Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಯೋಜನೆಯ 6 ಕಂತಿನ ಹಣಕ್ಕೆ 4 ಹೊಸ ರೂಲ್ಸ್, ಈ ಕೆಲಸ ಕಡ್ಡಾಯ!

advertisement

ಗೃಹಲಕ್ಷ್ಮೀ ಯೋಜನೆ (Gruha Lakshmi) ಈಗಾಗಲೆ ಯಶಸ್ವಿಯಾಗಿ ಜಾರಿಯಾಗಿ ಮುನ್ನುಗ್ಗುತ್ತಿದೆ.ಲಕ್ಷಾಂತರ ಮನೆ ಯಜಮಾನಿಯರ ಅಕೌಂಟ್‌ಗೆ ಮೊದಲ ಐದು ಕಂತಿನ 2 ಸಾವಿರ ರುಪಾಯಿ ಪಾವತಿಯಾಗಿದೆ. ಇನ್ನೂ ಲಕ್ಷಾಂತರ ಜನ ತಾಂತ್ರಿಕ ದೋಷಗಳಿಂದಾಗಿ ಯೋಜನೆಯಿಂದ ವಂಚಿತರಾಗಿದ್ದು, ಎಲ್ಲರಿಗೂ ಹಣ ಸಿಗುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಭರವಸೆ ನೀಡಿದ್ದಾರೆ. ಅದರ ಬೆನ್ನಲ್ಲೇ ಹೊಸ ನಾಲ್ಕು ನಿಯಮಗಳನ್ನು ಕೂಡ ವಿಧಿಸಿದ್ದು ಅವು ಯಾವುವೆಂದು ತಿಳಿದು ಕೊಳ್ಳೋಣ ಬನ್ನಿ.

E -KYC ಕಡ್ಡಾಯವಾಗಿ ಮಾಡಿರಬೇಕು:

ಈಗಾಗಲೆ ಮಾಡಿಸಿದ್ದರೆ ತೊಂದರೆಯಿಲ್ಲ ಇಲ್ಲವಾದರೆ KYC ಯನ್ನು ಮಾಡಿಸಲು ನೀವು ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರ ಅಥವಾ ಗ್ರಾಮವನ್ನು ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿ ಗೃಹಲಕ್ಷ್ಮಿ (Gruha Lakshmi) ಕೆವೈಸಿ ಮಾಡಿಸಿ. ಹಾಗೂ ನಿಮ್ಮ ಗ್ರಾಮ ಪಂಚಾಯಿತಿಯನ್ನು ಕೂಡ ಸಂಪರ್ಕಿಸಿ ಅಲ್ಲಿ ನಿಮಗೆ ಕೆವೈಸಿಯನ್ನು ಮಾಡಿಕೊಳ್ಳಲಾಗುತ್ತದೆ. ನೀವು ಕೆವೈಸಿ ಮಾಡಿಸಿ. ನಿಮಗೆ ಪಕ್ಕ ಗೃಹಲಕ್ಷ್ಮಿ ಹಣ ದೊರಕುತ್ತದೆ.

NPCI Mapping ಮಾಡಿಸಬೇಕು:

 

 

advertisement

ಎಲ್ಲ ಫಲಾನುಭವಿಗಳು NPCI Mapping ಮಾಡಿಸಬೇಕಾಗಿಲ್ಲ. ಒಂದರಿಂದ ಐದನೇ ಕಂತಿನ ವರೆಗೆ ಯಾರಿಗೆ ಒಂದು ಕಂತಿನ ಹಣವೂ ಜಮಾ ಆಗದೆ ಇದ್ದಲ್ಲಿ ಅಂತವರು NPCI ಮ್ಯಾಪಿಂಗ್ ಮಾಡಿಸಬೇಕು. ಒಂದು ಕಂತಿನ ಹಣ ಜಮಾ ಆದರೂ ಸಹ ನೀವು NPCI ಮ್ಯಾಪಿಂಗ್ ಮಾಡಿಸಬೇಕಾಗಿಲ್ಲ.ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಿ ನೀವು NPCI ಮ್ಯಾಪಿಂಗ್ ಮಾಡಿಸಬಹುದು ಇಲ್ಲವೇ ನಿಮ್ಮ ಹತ್ತಿರದ ಇ-ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನೀವು NPCI ಮ್ಯಾಪಿಂಗ್ ಮಾಡಿಸಬಹುದು. ಒಮ್ಮೆ NPCI ಮ್ಯಾಪಿಂಗ್ ಮಾಡಿಸಿದರೆ ನಿಮಗೆ ಒಟ್ಟಿಗೆ 6 ಕಂತಿನ ಹಣವೂ ನಿಮಗೆ ಜಮಾ ಆಗುತ್ತದೆ.

ನಿಮ್ಮ ಅಕೌಂಟ್ ಸಮಸ್ಯೆ ಇದ್ದಲ್ಲಿ ಬೇರೆ ಅಕೌಂಟ್:

ಮನೆಯ ಯಜಮಾನರ ಹೆಸರು ಪಡಿತರ ಚೀಟಿಯಲ್ಲಿಇದ್ದ ಕಾರಣ ಕೆಲವರ ನೋಂದಣಿಗೆ ಹಿನ್ನೆಡೆಯಾಗಿದೆ. ಈಗ ಸರಕಾರ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿರುವುದರಿಂದ ಮನೆಯ ಯಜಮಾನನ ಹೆಸರನ್ನು ತೆಗೆದು ಒಡತಿಯ ಹೆಸರನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಇದರಿಂದ ಮುಂದಿನ ತಿಂಗಳು ಫಲಾನುಭವಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಖಾತೆಯಲ್ಲಿ ಸಮಸ್ಯೆ ಇದ್ದರೆ ಪತಿಯ ಖಾತೆ ಅಪ್ಡೇಟ್ ಮಾಡಬಹುದಾಗಿದೆ.

ಸ್ಟೇಟಸ್ ಸಮಸ್ಯೆ ಇದ್ದಲ್ಲಿ ಪರಿಹರಿಸಿಕೊಳ್ಳಿ:

ಹೌದು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಆಯ್ಕೆಯಾಗಿರುವ ಹೆಚ್ಚಿನ ಜನರಿಗೆ ಇನ್ನು ಕೂಡ ಹಣ ತಲುಪಿಲ್ಲ. ಇದರಲ್ಲಿ ತಾಂತ್ರಿಕ ತೊಂದರೆ ಕೂಡ ಇದೆ ಎನ್ನಲಾಗಿದೆ. ಅಲ್ಲದೆ ಫಲಾನುಭವಿಗಳು ನೀಡಿರುವ ಬ್ಯಾಂಕ್‌ ಖಾತೆಗಳಲ್ಲಿ ಕೆಲವು ನಿಷ್ಕ್ರೀಯವಾಗಿವೆ ಎಂದು ಹೇಳಲಾಗಿದೆ. ಹಾಗಾದ್ರೆ ಫಲಾನುಭವಿಗಳ ಖಾತೆಗೆ ಹಣ ತಲುಪುವುದಕ್ಕೆ ವಿಳಂಬವಾಗುತ್ತಿದೆ ಹಾಗಾಗಿ ನಿಮ್ಮ ಖಾತೆಯಲ್ಲಿ ಸ್ಟೇಟಸ್ ಸಮಸ್ಯೆ ಇದ್ದಲ್ಲಿ ಪರಿಹರಿಸಿಕೊಂಡು ಫೆಬ್ರವರಿ ಎರಡನೇ ವಾರದಲ್ಲಿ ಸಿಗುವ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮದಾಗಿಸಿಕೊಳ್ಳಿ

advertisement

Leave A Reply

Your email address will not be published.