Karnataka Times
Trending Stories, Viral News, Gossips & Everything in Kannada

Ration Card: ಇದುವರೆಗೂ ರೇಷನ್ ಕಾರ್ಡ್ ಗೆ ಅರ್ಜಿ ಹಾಕದವರಿಗೆ ಗುಡ್ ನ್ಯೂಸ್! ಬದಲಾಯ್ತು ನಿಯಮ

advertisement

ಕಳೆದ ಒಂದುವರೆ ವರ್ಷಗಳಿಂದಲೂ ಕೂಡ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಯಾವುದೇ ರೀತಿಯ ರೇಷನ್ ಕಾರ್ಡ್ (Ration Card) ಗಳ ವಿಚಾರಣೆ ರಾಜ್ಯದಲ್ಲಿ ನಡೆದಿಲ್ಲ ಅನ್ನೋದು ಸಾಕಷ್ಟು ಜನರಲ್ಲಿ ಅಸಮಾಧಾನವನ್ನು ಹಾಗೂ ಬೇಸರವನ್ನು ಮೂಡಿಸಿದೆ ಎಂದು ಹೇಳಬಹುದಾಗಿದೆ. ನೀನು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಹ ಕೆಲಸವನ್ನು ಕೂಡ ಮಾಡಲು ಸಾಧ್ಯವಾಗ್ತಾ ಇಲ್ಲ. ಆದರೆ ಈಗ ರೇಷನ್ ಕಾರ್ಡ್ (Ration Card) ವಿಚಾರದಲ್ಲಿ ಒಂದು ಹೊಸ ಅಪ್ಡೇಟ್ ಸಿಕ್ಕಿದ್ದು ಪ್ರತಿಯೊಬ್ಬರೂ ಕೂಡ ಖುಷಿ ಪಡುವಂತಹ ವಿಚಾರ ಎಂದು ಹೇಳಬಹುದಾಗಿದೆ.

WhatsApp Join Now
Telegram Join Now

ರೇಷನ್ ಕಾರ್ಡ್ ವಿಚಾರದಲ್ಲಿ ರಾಜ್ಯವೇ ಖುಷಿ ಪಡುವಂತಹ ವಿಚಾರ ಹೇಳಿದ ಸರ್ಕಾರ:

 

Image Credit: Business League

 

ಹೌದು ಮನೆಬಾಗಿಲಿಗೆ ಬಂದು ಹೊಸ ರೇಷನ್ ಕಾರ್ಡ್ (New Ration Card) ಅನ್ನು ಅಧಿಕಾರಿಗಳು ವಿತರಣೆ ಮಾಡಿ ಹೋಗಲಿದ್ದಾರೆ ಎನ್ನುವಂತಹ ಸಂತೋಷದ ಸುದ್ದಿ ಈಗ ಕೇಳಿ ಬರ್ತಾ ಇದೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ಗ್ಯಾರಂಟಿ ಯೋಜನೆಗಳಿಗೆ ಪ್ರಮುಖವಾಗಿ ರೇಷನ್ ಕಾರ್ಡ್ ಅತ್ಯಂತ ಪ್ರಮುಖವಾದ ದಾಖಲೆ ಪಾತ್ರದ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣದಿಂದಾಗಿ ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದುವಂತಹ ವಿಚಾರದ ಬಗ್ಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು.

advertisement

2017ರಿಂದ 2021 ರವರೆಗೆ ಅರ್ಜಿ ಸಲ್ಲಿಸಿರುವ ಅಂತಹ ರೇಷನ್ ಕಾರ್ಡ್ (Ration Card) ಅನ್ನು ಅವರಿಗೆ ಒದಗಿಸುವ ಮೂಲಕ ವಿಲೇವಾರಿ ಮಾಡುವಂತಹ ಕೆಲಸವನ್ನು ಅಧಿಕಾರಿಗಳಿಗೆ ಮಾಡೋದಕ್ಕೆ ಆದೇಶ ಬಂದಿದೆ. ಇನ್ನು ಇದೇ ಸಂದರ್ಭದಲ್ಲಿ ಯಾರಾದರೂ ನಕಲಿ ದಾಖಲೆ ಪತ್ರಗಳನ್ನು ನೀಡುವ ಮೂಲಕ ಬಿಪಿಎಲ್ ರೇಷನ್ ಕಾರ್ಡ್ (Ration Card) ಮಾಡಿಕೊಂಡಿದ್ದರೆ ಅವರನ್ನು ಕೂಡ ಈ ಸಂದರ್ಭದಲ್ಲಿ ಕಂಡು ಹುಡುಕಲಿದ್ದು ಖುದ್ದಾಗಿ ಅಧಿಕಾರಿಗಳೇ ಅವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಿದ್ದಾರೆ. ಈಗಾಗಲೇ ಖಚಿತವಾಗಿರುವಂತಹ ಅರ್ಜಿದಾರರಿಗೆ ಮಾತ್ರ ಅವರ ರೇಷನ್ ಕಾರ್ಡ್ ಗಳನ್ನ ಹಂತ ಹಂತವಾಗಿ ನೀಡುವಂತಹ ಕೆಲಸವನ್ನು ಮಾಡುವುದಕ್ಕೆ ಅಧಿಕಾರಿಗಳು ಸಿದ್ಧವಾಗಿದ್ದಾರೆ ಎಂಬುದಾಗಿ ಮಾಹಿತಿ ಸಿಕ್ಕಿದೆ.

 

Image Credit: Bangalore Mirror

 

ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆಯ ಕಾರಣದಿಂದಾಗಿ ರೇಷನ್ ಕಾರ್ಡ್ (Ration Card) ಅನ್ನು ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ ಹೀಗಾಗಿ ಆ ಕೆಲಸವನ್ನು ಈಗ ಖುದ್ದಾಗಿ ಅಧಿಕಾರಿಗಳೇ ಮನೆಗೆ ಹೋಗಿ ನೀಡುವುದರ ಮೂಲಕ ಪರಿಪೂರ್ಣಗೊಳಿಸಲಿದ್ದಾರೆ.

ಹೀಗಾಗಿ ಅರ್ಜಿ ಸಲ್ಲಿಸಿರುವ ಅಂತಹ ಅರ್ಜಿದಾರರ ರೇಷನ್ ಕಾರ್ಡ್ ಅನ್ನು ವಿಲೇವಾರಿ ಮಾಡುವ ಕೆಲಸವನ್ನು ಈ ಸಂದರ್ಭದಲ್ಲಿ ಪ್ರಾರಂಭ ಮಾಡಲಾಗಿದ್ದು ಇದೇ ಸಂದರ್ಭದಲ್ಲಿ ಅನರ್ಹರಾಗಿದ್ರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿರುವ ವ್ಯಕ್ತಿಗಳನ್ನು ಕೂಡ ಕಂಡುಹಿಡಿದು ಅವರ ರೇಷನ್ ಕಾರ್ಡ್ ಅನ್ನು ರದ್ದು ಮಾಡುವಂತಹ ಪ್ರಕ್ರಿಯೆಯನ್ನು ಕೂಡ ಪ್ರಾರಂಭಿಸಲಾಗುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ.

advertisement

Leave A Reply

Your email address will not be published.