Karnataka Times
Trending Stories, Viral News, Gossips & Everything in Kannada

CM Siddaramaiah: ಈಗಾಗಲೇ 18 ಲಕ್ಷ ಜನ ಅರ್ಜಿ ಹಾಕಿರುವ ಈ ಯೋಜನೆಗೆ ಹೆಸರು ಸೇರಿಸಲು ಸಿಎಂ ಮನವಿ! ಮುಗಿಬಿದ್ದ ರೈತರು

advertisement

ಕೃಷಿಯನ್ನೇ ನಂಬಿಕೊಂಡು ಬದುಕುವ ಅನೇಕ ಜನರು ಇಂದಿಗೂ ಅಕಾಲಿಕ ಮಳೆ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ರಾಜ್ಯದ ಕೆಲವೆಡೆ ಮಳೆ ಬಂದು ಜನ ಜೀವನಕ್ಕೆ ಸಹಕಾರವಾದರೆ ಇನ್ನು ಕೆಲವೆಡೆ ಮಳೆ ಬಾರದೇ ಸಮಸ್ಯೆ ಆಗುತ್ತಿದೆ. ಈ‌ ನಿಟ್ಟಿನಲ್ಲಿ ಸರಕಾರದ ಕೆಲವು ಯೋಜನೆಯ ಪ್ರಯೋಜನೆ ಸಿಗುತ್ತದೆ. ನೀರಾವರಿ ಯೋಜನೆಯ ಅಡಿಯಲ್ಲಿ ಸೌರ ಪಂಪ್ ಸೆಟ್ (Solar Pump Set) ಅನ್ನು ಅಳವಡಿಕೆ ಮಾಡಿಕೊಳ್ಳಲು ನಿಮಗಿದು ಸುವರ್ಣ ಅವಕಾಶ ಸಿಗಲಿದೆ. ಅದು ಎಲ್ಲಿ ಯಾವುದು ಈ ಯೋಜನೆ? ಇತ್ಯಾದಿ ಮಾಹಿತಿಗಾಗಿ ಈ ಲೇಖನ ಪೂರ್ತಿಯಾಗಿ ಓದಿ.

WhatsApp Join Now
Telegram Join Now

ಯೋಜನೆಯ ಹೆಸರು ಏನು?

ನೀರಾವರಿಗೆ ಸಾಂಪ್ರದಾಯಿಕ ಇಂಧನವನ್ನು ಬಳಕೆ ಮಾಡುವ ಬದಲಿಗೆ ಸೌರ ವಿದ್ಯುತ್ ಶಕ್ತಿ ಬಳಕೆ ಮಾಡಲು ಅವಕಾಶಿಸಲಾಗುತ್ತಿದ್ದು ಈ ಯೋಜನೆಗೆ ಕುಸುಮ್ ಯೋಜನೆ (PM Kusum Scheme) ಎಂದು ಹೆಸರಿಸಲಾಗಿದೆ. ಇದು ಕೇಂದ್ರ ಸರಕಾರದ ಅಡಿಯಲ್ಲಿ ಜಾರಿಯಾಗುತ್ತಿರುವ ಯೋಜನೆ ಆಗಿದ್ದು ಸೌರ ಪಂಪ್ ಸೆಟ್ (Solar Pump Set) ಪಡೆಯಲು ಅರ್ಜಿ ಆಹ್ವಾನಿಸಿರುವ ಬಗ್ಗೆ ಇತ್ತೀಚೆಗಷ್ಟೇ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಮಹತ್ವದ ಮಾಹಿತಿ ನೀಡಿದ್ದಾರೆ ಎಂದು ಈ ಮೂಲಕ ಹೇಳಬಹುದು.

 

Image Source: Insolation Energy

 

ಅಧಿಕ ಸಂಖ್ಯೆಯಲ್ಲಿ ನೋಂದಣಿ

ಸೌರ ಪಂಪ್ ಸೆಟ್ (Solar Pump Set) ಅಳವಡಿಕೆ ಮಾಡಲು ಅಧಿಕ ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಪಿಎಂ ಕುಸುಮ್ ಯೋಜನೆ (PM Kusum Yojana) ಅಡಿಯಲ್ಲಿ ಪಂಪ್ ಸೆಟ್ ಪಡೆಯಲು 18 ಲಕ್ಷಕ್ಕೂ ಅಧಿಕರೈತರು ನೋಂದಣಿ ಮಾಡಿರುವುದಾಗಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಅವರು ತಿಳಿಸಿದ್ದಾರೆ. ಹಾಗಾಗಿ ಹೊಸದಾಗಿ ನೋಂದಣಿ ಮಾಡುವವರಿಗೆ ಕೂಡ ಬೆಂಬಲಿಸಲಾಗುತ್ತಿದೆ.

advertisement

ಸಬ್ಸಿಡಿ ದರ ಏರಿಕೆ:

ಸೌರ ಪಂಪ್ ಸೆಟ್ (Solar Pump Set) ಅಳವಡಿಕೆ ಮಾಡಲು ಸಬ್ಸಿಡಿ ಮೊತ್ತವನ್ನು ರಾಜ್ಯದ ಕಾಂಗ್ರೆಸ್ ಸರಕಾರವು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ 30% ಸಬ್ಸಿಡಿ ದರವನ್ನು ಈಗ ಮತ್ತಷ್ಟು ಏರಿಕೆ ಮಾಡಲು ಮುಂದಾಗಿದೆ ಅದರ ಪ್ರಕಾರ 50% ಸಬ್ಸಿಡಿ ಮೊತ್ತ ಸೌರ ಪಂಪ್ ಸೆಟ್ ಅಳವಡಿಕೆಗೆ ಸಿಗಲಿದೆ. ದೇಶದಲ್ಲಿ ನೀರಾವರಿಗಾಗಿ ಸಾಂಪ್ರದಾಯಿಕ ಇಂಧನ ಅವಲಂಬಿಕೆ ಕಡಿಮೆ ಮಾಡಿ ಪ್ರಾಕೃತಿಕ ಸಂಪನ್ಮೂಲಗಳ ಸದ್ವಳಕೆ ಮಾಡುವುದು ಇದರ ಒಂದು ಮುಖ್ಯ ಉದ್ದೇಶ ಎಂದು ಹೇಳಬಹುದು. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಯೋಜನೆಯ ಅನುಷ್ಠಾನಕ್ಕೆ ಹೊಣೆ ಹೊತ್ತಿದೆ.

ಯಾವೆಲ್ಲ ಸೌಲಭ್ಯ ಇದರಲ್ಲಿ ಇದೆ?

 

Image Source: SolarQuarter

 

ಸೌರ ಫಲಕ, ಸಬ್ ಮರ್ಸಿಲ್, ಸರ್ಫೇಸ್ ಡಿಸಿ ಪಂಪ್ ಗಳು, ಪ್ಯಾನೆಲ್ ಬೋರ್ಡ್ ಮೌಂಟಿಂಗ್ ಸ್ಟ್ರಕ್ಚರ್, ಪೈಪ್ ಹಾಗೂ ಕೇಬಲ್ ಕೂಡ ಸಿಗಲಿದೆ. ಕೃಷಿ ಭೂಮಿಯಲ್ಲಿ ಸೋಲಾರ್ ಅಳವಡಿಕೆ ಮಾಡಿಕೊಂಡರೆ 5ವರ್ಷದವರೆಗೆ ಪೂರೈಕೆದಾರರೆ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ. ಕುಸುಮ್ ಯೋಜನೆಯ ಮೂಲಕ ಫೀಡರ್ ಮಟ್ಟದ ಸೌರೀಕರಣದ ಮೂಲಕ ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು. ಇದನ್ನು ನೀವು ಸ್ವಂತಕ್ಕಾಗಿ ಬಳಸಬಹುದು ಇಲ್ಲವೇ ಸೌರ ವಿದ್ಯುತ್ ಮಾರಾಟ ಮಾಡಲು ಕೂಡ ಕುಸುಮ್ ಸಿ ಯೋಜನೆ ಬಳಕೆ ಮಾಡಬಹುದಾಗಿದೆ.

ಈ ವೆಬ್‌ಸೈಟ್‌ ಸಂಪರ್ಕಿಸಿ:

ಸೌರ ಪಂಪ್ ಸೆಟ್ (Solar Pump Set) ಅಳವಡಿಕೆ ಮಾಡಲು ನೋಂದಣಿ ಮಾಡಿಕೊಳ್ಳಲು ಇಚ್ಛಿಸಿದರೆ https://souramitra.com ಎಂಬ ವೆಬ್‌ಸೈಟ್‌ ನಲ್ಲಿ ಭೇಟಿ ನೀಡಿ. ಅದೇ ರೀತಿ ನಿಮಗೆ ಆನ್ಲೈನ್ ಮೂಲಕ ನೋಂದಣಿ ಸಮಸ್ಯೆ ಆಗುತ್ತಿದೆ ಅಥವಾ ಖಚಿತ ಮಾಹಿತಿ ಪೂರ್ತಿ ಸಿಗಲಿಲ್ಲ ಎನ್ನುವವರು 080-22202100 ಸಂಖ್ಯೆಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.