Karnataka Times
Trending Stories, Viral News, Gossips & Everything in Kannada

Gruha Lakshmi scheme: 9ನೇ ಕಂತಿನವರೆಗೆ ಸರಿಯಾಗಿ ಗೃಹಲಕ್ಷ್ಮಿ ಹಣ ಬಂದವರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಸೂಚನೆ

advertisement

ಕರ್ನಾಟಕ ಸರ್ಕಾರ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡುವ ಉದ್ದೇಶದಿಂದ ಸರ್ಕಾರ ರಚನೆಯಾದ ಕೂಡಲೇ ಗೃಹಲಕ್ಷ್ಮಿ ಯೋಜನೆಯನ್ನು(Gruha Lakshmi scheme) ಜಾರಿಗೊಳಿಸಿದ್ದು ಈ ಯೋಜನೆ ಅಡಿ ಮನೆಯ ಮುಖ್ಯಸ್ಥ ಯಜಮಾನಿಗೆ ಸರ್ಕಾರದ ವತಿಯಿಂದ ಪ್ರತಿ ತಿಂಗಳು 2000 ಹಣ ಜಮೆ ಆಗಲಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಯಾವೆಲ್ಲ ಮಹಿಳೆಯರು 2 ಸಾವಿರಾರು ರೂಪಾಯಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೋ ಅವರೆಲ್ಲರಿಗೂ ಈಗಾಗಲೇ 9ನೇ ಕಂತಿನ ಹಣವನ್ನು ಜಮೆ ಮಾಡಲಾಗಿದೆ.ಮುಂದಿನ10, 11 &12ನೇ ಕಂತಿನ ಹಣವನ್ನು ಸರ್ಕಾರ ಈಗಾಗಲೇ ಹಣ ಬಿಡುಗಡೆ ಮಾಡಿಯಾಗಿದೆ ಎಂದಿದ್ದಾರೆ  ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar).

WhatsApp Join Now
Telegram Join Now

ಗೃಹಲಕ್ಷ್ಮಿ ಯೋಜನೆಯ ಅರ್ಹತೆ

ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು(Griha Lakshmi Yojana facility) ಪಡೆದುಕೊಳ್ಳಲು ಮಹಿಳೆಯರು ಅಂತ್ಯೋದಯ ಅಥವಾ ಬಿಪಿಎಲ್ ಕಾರ್ಡನ್ನು ಹೊಂದಿರುವ ಕುಟುಂಬಗಳಿಗೆ ಸೇರಬೇಕು.ಪಡಿತರ ಚೀಟಿಯಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯು ಪ್ರಮುಖ ಮುಖ್ಯಸ್ಥರಾಗಿರಬೇಕು, ಪಡಿತರ ಚೀಟಿಯಲ್ಲಿ ಕುಟುಂಬದ ಬೇರೆ ವ್ಯಕ್ತಿ ಮುಖ್ಯಸ್ಥನಾಗಿದ್ದರೆ ಅದನ್ನು ಸುಲಭವಾಗಿ ಬದಲಿಸಿ ಕೊಂಡು ಯೋಜನೆಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು.GRUHA LAKSHMI 12TH INSTALLMENT AMOUNT

  • ಒಂದು ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯ.
  • ತೆರಿಗೆಯನ್ನು ಪಾವತಿಸುತ್ತಿರುವ(Tax Payers) ಮಹಿಳೆಯರು ಯೋಜನೆಗೆ ಅರ್ಹರಲ್ಲ.
  • ಮಹಿಳಾ ಸರ್ಕಾರಿ ನೌಕರರಿಗೆ ಯೋಜನೆಯ ಪ್ರಯೋಜನ ಬರುವುದಿಲ್ಲ.
  • ನಿಮ್ಮ ಪತಿ ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದಾರೆ ಅಥವಾ ಜಿಎಸ್ಟಿ ರಿಟರ್ನ್ಸ್ ಸಲ್ಲಿಸುತ್ತಿದ್ದಾರೆ ಅಂತಹ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗುವುದಿಲ್ಲ.

advertisement

ಮುಂದಿನ ಕಂತಿನ ಹಣದ ಕುರಿತು ಲಕ್ಷ್ಮಿ ಹೆಬ್ಬಾಳ್ಕರ್ ಸೂಚನೆ!

ಜುಲೈ 19ರಂದು ಪ್ರಾರಂಭಿಸಲಾದ ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರಗಳ ಅಚ್ಚುಕಟ್ಟಾಗಿ ಮುಂದುವರೆಸಿಕೊಂಡು ಬಂದಿದೆ. ಪ್ರತಿ ತಿಂಗಳು ತಪ್ಪದೇ ಯೋಜನೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೂ ಎರಡು ಸಾವಿರ ರೂಪಾಯಿ ಹಣವನ್ನು ಡಿಪಿಟಿ ಮೂಲಕ ಜಮೆ ಮಾಡುತ್ತಿದೆ. ಇನ್ನೇನು ಒಂದು ವರ್ಷಗಳ ಗಡಿಯನ್ನು ಮುಟ್ಟಲ್ಲಿರುವ ಗೃಹಲಕ್ಷ್ಮಿ ಯೋಜನೆಯಡಿ ಎಲ್ಲಾ ಕಂತಿನ ಹಣವನ್ನು ಸರ್ಕಾರ ಮಹಿಳೆಯರ ಖಾತೆಗೆ ಜಮಾ ಮಾಡಿದ್ದಾರೆ. 9ನೇ ಕಂತಿನ ಹಣವನ್ನು ಪಡೆದುಕೊಂಡಿರುವ ಮಹಿಳೆಯರು, 10 11 ಮತ್ತು 12ನೇ ಕಂತಿನ ಹಣವನ್ನು ಪಡೆದುಕೊಳ್ಳುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದು, ಅಂತವರಿಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು- ತಮ್ಮ ಕೆ ವೈ ಸಿ ಯನ್ನು ಅಪ್ಡೇಟ್ ಮಾಡಿಸಿ ಮರು ಅರ್ಜಿ ಸಲ್ಲಿಸಿದರೆ ಇನ್ನುಳಿದ ಕಂತಿನ ಹಣ ಜಮೆಯಾಗಲಿದೆ ಎಂಬ ಸೂಚನೆ ನೀಡಿದ್ದಾರೆ.

Gruha Lakshmi Scheme
Image Source: The New Indian Express

KYC ಅಪ್ಡೇಟ್ ಮಾಡಿಸಿಕೊಳ್ಳುವುದು ಹೇಗೆ?

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಹಿಳೆಯರ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದ್ದು, ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೊತೆಗೆ ರೇಷನ್ ಕಾರ್ಡ್ನಲ್ಲಿರುವ(ration card) ಮಾಹಿತಿ ಹೊಂದಾಣಿಕೆ ಹೋದರೆ ಅಂತವರ ಅರ್ಜಿಯನ್ನು ಸರ್ಕಾರ ರದ್ದು ಮಾಡುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಇಲಾಖೆ ಭೇಟಿ ನೀಡಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಂಡು e KYCಯನ್ನು ಅಪ್ಡೇಟ್(e-KYC Update) ಮಾಡಿಸಿದ ಬಳಿಕ ಮರು ಅರ್ಜಿ ಸಲ್ಲಿಸಿದರೆ 10, 11 ಮತ್ತು 12ನೇ ಕಂತಿನ 6,000 ಹಣವು ನಿಮ್ಮ ಖಾತೆಗೆ ಜಮೆಯಾಗಲಿದೆ.

advertisement

Leave A Reply

Your email address will not be published.