Karnataka Times
Trending Stories, Viral News, Gossips & Everything in Kannada

RTC: ಜಮೀನಿಗೆ RTC ಲಿಂಕ್ ಮಾಡುವ ಕಾರ್ಯದಲ್ಲಿ ನಿಯಮ ಬದಲಿಸಿದ ಸರ್ಕಾರ! ಇಲ್ಲಿದೆ ಹೊಸ ಘೋಷಣೆ

advertisement

ಕಷ್ಟ ಪಟ್ಟು ಶ್ರಮವಹಿಸಿ ಕೆಲಸ ಮಾಡುವ ರೈತರಿಗೆ ಸರಕಾರ ಎಷ್ಟು ಸೌಲಭ್ಯ ನೀಡಿದರು ಅದು ಕಮ್ಮಿ ಎಂದೆ ಹೇಳಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಸುಳ್ಳು ದಾಖಲಾತಿಗಳನ್ನು ನೀಡಿ ಸರಕಾರದ ಹೊಸ ಹೊಸ ಯೋಜನೆ ಫಲಾನುಭವಿಗಳಾಗುವುದು, ಸರಕಾರದಿಂದ ಕಡಿಮೆ ಬಡ್ಡಿದರಕ್ಕೆ ಸಾಲ, ಸಬ್ಸಿಡಿ ಪಡೆಯುವ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿರುವ ಕಾರಣ ಇಂತಹ ವ್ಯವಸ್ಥೆ ತಡೆಗಟ್ಟುವ ನೆಲೆಯಲ್ಲಿ ರಾಜ್ಯ ಸರಕಾರವು ಆಧಾರ್ ಕಾರ್ಡ್ (Aadhaar Card) ಹಾಗೂ ಪಹಣಿ (Pahani) ಜೋಡಣೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಹಾಗಾಗಿ ಇನ್ನು ಮುಂದೆ ಎಲ್ಲ ರೈತರು ಕೂಡ ಸರಕಾರದ ಈ ಹೊಸ ನಿಯಮ ಪಾಲನೇ ಮಾಡಲೇ ಬೇಕಿದೆ.

WhatsApp Join Now
Telegram Join Now

ಉದ್ದೇಶ ಏನು?

 

Image Source: Agri Farming

 

ಪಹಣಿ (Pahani) ಪತ್ರದ ಮೂಲಕ ಅಕ್ರಮ ಭೂ ಹಿಡುವಳಿ ತಿಳಿಯುವ ಜೊತೆಗೆ ಸರಕಾರದ ಜಾಗಕ್ಕೆ ಸಂಬಂಧ ಪಟ್ಟಂತೆ ಗಡಿ ಇಂಚು ತಿಳಿಯಲಾಗುವುದು. ಭೂಮಿಯ ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸಿ ಸಂಪೂರ್ಣ ಸುರಕ್ಷಿತವಾಗಿರುವಂತೆ ಮಾಡಲು ಈ ವ್ಯವಸ್ಥೆ ಬಹಳ ಅನುಕೂಲ ಆಗಲಿದೆ. ಹಾಗಾಗಿ ಬಹುತೇಕ ಎಲ್ಲ ರೈತರ ಬಳಿ ಆಧಾರ್ ಕಾರ್ಡ್ ಇರುವ ಕಾರಣಕ್ಕೆ ಅಂತಹ ರೈತರು ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರವನ್ನು ಲಿಂಕ್ ಮಾಡಿ ಕೊಂಡರೆ ಬಹಳ ಅನುಕೂಲ ಆಗಲಿದೆ.

ಅನುಕೂಲತೆ ಏನು?

  • ಪಹಣಿಗಳು ಡಿಜಿಟಲ್ ರೂಪದಲ್ಲಿ ಲಭ್ಯ ಆಗುವ ಕಾರಣ ಹೆಚ್ಚು ಸುರಕ್ಷಿತವಾಗಿ ಇರಲಿದೆ.ಹಾಗಾಗಿ ಆನ್ಲೈನ್ ಮೂಲಕ ಸುಲಭಾವಾಗಿ ಭೂ ದಾಖಲೆ ಪಡೆಯಬಹುದು.
  • ಭೂಮಿಯು ಅಕ್ರಮವಾಗಿ ವಶ ಪಡಿಸಿಕೊಂಡಿದ್ದು ಮತ್ತು ಜಮೀನು ,ತೋಟ ಹಾಗೂ ಆಸ್ತಿಗಳು ಹೇರಳವಾಗಿದ್ದು ಕಡಿಮೆ ಟ್ಯಾಕ್ಸ್ ಪೇ ಮಾಡುವವರ ಪತ್ತೆ ಮಾಡಲಾಗುವುದು.
  • ಒಬ್ಬ ವ್ಯಕ್ತಿ ಎಷ್ಟು ಆಸ್ತಿ ಗಳಿಕೆ ಮಾಡಿದ್ದಾನೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.
  • ಭೂಮಿ ಮಾರುವಾಗ ಅಥವಾ ಕೊಳ್ಳುವಾಗ ಪಾರದರ್ಶಕತೆ ಇರಲಿದೆ.
  • ಭೂ ಸಂಬಂಧ ವ್ಯಜ್ಯಗಳಿಗೆ ಪರಿಹರ ಮಾಡುವಾಗ ಆಧಾರ್ ಹಾಗೂ ಪಹಣಿ ಲಿಂಕ್ ಇದ್ದರೆ ಬಹಳ ಅನುಕೂಲಕರವಾಗಲಿದೆ.
  • ಅರ್ಹ ರೈತರಿಗೆ ಮಾತ್ರವೇ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಯೋಜನೆಯ ಫಲಾನುಭವಿಗಳಾಗಲು ಅವಕಾಶ ಸಿಗುವ ಜೊತೆಗೆ ಸುಳ್ಳು ದಾಖಲಾತಿ ನೀಡಿದವರ ಪತ್ತೆ ಕೂಡ ಮಾಡಬಹುದು.
  • ಆಧಾರ್ ಹಾಗೂ ಪಹಣಿ ಲಿಂಕ್ ಮಾಡಿದ್ದ ಬಳಿಕ ಯಾವುದೆ ಸರಕಾರಿ ಯೋಜನೆಗೆ ಪಹಣಿ ಪತ್ರ ನೀಡುವ ಅಗತ್ಯವಿರಲಾರದು.

advertisement

ಲಿಂಕ್ ಮಾಡದಿದ್ದರೆ ಏನಾಗಲಿದೆ?

 

 

ರಾಜ್ಯ ಸರಕಾರದ ಪ್ರಕಾರ ಆಧಾರ್ ಕಾರ್ಡ್ (Aadhaar Card) ಹಾಗೂ ಪಹಣಿ (RTC) ಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಈ ವಿಚಾರ ತಿಳಿದು ಕೂಡ ಲಿಂಕ್ ಮಾಡದಿದ್ದರೆ ಸರಕಾರ ರೈತರಿಗಾಗಿ ನೀಡುವ ಬೆಳೆ ವಿಮೆ ಯೋಜನೆ (Crop Insurance Scheme), ಕಿಸಾನ್ ಯೋಜನೆ (Kisan Yojana) ಇತರ ಕಡಿಮೆ ಬಡ್ಡಿದರ ಹಾಗೂ ಬಡ್ಡಿರಹಿತ ಸಾಲ, ಸಬ್ಸಿಡಿ ಇತರ ಪರಿಕರಗಳ ವಿತರಣೆ ಯೋಜನೆ ಇವ್ಯಾವುದರ ಫಲಾನುಭವಿಗಳಾಗಲು ಸಾಧ್ಯವಿಲ್ಲ. ಆಧಾರ್ ಹಾಗೂ ಪಹಣಿ ಲಿಂಕ್ ಮಾಡದೆ ಇರುವ ರೈತರು ಅನರ್ಹರಾಗಲಿದ್ದಾರೆ ಎನ್ನಬಹುದು.

ಇಲ್ಲಿದೆ ಸರಳ ಕ್ರಮ:

ಆಧಾರ್ ಕಾರ್ಡ್, ಪಹಣಿ ಪತ್ರ (ಮೂಲ ಹಾಗೂ ಜೆರಾಕ್ಸ್) ಆಧಾರ್ ಲಿಂಕ್ ಇದ್ದ ಮೊಬೈಲ್ ಸಂಖ್ಯೆ ಹಾಗೂ ಪಾಸ್ ಪೋರ್ಟ್ ಫೋಟೋ ಸಮೇತ ಆಧಾರ್ ಹಾಗೂ ಪಹಣಿಯನ್ನು ಲಿಂಕ್ ಮಾಡಬಹುದು. ಆನ್ಲೈನ್ ಮೂಲಕ ನೋಂದಣಿ ಮಾಡಲು https://landrecords.karnataka.gov.in/ ವೆಬ್‌ಸೈಟ್‌ ಗೆ ಭೇಟಿ ನೀಡಿ ನಿಮ್ಮ ಆಧಾರ್ ಹಾಗೂ ಪಹಣಿ ಸ್ಕ್ಯಾನ್ ಮಾಡಿ ಅದರ ಜೊತೆಗೆ ಅಪ್ಲೋಡ್ ಮಾಡಿದರೆ ಮೊಬೈಲ್ ಒಟಿಪಿ ಬರಲಿದೆ ಈ ಮೂಲಕ ಲಿಂಕ್ ಕೂಡ ಆಗಲಿದೆ.

ಆಫ್ಲೈನ್ ಮೂಲಕವಾದರೆ ಹತ್ತಿರದ ಗ್ರಾಮ ಪಂಚಾಯತ್ ನಲ್ಲಿ ಆಧಾರ್ ಹಾಗೂ ಪಹಣಿ ಲಿಂಕ್ (Pahani Link) ಗಾಗಿ ಅರ್ಜಿ ಸಲ್ಲಿಸುವುದಾಗಿ ಹೇಳಿದರೆ ಸುಲಭಕ್ಕೆ ಅರ್ಜಿ ಸಲ್ಲಿಕೆ ಮೂಲಕ ಲಿಂಕ್ ಮಾಡಬಹುದು. ಹೀಗೆ ಲಿಂಕ್ ಮಾಡಲಿ ನಿಗಧಿತ ಶುಲ್ಕ ಇದ್ದು ಅದನ್ನು ಕಟ್ಟಬೇಕು. ಹೀಗೆ ಲಿಂಕ್ ಮಾಡಿದ್ದ ರೈತರು ಮಾತ್ರವೇ ಇನ್ನು ಮುಂದೆ ಸರಕಾರಿ ಸೌಲಭ್ಯಕ್ಕೆ ಕೂಡ ಅರ್ಹರಾಗಲಿದ್ದಾರೆ.

advertisement

Leave A Reply

Your email address will not be published.