Karnataka Times
Trending Stories, Viral News, Gossips & Everything in Kannada

ಬೆಳ್ಳಂಬೆಳಿಗ್ಗೆ ಈ ಯೋಜನೆ ರದ್ದು ಗೊಳಿಸಿದ ಕೇಂದ್ರ ಸರ್ಕಾರ! ನಿಜಕ್ಕೂ ಕಹಿಸುದ್ದಿ

advertisement

ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನರೇಂದ್ರ ಮೋದಿ (Narendra Modi) ರವರ ನೇತೃತ್ವದಲ್ಲಿ ಮೂರನೇ ಬಾರಿಗೆ ಸತತವಾಗಿ ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದುಕೊಂಡಿದೆ. ಮೋದಿದವರು ಕೂಡ ದಾಖಲೆಯ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಕೂಡ ಅಧಿಕಾರವನ್ನು ಈಗಾಗಲೇ ಸ್ವೀಕರಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದಂತಹ ಒಂದು ಯೋಜನೆ ಈಗ ಸ್ಥಗಿತಗೊಂಡಿದೆ ಎನ್ನುವಂತಹ ಮಾಹಿತಿ ಸಿಕ್ಕಿದ್ದು ಬನ್ನಿ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

ನಿಮಗೆಲ್ಲರಿಗೂ ತಿಳಿದಿರಬಹುದು ಲೋಕಸಭಾ ಚುನಾವಣೆಗೆ ಸ್ವಲ್ಪ ಸಮಯ ಹಿಂದೆ ಕೇಂದ್ರ ಸರ್ಕಾರ ಅತ್ಯಂತ ಕಡಿಮೆ ಬೆಲೆಯಲ್ಲಿ ಭಾರತ ಅಕ್ಕಿ ಯೋಜನೆ (Bharat Rice Scheme) ಯನ್ನು ಜುಲೈ ತಿಂಗಳಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಅನ್ನುವಂತಹ ಮಾಹಿತಿ ತಿಳಿದು ಬಂದಿದೆ.

 

Image Credit: Oneindia

 

advertisement

ಈ ಯೋಜನೆ (Bharat Rice Scheme) ಅಡಿಯಲ್ಲಿ ಅಕ್ಕಿ ಹಿಟ್ಟು ಹಾಗೂ ಸಾಕಷ್ಟು ಆಹಾರ ಪದಾರ್ಥಗಳನ್ನ ಅತ್ಯಂತ ಕಡಿಮೆ ಬೆಲೆಗೆ ನೀಡುವಂತಹ ಕೆಲಸವನ್ನು ಮಾಡಲಾಗುತ್ತಿತ್ತು ಅನ್ನೋದು ಕೂಡ ಈಗಾಗಲೇ ತಿಳಿದು ಬಂದಿದ್ದು ಅಕ್ಕಿಯನ್ನು ಕೇಜಿಗೆ 29, ಗೋಧಿ ಹಿಟ್ಟಿಗೆ 27.50, 60 ರೂಪಾಯಿಗಳಿಗೆ ಕಡ್ಲೆಬೇಳೆ ಹೀಗೆ ಈ ರೀತಿಯ ಪ್ರಮುಖ ಆಹಾರ ಧಾನ್ಯಗಳನ್ನು ಅತ್ಯಂತ ಕಡಿಮೆ ಬೆಲೆಗೆ ಸಾಮಾನ್ಯ ಜನರಿಗೆ ಮಾರಾಟ ಮಾಡುವಂತಹ ಕೆಲಸವನ್ನು ಮಾಡಲಾಗುತ್ತಿತ್ತು. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಇದು ಕೂಡ ಒಂದಾಗಿತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

 

Image Credit: Agro & Food Processing

 

ಕಡಿಮೆ ಆದಾಯವನ್ನು ಹೊಂದಿರುವಂತಹ ಜನಸಾಮಾನ್ಯರಿಗೆ ಭಾರತ ಸರ್ಕಾರ ಈ ಯೋಜನೆ ಅಡಿಯಲ್ಲಿ ನೀಡುತ್ತಿದ್ದಂತಹ ಇಷ್ಟೊಂದು ಕಡಿಮೆ ಬೆಲೆಯ ದಿನಸಿ ಸಾಮಾನುಗಳ ಕಾರಣದಿಂದಾಗಿ ಸಾಕಷ್ಟು ಉಳಿತಾಯ ಆಗುತ್ತಿತ್ತು ಆದರೆ ಈಗ ಈ ಯೋಜನೆಯನ್ನೇ ಸ್ಥಗಿತಗೊಳಿಸಿರುವುದು ಅವರಿಗೆ ನಿಜಕ್ಕೂ ಕೂಡ ಚಿಂತಿತರಾಗುವಂತೆ ಮಾಡಿದೆ. ಇದಕ್ಕೆ ಕಾರಣವನ್ನು ಹುಡುಕುತ್ತಾ ಹೊರಟ್ರೆ ಜೂನ್ 10ರ ವರೆಗೂ ಕೂಡ ಕೇಂದ್ರ ಸರ್ಕಾರ ಮಾಡಿರುವಂತಹ ಆದೇಶದ ಮೇರೆಗೆ ಈ ಯೋಜನೆಗೆ ಧಾನ್ಯಗಳನ್ನು ಪೂರೈಕೆ ಮಾಡಲಾಗಿತ್ತು ಎಂಬುದಾಗಿ ತಿಳಿದು ಬಂದಿದ್ದು ಅದಾದ ನಂತರ ಯಾವುದೇ ರೀತಿಯ ಸಾಮಗ್ರಿಗಳ ಪೂರೈಕೆ ಮಾಡಿಲ್ಲ ಎನ್ನುವುದಾಗಿ ತಿಳಿದು ಬಂದಿದ್ದು ಅದೇ ಕಾರಣಕ್ಕಾಗಿ ಈ ಯೋಜನೆ ಅಡಿಯಲ್ಲಿ ಆಹಾರ ಧಾನ್ಯಗಳ ವಿತರಣೆ ಮಾಡಲಾಗುತ್ತಿಲ್ಲ ಎನ್ನುವುದನ್ನು ಇಲಾಖೆಗಳು ತಿಳಿಸಿವೆ.

ಫೆಬ್ರವರಿ ತಿಂಗಳಿನಿಂದ ಪ್ರಾರಂಭವಾಗಿದ್ದಂತಹ ಯೋಜನೆಗೆ ಜನಸಾಮಾನ್ಯರಿಂದ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿತ್ತು ಎಂಬುದಾಗಿ ತಿಳಿದುಬಂದಿದೆ. ಅಕ್ಕಿ ಗೋಧಿ ಕಡ್ಲೆಬೇಳೆ ರೀತಿಯ ಪ್ರಮುಖ ಧಾನ್ಯಗಳನ್ನು ಬೇರೆ ಬೇರೆ ಕ್ಯಾಟಗರಿಯಲ್ಲಿ ಪಾಕೆಟ್ ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಗ್ರಾಹಕರ ಬೇಡಿಕೆ ಕಾರಣದಿಂದಾಗಿ ಮೊಬೈಲ್ ವ್ಯಾನ್ ಹಾಗೂ ಮಾಲ್ ಗಳಲ್ಲಿ ಕೂಡ ಈ ರೀತಿಯ ಕಡಿಮೆ ಬೆಲೆಯ ಆಹಾರ ಧಾನ್ಯಗಳನ್ನು ಮಾರಾಟ ಮಾಡುವಂತಹ ಕೆಲಸವನ್ನು ಈ ಯೋಜನೆ ಅಡಿಯಲ್ಲಿ ಮಾಡಲಾಗಿತ್ತು. ಆದರೆ ಈಗ ಪರೋಕ್ಷವಾಗಿಯೇ ಇದನ್ನ ಸ್ಥಗಿತಗೊಳಿಸಲಾಗಿದೆ ಎಂದು ಹೇಳಬಹುದಾಗಿದೆ.

advertisement

Leave A Reply

Your email address will not be published.