Karnataka Times
Trending Stories, Viral News, Gossips & Everything in Kannada

Govt Employees: ಸರ್ಕಾರಿ ನೌಕರರಿಗೆ ಬೆಳ್ಳಂಬೆಳಿಗ್ಗೆ ಗುಡ್ ನ್ಯೂಸ್! ಸಂಬಳದ ವಿಚಾರವಾಗಿ ಹೊಸ ನಿರ್ಧಾರ

advertisement

ಸರ್ಕಾರಿ ಇಲಾಖೆಯ ಉದ್ಯೋಗಿಗಳಿಗೆ (Govt Employees) ಕೆಲಸ ಪಡೆಯೋದೇ ಕಷ್ಟ ಆದರೆ ಕೆಲಸದಕ್ಕಿಂತ ಹೆಚ್ಚಾಗಿ ಕೆಲಸ ಪಡೆದುಕೊಂಡಿದ ನಂತರ ಸಂಬಳವನ್ನು ಹೆಚ್ಚು ಮಾಡಿಸಿಕೊಳ್ಳುವುದು ಇನ್ನು ಕಷ್ಟ ಎಂದು ಹೇಳಬಹುದಾಗಿದೆ. ಅದೇ ಕಾರಣಕ್ಕಾಗಿ ಆಗಾಗ ತಮ್ಮ ಸಂಬಳ ಹೆಚ್ಚಳಕ್ಕಾಗಿ ಸರ್ಕಾರಿ ಇಲಾಖೆಯ ಉದ್ಯೋಗಿಗಳು ಪ್ರತಿಭಟನೆಯನ್ನು ಮಾಡುವುದನ್ನು ಕೂಡ ನೀವು ನೋಡಬಹುದಾಗಿದೆ.

WhatsApp Join Now
Telegram Join Now

ಇನ್ನು ಇವತ್ತಿನ ಈ ಲೇಖನದ ಮೂಲಕ ಸರ್ಕಾರಿ ಉದ್ಯೋಗಿಗಳಿಗೆ ಒಂದು ಗುಡ್ ನ್ಯೂಸ್ ಹೇಳೋದಕ್ಕೆ ಹೊರಟಿದ್ದೇವೆ. ಹೌದು ಸರ್ಕಾರದ ಕಡೆಯಿಂದ ಸಂಬಳದ ಹೆಚ್ಚಳದ ವಿಚಾರದಲ್ಲಿ ಸರ್ಕಾರಿ ನೌಕರಿ ಮಾಡುವಂತಹ ಉದ್ಯೋಗಿಗಳಿಗೆ (Govt Employees) ಗುಡ್ ನ್ಯೂಸ್ ಸಿಕ್ತಾ ಇದೆ ಎಂದು ಹೇಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ!

ಸಂಬಳದ ಹೆಚ್ಚಳದ ವಿಚಾರದಲ್ಲಿ ಸರ್ಕಾರಿ ಇಲಾಖೆಯ ಉದ್ಯೋಗಿಗಳಿಗೆ ಗುಡ್ ನ್ಯೂಸ್:

 

Image Source: ETHRWorld.com

 

advertisement

ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಗುಡ್ ನ್ಯೂಸ್ ಹೇಳಕ್ಕೆ ಹೊರಟಿರೋದು ಹರಿಯಾಣ ರಾಜ್ಯ ಸರ್ಕಾರದ ಬಗ್ಗೆ. ಹರಿಯಾಣ ಸ್ಕಿಲ್ ಎಂಪ್ಲಾಯ್ಮೆಂಟ್ ಕಾರ್ಪೊರೇಷನ್ (Haryana Skill Employment Corporation) ಅಡಿಯಲ್ಲಿ ಸರ್ಕಾರಿ ಉದ್ಯೋಗಗಳಿಗೆ (Govt Employees) ಆಯ್ಕೆ ಆಗಿರುವಂತಹ ಅಭ್ಯರ್ಥಿಗಳಿಗೆ ಸಂಬಳದಲ್ಲಿ ಹೆಚ್ಚಳ ಮಾಡಲಾಗಿದೆ ಎನ್ನುವಂತಹ ಅಧಿಕೃತ ಮಾಹಿತಿ ತಿಳಿದು ಬಂದಿದ್ದು ಮುಖ್ಯಮಂತ್ರಿಗಳಿಂದ ಜಾರಿಯಾಗಿರುವಂತಹ ಈ ನಿಯಮ ಜುಲೈ ಒಂದರಿಂದಲೇ ಜಾರಿಗೆ ಬರಲಿದೆ ಎನ್ನುವುದಾಗಿ ಕೂಡ ತಿಳಿದುಬಂದಿದೆ.

ಮುಖ್ಯಮಂತ್ರಿಗಳ ಹೇಳಿಕೆಯ ಆಧಾರದ ಮೇರೆಗೆ ಕಾರ್ಪೊರೇಷನ್ ಸರ್ಕಾರಿ ಇಲಾಖೆಯ ಉದ್ಯೋಗಿಗಳಿಗೆ (Govt Employees) ಎಂಟು ಪ್ರತಿಶತ ಸಂಬಳದಲ್ಲಿ ಹೆಚ್ಚಳ ಮಾಡಿದೆ ಎಂಬುದಾಗಿ ತಿಳಿದು ಬಂದಿದ್ದು ಈ ನಿಯಮವನ್ನ ಜುಲೈ 1 ರಿಂದಲೇ ಜಾರಿಗೆ ತರಲಾಗುತ್ತಿದ್ದು ಒಂದನೇ ದಿನಾಂಕದಿಂದಲೇ ಪ್ರತಿಯೊಬ್ಬರ ಸಂಬಳದಲ್ಲಿ ಹೆಚ್ಚಳ ಕಂಡು ಬರ್ತಾ ಇದ್ದು ಹರಿಯಾಣ ರಾಜ್ಯ ಸರ್ಕಾರದ ಸ್ಕಿಲ್ ಎಂಪ್ಲಾಯ್ಮೆಂಟ್ ಕಾರ್ಪೊರೇಷನ್ ಅಡಿಯಲ್ಲಿ ಭರ್ತಿಯಾಗಿರುವಂತಹ ಉದ್ಯೋಗಿಗಳಿಗೆ ಇದು ಗುಡ್ ನ್ಯೂಸ್ ಎಂದು ಹೇಳಬಹುದಾಗಿದೆ.

 

Image Source: The Economic Times

 

ಹರಿಯಾಣ ಸ್ಕಿಲ್ ಎಂಪ್ಲಾಯ್ಮೆಂಟ್ ಕಾರ್ಪೊರೇಷನ್ (Haryana Skill Employment Corporation) ಅಡಿಯಲ್ಲಿ ರಾಜ್ಯ ಸರ್ಕಾರದ ಬೇರೆ ಬೇರೆ ವಿಭಾಗಗಳಲ್ಲಿ ಕಾಂಟ್ರಾಕ್ಟ್ ಹಾಗೂ ಡಿಸಿ ರೇಟ್ ವಿಭಾಗದಲ್ಲಿ ಉದ್ಯೋಗಿಗಳನ್ನ ಆಯ್ಕೆ ಮಾಡಲಾಗಿದೆ. ಕೌಶಲ್ ರೋಜ್ಗಾರ್ ಲಿಮಿಟೆಡ್ ಕಂಪನಿ ಆಕ್ಟ್ 13ರ ಪ್ರಕಾರ ಈ ಸಂಸ್ಥೆನ ಪ್ರಾರಂಭ ಮಾಡಲಾಗಿತ್ತು ಹಾಗೂ ಇದರ ಅಡಿಯಲ್ಲಿ ಪಾರದರ್ಶಕವಾಗಿ ಹರಿಯಾಣ ರಾಜ್ಯ ಸರ್ಕಾರದ ಬೇರೆ ಬೇರೆ ವಿಭಾಗಗಳಲ್ಲಿ ಕಾಂಟ್ರಾಕ್ಟ್ ಅಡಿಯಲ್ಲಿ ಬೇರೆ ಬೇರೆ ಉದ್ಯೋಗಿಗಳನ್ನು ಆಯ್ಕೆ ಮಾಡುವಂತಹ ಪ್ರಕ್ರಿಯೆ ನಡೆದಿತ್ತು.

ಈ ಸಂಸ್ಥೆ ಹರಿಯಾಣ ರಾಜ್ಯ ಸರ್ಕಾರಕ್ಕೆ ಬೇಕಾಗಿರುವಂತಹ ಬೇರೆ ಬೇರೆ ಕ್ಷೇತ್ರಗಳ ಸಂಸ್ಥೆಗಳಿಗೆ ಬೇಕಾಗಿರುವಂತಹ ಉದ್ಯೋಗಿಗಳನ್ನ ಒದಗಿಸುವಂತಹ ಅಧಿಕೃತ ಹಾಗೂ ಪ್ರಮಾಣಿಕೃತ ಸಂಸ್ಥೆ ಆಗಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಕೂಡ ಮುಂದಿನ ದಿನಗಳಲ್ಲಿ ಈ ರೀತಿಯ ಸಂಸ್ಥೆಗಳು ನಿರ್ಮಾಣವಾಗಿ ನಮ್ಮ ರಾಜ್ಯ ಸರ್ಕಾರದ ಬೇರೆ ಬೇರೆ ನಿಗಮಗಳಿಗೆ ಬೇಕಾಗಿರುವಂತಹ ಉದ್ಯೋಗಿಗಳನ್ನ ಒದಗಿಸುವಂತಹ ಕೆಲಸ ಮಾಡಬಹುದಾಗಿದೆ ಎಂದು ಕೂಡ ನಾವು ಈ ಮೂಲಕ ತಿಳಿದುಕೊಳ್ಳಬಹುದು.

advertisement

Leave A Reply

Your email address will not be published.