Karnataka Times
Trending Stories, Viral News, Gossips & Everything in Kannada

PM Kisan Samman Nidhi: ಕಿಸಾನ್ ಸಮ್ಮಾನ್ ನಿಧಿ ಹಣ ಪಡೆಯುತ್ತಿರುವ ಎಲ್ಲರಿಗೂ ಊಹಿಸದ ಗುಡ್ ನ್ಯೂಸ್!

advertisement

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ರವರು 10 ವರ್ಷಗಳ ಕಾಲ ಭಾರತ ದೇಶದ ಪ್ರಧಾನ ಮಂತ್ರಿಯಾಗಿ ಯಶಸ್ವಿಯಾಗಿ ತಮ್ಮ ಅವಧಿಯಲ್ಲಿ ಜನರು ಮೆಚ್ಚುವಂತಹ ಆಡಳಿತವನ್ನು ನೀಡಿರುವುದು ಮಾತ್ರವಲ್ಲದೆ ಭಾರತ ಜಾಗತಿಕ ಮಟ್ಟದಲ್ಲಿ ಲೀಡರ್ ಸ್ಥಾನವನ್ನು ಪಡೆದುಕೊಳ್ಳುವಂತಹ ರೀತಿಯಲ್ಲಿ ಕೂಡ ದೇಶದ ರಾಜಕೀಯ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸಿದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ರೈತರ ವಿಚಾರದಲ್ಲಿ ಸಾಕಷ್ಟು ಸುಧಾರಣೆ ತರುವಂತಹ ಯೋಜನೆಗಳನ್ನು ಕೂಡ ನರೇಂದ್ರ ಮೋದಿ ರವರು ಜಾರಿಗೆ ತಂದಿರುವುದನ್ನ ನೀವು ನೋಡಿದ್ದೀರಿ. ಅವುಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವುದು ಕಿಸಾನ್ ಯೋಜನೆ.

WhatsApp Join Now
Telegram Join Now

ಮೂರನೇ ಬಾರಿಗೆ ಅಧಿಕಾರಕ್ಕೆ ಏರುತ್ತಿದ್ದಂತೆ ರೈತರಿಗೆ ಗುಡ್ ನ್ಯೂಸ್ ಹೇಳೋಕೆ ಮುಂದಾದ ಮೋದಿ ಜಿ:

 

Image Source: India Today

 

ಹೌದು ಗೆಳೆಯರೇ ಮೂರನೇ ಬಾರಿಗೆ ಈಗಾಗಲೇ ಅಧಿಕಾರಕ್ಕೆ ಏರಿರುವಂತಹ ವಿಚಾರ ನಿಮಗೆಲ್ಲರಿಗೂ ತಿಳಿದಿರುವಂತದ್ದಾಗಿದೆ. ಇನ್ನು ನರೇಂದ್ರ ಮೋದಿ (PM Narendra Modi) ರವರು ಇದೇ ಸನ್ನಿವೇಶದಲ್ಲಿ ರೈತರಿಗೆ ಒಂದು ಶುಭ ಸುದ್ದಿ ನೀಡುವಂತಹ ಕೆಲಸಕ್ಕೆ ಹೊರಟಿದ್ದಾರೆ ಎಂದು ಹೇಳಬಹುದಾಗಿದೆ.

advertisement

ಹೌದು ಗೆಳೆಯರೇ ನಿಮಗೆಲ್ಲರಿಗೂ ತಿಳಿದಿರಬಹುದು ಕಿಸಾನ್ ಯೋಜನೆಯ (PM Kisan Samman Nidhi) ಅಡಿಯಲ್ಲಿ ವಾರ್ಷಿಕವಾಗಿ ಮೂರು ಕಂತುಗಳಲ್ಲಿ ತಳ ಎರಡು ಸಾವಿರ ರೂಪಾಯಿ ರೀತಿಯಲ್ಲಿ ಒಟ್ಟಾರೆಯಾಗಿ 6,000 ಹಣವನ್ನು ನೀಡುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಕಳೆದ ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬಂದಿದೆ. ಆದರೆ ಈ ಬಾರಿ ಸ್ವಲ್ಪಮಟ್ಟಿಗೆ ಈ ಹಣವನ್ನು ಹೆಚ್ಚಳ ಮಾಡುವಂತಹ ನಿರ್ಧಾರಕ್ಕೆ ನರೇಂದ್ರ ಮೋದಿ ರವರು ಬಂದಂತಿದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.

ಈ ಆರ್ಥಿಕ ವರ್ಷದ ಬಜೆಟ್ ನಲ್ಲಿ ಈ ವಿಚಾರದ ಬಗ್ಗೆ ಪ್ರಮುಖವಾಗಿ ಮಾಹಿತಿಗಳು ಅಧಿಕೃತವಾಗಿ ಹೊರಬರುವಂತಹ ಸಾಧ್ಯತೆ ಇದೆ ಎಂಬುದಾಗಿ ಕೂಡ ಕೆಲವೊಂದು ಮಾಹಿತಿಗಳು ತಿಳಿಸಿವೆ. ಒಂದು ವೇಳೆ ಎಲ್ಲಾ ಅಂದುಕೊಂಡಂತೆ ನಡೆದರೆ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Nidhi) ಅಡಿಯಲ್ಲಿ ರೈತರು ವಾರ್ಷಿಕವಾಗಿ ಕೇವಲ ಆರು ಸಾವಿರ ಅಲ್ಲ ಬದಲಾಗಿ ಅದರ ಡಬಲ್ ಅಂದರೆ 12 ಸಾವಿರ ರೂಪಾಯಿಗಳವರೆಗೆ ಪಡೆದುಕೊಳ್ಳುವಂತಹ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದ್ದು ಇದು ಇನ್ನು ಮುಂದೆ ಅಷ್ಟೇ ಅಧಿಕೃತವಾಗಿ ಕಾರ್ಯರೂಪಕ್ಕೆ ಬರಬೇಕಾಗಿದೆ.

 

Image Source: Times Now

 

ಈ ಮೂಲಕ ಕೃಷಿ ಕ್ಷೇತ್ರದಲ್ಲಿ ಯುವಕರು ಕೂಡ ರೈತರಾಗುವಂತಹ ಹುಮ್ಮಸ್ಸು ಬರಲಿ ಎನ್ನುವ ಕಾರಣಕ್ಕಾಗಿಯೇ ಈ ರೀತಿಯ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎನ್ನುವಂತಹ ಮಾಹಿತಿ ಕೂಡ ಆಪ್ತ ವಲಯಗಳಲ್ಲಿ ಕೇಳಿ ಬರುತ್ತದೆ. ಈ ಹೆಚ್ಚಾಗಿರುವಂತಹ ಧನ ಸಹಾಯ ಅನ್ನೋದು ನಿಜ ಕೂಡ ಸಾಕಷ್ಟು ವಿಧಗಳಲ್ಲಿ ರೈತರಿಗೆ ಆರ್ಥಿಕ ಸಹಾಯವನ್ನು ಕನಿಷ್ಠಪಕ್ಷ ಸಣ್ಣ ರೀತಿಯಲ್ಲೇ ಆದ್ರೂ ಕೂಡ ಮಾಡೋದಕ್ಕೆ ಸಹಾಯಕವಾಗಿದೆ ಎಂದು ಹೇಳಬಹುದಾಗಿದೆ.

ಇದೇ ರೀತಿ ರೈತರ ವಿಚಾರದಲ್ಲಿ ನರೇಂದ್ರ ಮೋದಿ ರವರ ನೇತೃತ್ವದ ಎನ್.ಡಿ.ಎ ಸರ್ಕಾರ ಮುಂದಿನ ದಿನಗಳಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವಂತಹ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದು. ಮೋದಿ ಅವರು ರೈತ ನಕ್ಕರೆ ಇಡೀ ದೇಶವೇ ಸಮೃದ್ಧವಾಗಿರುತ್ತದೆ ಎನ್ನುವಂತಹ ಧ್ಯೇಯ ಮಂತ್ರವನ್ನು ಈ ಬಾರಿ ತಮ್ಮದಾಗಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.

advertisement

Leave A Reply

Your email address will not be published.