಒಂದು ಕಂತಿನ ಗೃಹಲಕ್ಷ್ಮಿ ಹಣ (Gruha Lakshmi Money) ಬಾರದೇ ಇದ್ದಲ್ಲಿ ಮಹಿಳೆಯರು ತಮ್ಮ ಆಧಾರ್ ಅಪ್ಡೇಟ್, ರೇಷನ್ ಇ ಕೆವೈಸಿ, ಬ್ಯಾಂಕ್ ಖಾತೆ ಲಿಂಕ್ ಇತ್ಯಾದಿ ಯನ್ನು ಮಾಡಿಸುವ ಮೂಲಕ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿದರೆ ಎಲ್ಲಾ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮೆ ಯಾಗಲಿದೆ.

ಲೋಕ ಸಭಾ ಚುನಾವಣೆ ಗೆದ್ದರೂ ಐದು ಗ್ಯಾರಂಟಿ:

ಕಾಂಗ್ರೆಸ್ ಸರಕಾರವೂ ಲೋಕ ಸಭಾ ಚುನಾವಣೆ ಗೆದ್ದರೂ ಐದು ಗ್ಯಾರಂಟಿ ನೀಡುವುದಾಗಿ ಭರವಸೆ ನೀಡಿದೆ. ಹೌದು ಬಡವರ್ಗದ ಮಹಿಳೆಯರಿಗಾಗಿ ವಾರ್ಷಿಕ 1 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವ ಭರವಸೆ ನೀಡಿದೆ.ಮಹಿಳೆಯರಿಗೆ ಶೇ.50 ರಷ್ಟು ಉದ್ಯೋಗದಲ್ಲಿ ಹಕ್ಕು,ಅಂಗನವಾಡಿ, ಆಶಾ ಹಾಗೂ ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ವೇತನದಲ್ಲಿ ಹೆಚ್ಚಳ, ಮಹಿಳೆಯರಿಗಾಗಿ ಕಾನೂನು ಸಹಾಯಕರ ನೇಮಕಾತಿ, ಹಾಸ್ಟೆಲ್‌ಗಳ ನಿರ್ಮಾಣ ಇತ್ಯಾದಿ ಗ್ಯಾರಂಟಿ ‌ಯೋಜನೆಯನ್ನು ಮಹಿಳೆಯರಿಗಾಗಿ ಜಾರಿಗೆ ತರುವುದಾಗಿ ತಿಳಿಸಿದೆ. ಹಾಗಾಗಿ ಲೋಕಸಭಾ ಚುನಾವಣೆ ಫಲಿತಾಂಶ ಬರಲು ಇನ್ನೇನು ಕೆಲವೇ ದಿನ ಇರಲಿದ್ದು ಯಾವ ಸರಕಾರ ಯಾವ ಯೋಜನೆ ಮಹಿಳೆಯರಿಗಾಗಿ ಜಾರಿಗೆ ಮಾಡಲಿದೆ ಕಾದು ನೋಡಬೇಕು.

advertisement

Leave A Reply

Your email address will not be published.