Karnataka Times
Trending Stories, Viral News, Gossips & Everything in Kannada

Electric Bike: ಎಲೆಕ್ಟ್ರಿಕ್ ಬೈಕ್ ಇರುವ ಎಲ್ಲರಿಗೂ ರಾಜ್ಯ ಸರ್ಕಾರದ ಮಹತ್ವದ ಸೂಚನೆ

advertisement

ಕಳೆದ ಸಾಕಷ್ಟು ಸಮಯಗಳಿಂದಲೂ ಕೂಡ ದ್ವಿಚಕ್ರ ವಾಹನಗಳ ಟ್ಯಾಕ್ಸಿ ಚಲಾವಣೆ ನಿಜಕ್ಕೂ ಕೂಡ ಕ್ಯಾಬ್ (CAB) ಹಾಗೂ ಆಟೋರಿಕ್ಷಾ (Auto Rickshaw) ಚಾಲಕರಿಗೆ ನುಂಗಲಾರದ ತುತ್ತಾಗಿತ್ತು ಯಾಕೆಂದ್ರೆ ನಿಜಕ್ಕೂ ಹೇಳಬೇಕೆಂದರೆ ನಿಯಮಗಳ ಪ್ರಕಾರ ಈ ರೀತಿ ದ್ವಿಚಕ್ರ ವಾಹನಗಳು ಕಮರ್ಷಿಯಲ್ ರೂಪದಲ್ಲಿ ವಾಹನವನ್ನು ಓಡಿಸುವ ಹಾಗಿಲ್ಲ ಅನ್ನುವಂತಹ ನಿಯಮಗಳಿದ್ರು ಕೂಡ ಕೆಲವೊಂದು ಅಪ್ಲಿಕೇಶನ್ಗಳ ಕಾರಣದಿಂದಾಗಿ ಅವುಗಳು ಚಲಾವಣೆ ಮಾಡುತ್ತಿರುವ ಕಾರಣದಿಂದಾಗಿ ಆಟೋರಿಕ್ಷಾದವರಿಗೆ ಹಾಗೂ ಕ್ಯಾಬ್ ನವರಿಗೆ ಆದಾಯ ಕಡಿಮೆಯಾಗಿ ಸಿಕ್ತಾ ಇತ್ತು.

WhatsApp Join Now
Telegram Join Now

ಇದರ ವಿರುದ್ಧ ಸಾಕಷ್ಟು ಪ್ರತಿಭಟನೆ ನಡೆಸಿದರು ಕೂಡ ಸರ್ಕಾರ ಹಾಗೂ ಸಾರಿಗೆ ಇಲಾಖೆಯ ಅದರಲ್ಲೂ ವಿಶೇಷವಾಗಿ ನಾವು ಮಾತನಾಡುತ್ತಿರುವುದು ಆರ್‌ಟಿಓ ಕಚೇರಿಯಿಂದ ಪರಿಣಾಮಕಾರಿ ನಿಯಮ ಹೊರಬಂದಿರಲಿಲ್ಲ. ಆದರೆ ಈಗ ನಡೆದಿರುವಂತಹ ಹೊಸ ಬದಲಾವಣೆಯಿಂದಾಗಿ ಸರ್ಕಾರ ಈ ರೀತಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಂದ ಟ್ಯಾಕ್ಸ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಹ ಜನರಿಗೆ ನೇರವಾಗಿ ಎಚ್ಚರಿಕೆಯನ್ನು ರವಾನಿಸಿದೆ ಎಂದು ಹೇಳಬಹುದಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಟ್ಯಾಕ್ಸಿಯವರಿಗೆ ಸರ್ಕಾರದ ಎಚ್ಚರಿಕೆ ರವಾನೆ:

 

Image Credit: HT Auto

 

advertisement

ಶಾಂತಿನಗರದಲ್ಲಿ ಇತ್ತೀಚಿಗೆ ಅಷ್ಟೇ ನಡೆದಿರುವಂತಹ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎನ್ನುವಂತಹ ಖಾಸಗಿ ಸಾರಿಗೆ ಸಂಸ್ಥೆಗಳ ್ರತಿಭಟನೆ ಸಂದರ್ಭದಲ್ಲಿ ಶಾಂತಿ ನಗರದಲ್ಲಿರುವಂತಹ ಆರ್‌ಟಿಓ ಕಚೇರಿಗೆ ನುಗ್ಗಿರುವಂತಹ ಪ್ರತಿಭಟನೆಕಾರರು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಯನ್ನು (Electric Bike Taxi) ಓಡಿಸುವಂತಿಲ್ಲ ಎಂಬುದಾಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದು ಇದಾದ ಕೆಲವೇ ಸಮಯಗಳಲ್ಲಿ ಈಗ ಸರ್ಕಾರ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಯನ್ನು ಓಡಿಸುವ ಹಾಗೆ ಇಲ್ಲ ಎನ್ನುವುದಾಗಿ ಕಡ್ಡಾಯ ನಿಯಮವನ್ನ ಆರ್ ಟಿ ಓ ಮೂಲಕ ಹೊರ ಹಾಕಿದೆ ಎಂದು ಹೇಳಬಹುದಾಗಿದೆ.

ಕೊನೆಗೂ ಖಾಸಗಿ ಸಾರಿಗೆ ಸಂಸ್ಥೆಯ ಮನವಿಗೆ ಆರ್‌ಟಿಓ (RTO) ಸಂಸ್ಥೆ ಪ್ರತಿಸ್ಪಂದಿಸಿದೆ ಎಂದು ಹೇಳಬಹುದಾಗಿದ್ದು ಯಾವುದೇ ಕಾರಣಕ್ಕೂ ಕೂಡ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಯನ್ನು ಕಮರ್ಷಿಯಲ್ ವಿಭಾಗದಲ್ಲಿ ಓಡಿಸುವ ಹಾಗೆ ಇಲ್ಲ ಎನ್ನುವಂತಹ ಕಡ್ಡಾಯ ನಿಯಮವನ್ನು ಜಾರಿಗೊಳಿಸಿದೆ.

 

Image Credit: Deccan Herald

 

ಈಗಾಗಲೇ ಆರ್ ಟಿ ಓ ಸಂಸ್ಥೆ 11 ಅಧಿಕಾರಿಗಳ ತಂಡವನ್ನು ರಚಿಸಿದ್ದು ಈ ರೀತಿ ಎಲೆಕ್ಟ್ರಿಕ್ ಬೈಕ್ (Electric Bike) ಟ್ಯಾಕ್ಸಿಯನ್ನು ಓಡಿಸುವಂತಹ ಜನರ ಬೈಕ್ ಅನು ಸೀಸ್ ಮಾಡುವಂತಹ ಕಾರ್ಯಾಚರಣೆಯನ್ನು ಕೂಡ ಈಗಾಗಲೇ ರಾಜ್ಯದಾದ್ಯಂತ ಪ್ರಾರಂಭ ಮಾಡಲಾಗಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ.

ನಿಯಮಗಳ ವಿರುದ್ಧವಾಗಿ ಕೂಡ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಯ ಚಾಲಕರು ರಸ್ತೆಗೆ ಇಳಿದು ಕಮಾಯಿ ಮಾಡುವುದಕ್ಕೆ ಹೊರಟಿದ್ದು ಸರ್ಕಾರದ ಗಮನಕ್ಕೆ ಬಂದಿದ್ದು ಈಗ ಅದೇ ಕಾರಣಕ್ಕಾಗಿ ಪ್ರಾದೇಶಿಕ ಸಾರಿಗೆ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಈ ರೀತಿ ಯಾವುದೇ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ರೋಡಿಗಿಳಿದರೆ ಅವುಗಳನ್ನು ಸೀಸ್ ಮಾಡುವುದಕ್ಕೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದ್ದು ಈ ಪ್ರಕ್ರಿಯೆ ಈಗ ಪ್ರಾರಂಭವಾಗಿದೆ.

advertisement

Leave A Reply

Your email address will not be published.