Karnataka Times
Trending Stories, Viral News, Gossips & Everything in Kannada

Hospital: ಸ್ವಂತ ಆಸ್ಪತ್ರೆ, ಕ್ಲಿನಿಕ್ ಇಟ್ಟುಕೊಂಡವರಿಗೆ ರಾಜ್ಯ ಸರ್ಕಾರದ ಹೊಸ ರೂಲ್ಸ್!

advertisement

ಆರೋಗ್ಯ ಒಂದಿದ್ದರೆ ಏನು ಬೇಕಾದರೆ ಮಾಡಬಹುದು. ಹಾಗಾಗಿ ಆರೋಗ್ಯವೇ ಭಾಗ್ಯ ಎಂದು ಕೂಡ ಹೇಳುತ್ತಾರೆ. ಆರೋಗ್ಯ ಕಾಪಾಡುವ ನೆಲೆಯಲ್ಲಿ ಹಾಗೂ ದೇಹದ ಆರೋಗ್ಯ ಸಮಸ್ಥಿತಿಯಲ್ಲಿ ಇಡುವ ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಅನೇಕ ಚಿಕಿತ್ಸೆ ಎಲ್ಲ ಪಡೆಯುತ್ತಾರೆ. ಆರೋಗ್ಯ ಕಾಳಜಿ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆ ಸಂಖ್ಯೆ ಕೂಡ ಅಧಿಕ ಆಗಲಿದೆ. ಇತ್ತೀಚೆಗೆ ಖಾಸಗಿ ಆಸ್ಪತ್ರೆ (Private Hospital) ಸಂಖ್ಯೆ ಅಧಿಕವಾಗಿದ್ದು ನಕಲಿ ವೈದ್ಯರ ಸಂಖ್ಯೆ ಕೂಡ ಅಧಿಕ ಆಗಿದೆ ಎಂದು ಹೇಳಬಹುದು. ಹಾಗಾಗಿ ಇನ್ನು ಮುಂದೆ ಖಾಸಗಿ ಅಥವಾ ಸರಕಾರಿ ಆಸ್ಪತ್ರೆಯಲ್ಲಿ ಕೆಲವೊಂದು ನಿಯಮ ಕಡ್ಡಾಯವಾಗಿದೆ.

WhatsApp Join Now
Telegram Join Now

ಆಸ್ಪತ್ರೆಯಲ್ಲಿ (Hospital) ನಕಲಿ ವೈದ್ಯರು ಹಾಗೂ ವೈದ್ಯಕೀಯ ಪ್ರಮಾಣ ಹೆಚ್ಚಾಗುತ್ತಿದ್ದು ಇದು ಅನೇಕರಿಗೆ ಸಮಸ್ಯೆ ಆಗುವುದು ಕೂಡ ತಿಳಿದು ಬಂದಿದೆ. ಅಷ್ಟು ಮಾತ್ರವಲ್ಲದೆ ಸರಿಯಾಗಿ ವೈದ್ಯಕೀಯ ತರಬೇತಿ ಇಲ್ಲದೆ ಆರೋಗ್ಯ ಸಲಹೆ ಮಾತ್ರೆ , ಔಷಧ ಬರೆದುಕೊಡುವುದು ಕೂಡ ಅಪಾಯಕಾರಿ ಆಗಿದೆ ಹಾಗಾಗಿ ನಕಲಿ ವೈದ್ಯರ ಹಾವಳಿ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರಕಾರವು ನೂತನ ಕ್ರಮ ಕೈಗೊಳ್ಳಲು ಮುಂದಾಗಿದ್ದು ಸಮಾಜದ ಸ್ವಾಸ್ಥ್ಯ ಕಾಪಾಡುವ ನೆಲೆಯಲ್ಲಿ ಈ ಕ್ರಮ ಬಹಳ ಅನುಕೂಲ ಆಗಲಿದೆ.

ಯಾವುದು ಆ ಕಡ್ಡಾಯ ನಿಯಮ:

 

Image Source: CBS News

 

advertisement

ನಕಲಿ ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ತೊಡೆದು ಹಾಕುವ ನೆಲೆಯಲ್ಲಿ ಇನ್ನು ಮುಂದೆ ಆಸ್ಪತ್ರೆಯ (Hospital) ಮುಂಭಾಗದಲ್ಲಿ KPME ನೋಂದಣಿ ಸಂಖ್ಯೆ, ಆಸ್ಪತ್ರೆಯ ಮಾಲಕರ ಹೆಸರು ಮತ್ತು ಆಸ್ಪತ್ರೆಯ ಹೆಸರನ್ನು ಮುಂಭಾಗದಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಈ ಒಂದು ನಿಯಮವನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಈ ನಿಯಮ ಜಾರಿಗೆ ಬರಲಾಗಿದೆ.

ಕಾನೂನು ಕ್ರಮ:

ರಾಜ್ಯ ಸರಕಾರ ಆರೋಗ್ಯ ಇಲಾಖೆಯ ಮೂಲಕ ಈ ಹೊಸ ನಿಯಮ ಜಾರಿಗೆ ತಂದಿದ್ದು ಈ ನಿಯಮವನ್ನು ಖಾಸಗಿ ಆಸ್ಪತ್ರೆ (Private Hospital) ಅವರು ಮೀರಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. KPME ತಿದ್ದುಪಡಿ ಕಾಯ್ದೆ 2017ರ ಪ್ರಕಾರ ಸೆಕ್ಷನ್ 5ರ ಪ್ರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅದರ ಪ್ರಕಾರ ಖಾಸಗಿ ಮತ್ತು ಆಯುರ್ವೇದಿಕ್, ಅಲೋಪತಿ ಆಸ್ಪತ್ರೆ , ನರ್ಸಿಂಗ್ ಹೋಂ, ಕ್ಲಿನಿಕ್ ನಡೆಸಲು ನೀಡಿದ್ದ ಪರವಾನಿಗೆ ಕೂಡ ರದ್ದಾಗುವ ಸಾಧ್ಯತೆ ಸಹ ಇದೆ.

ಯಾವೆಲ್ಲ ಆಸ್ಪತ್ರೆ ಇದೆ:

ಈ KPME ನೋಂದಣಿ ಸಂಖ್ಯೆ, ಮಾಲಕರ ಹೆಸರು ಹಾಗೂ ಆಸ್ಪತ್ರೆ (Hospital) ಹೆಸರನ್ನು ಮುಂಭಾಗದಲ್ಲಿ ಪ್ರದರ್ಶನ ಮಾಡಲು ತಿಳಿಸಲಾಗಿದ್ದು ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್ ನಲ್ಲಿ ಈ ರೀತಿ ಎಲ್ಲ ವಿಚಾರ ಆಸ್ಪತ್ರೆಯ ಕಟ್ಟಡದ ಮುಂಭಾಗದಲ್ಲಿಯೇ‌ ತಿಳಿಸಬೇಕು ಎಂಬ ನಿಯಮ ಇದೆ. ಅಷ್ಟು ಮಾತ್ರವಲ್ಲದೆ ಅಲೋಪತಿ, ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಬೋರ್ಡ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಅಲೋಪತಿಕ್ ಆಸ್ಪತ್ರೆಯಲ್ಲಿ ನೀಲಿ ಬಣ್ಣದಲ್ಲಿ ಬೋರ್ಡ್ ನಲ್ಲಿ ಈ ವಿಚಾರ ಹಾಕಬೇಕು ಹಾಗೆಯೇ ಆಯುರ್ವೇದಿಕ್ ನಲ್ಲಿ ಹಸಿರು ಬಣ್ಣದಲ್ಲಿ ಬೋರ್ಡ್ ಹಾಕುವಂತೆ ಕೂಡ‌ ಸೂಚಿಸಲಾಗಿದೆ.

advertisement

Leave A Reply

Your email address will not be published.