Karnataka Times
Trending Stories, Viral News, Gossips & Everything in Kannada

DK Suresh: ಅಧಿಕಾರ ಇಲ್ಲದಿದ್ದರೂ ರಾಜ್ಯದ ಜನತೆಗೆ ಸಿಹಿಸುದ್ದಿ ಕೊಟ್ಟ ಡಿಕೆ ಸುರೇಶ್

advertisement

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ಡಿಕೆ ಶಿವಕುಮಾರ್ (DK Shivakumar) ಅವರ ಸಹೋದರ ಆಗಿರುವಂತಹ ಡಿಕೆ ಸುರೇಶ್ ರವರು ಡಾಕ್ಟರ್ ಮಂಜುನಾಥ್ ರವರ ವಿರುದ್ಧ ಸೋಲನ್ನು ಅನುಭವಿಸಿದ್ದಾರೆ. ಸೋಲೇ ಕಾಣದ ಸರದಾರನ ರೀತಿಯಲ್ಲಿ ಮೆರೆದಿದ್ದ ಡಿಕೆ ಸುರೇಶ್ (DK Suresh) ರವರು ದೊಡ್ಡ ಅಂತರದ ಸೋಲಿನಿಂದ ಸಾಕಷ್ಟು ಜನರು ಅವರ ರಾಜಕೀಯ ಕರಿಯರ್ ಮುಗಿದು ಹೋಯಿತು ಎನ್ನುವ ರೀತಿಯಲ್ಲಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಂಡಿದ್ದರು. ಸೋತರು ಕೂಡ ಜನರ ಸೇವೆಯನ್ನು ಮಾಡುತ್ತೇನೆ ಎನ್ನುವುದಾಗಿ ಡಿಕೆ ಸುರೇಶ್ ರವರು ಕಂಕಣ ಬದ್ಧರಾಗಿದ್ದಾರೆ ಎಂದು ಹೇಳಬಹುದಾಗಿದೆ.

WhatsApp Join Now
Telegram Join Now

ಅದರಲ್ಲೂ ವಿಶೇಷವಾಗಿ ಇತ್ತೀಚಿಗಷ್ಟೇ ಅವರು ನಡೆದುಕೊಂಡಿರುವಂತಹ ರೀತಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಬಹುದಾಗಿದೆ. ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಖಾತೆ ಸಚಿವರಾಗಿರುವಂತಹ ವಿ ಸೋಮಣ್ಣ ಅವರಿಗೆ ಡಿಕೆ ಸುರೇಶ (DK Suresh) ರವರು ರಾಜ್ಯದಲ್ಲಿ ಬಾಕಿ ಇರುವಂತಹ ರೈಲ್ವೆ ಹಾಗೂ ಜಲಜೀವನ್ ಮಿಷನ್ ಯೋಜನೆಗಳನ್ನ ಆದಷ್ಟು ಬೇಗ ಪೂರ್ತಿ ಗೊಳಿಸುವಂತೆ ಮನವಿ ಮಾಡಿ ಬಂದಿದ್ದಾರೆ.

 

Image Credit: Business Standard

 

advertisement

ಅಧಿಕಾರ ಇಲ್ಲದೆ ಇದ್ದರೂ ಕೂಡ ಹೋಗಿ ತನ್ನ ಕ್ಷೇತ್ರದ ಜನರಿಗೆ ಇನ್ನಷ್ಟು ಉಪಯೋಗ ಆಗಲಿ ಎನ್ನುವ ಕಾರಣಕ್ಕಾಗಿ ಡಿಕೆ ಸುರೇಶ್ ರವರು ಬೇಡಿಕೆಯನ್ನು ಇಟ್ಟು ಬಂದಿದ್ದು ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದೆ ಎಂಬುದಾಗಿ ಸೋಶಿಯಲ್ ಮೀಡಿಯಾ ದಲ್ಲಿ ಮಾತುಕತೆಗಳು ಹೆಚ್ಚಾಗಿದೆ.

ಡಿಕೆ ಸುರೇಶ್ (DK Suresh) ರವರು ಸೋಮಣ್ಣ ಅವರಿಗೆ ಸಲ್ಲಿಸಿರುವಂತಹ ಮನವಿ ಅಡಿಯಲ್ಲಿ ಕನಕಪುರ ಹೆಜ್ಜಲ ಹಾಗೂ ಚಾಮರಾಜನಗರ ಸ್ಥಳದಲ್ಲಿ ಹೊಸ ರೈಲ್ವೆ ಮಾರ್ಗಕ್ಕೆ ಈಗಾಗಲೇ ಮಂಜೂರು ಆಗಿ ಟೆಂಡರ್ ಪ್ರೊಸೆಸ್ ಪೂರ್ತಿಯಾಗಿದ್ದರೂ ಕೂಡ ಇನ್ನೂ ಕಾಮಗಾರಿ ಆಗಿಲ್ಲ ಎನ್ನುವಂತಹ ವಿಚಾರದ ಬಗ್ಗೆ ದೂರನ್ನು ಸಲ್ಲಿಸಿದ್ದಾರೆ ಹಾಗೂ ಆದಷ್ಟು ಬೇಗ ಈ ಪ್ರಕ್ರಿಯೆಗಳನ್ನು ಮುಗಿಸಿಕೊಡುವಂತೆ ಕೇಂದ್ರ ಸಚಿವರಲ್ಲಿ ಬೇಡಿಕೆ ಇಟ್ಟಿದ್ದಾರೆ. ಇದೇ ರೀತಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ರೈಲ್ವೆ ಕಾಮಗಾರಿಗಳು ಯಾವುದೇ ರೆಸ್ಪಾನ್ಸ್ ಪಡೆಯದೆ ನೆನೆಗುದಿಗೆ ಬಿದ್ದಿವೆ ಆದಷ್ಟು ಅವುಗಳನ್ನು ಮಾಡಿಸಿಕೊಡಿ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಅವರು ಕೋರಿಕೆ ಇಟ್ಟಿದ್ದಾರೆ.

 

Image Credit: Star of Mysore

 

ಕೇವಲ ಇಷ್ಟು ಮಾತ್ರವಲ್ಲದೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಕೂಡ ಕಳೆದ ಆರು ತಿಂಗಳಿಂದ ಯಾವುದೇ ರೀತಿಯ ಪ್ರಗತಿ ಕಂಡುಬಂದಿಲ್ಲ ಹಾಗೂ ಅದನ್ನ ಆದಷ್ಟು ಬೇಗ ಪರಿಹರಿಸಿ ಕೊಡಿ ಎನ್ನುವುದಾಗಿ ಕೂಡ ಕೇಂದ್ರ ಸಚಿವರಾಗಿರುವಂತಹ ವಿ ಸೋಮಣ್ಣ (V Somanna) ಅವರ ಬಳಿ ಡಿಕೆ ಸುರೇಶ್ (DK Suresh) ರವರು ಮನವಿ ಇಟ್ಟಿದ್ದಾರೆ.

advertisement

Leave A Reply

Your email address will not be published.