Karnataka Times
Trending Stories, Viral News, Gossips & Everything in Kannada

Police Personnel: ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಗುಡ್ ನ್ಯೂಸ್! ಸರ್ಕಾರದ ಹೊಸ ನಿರ್ಧಾರ

advertisement

ಕರ್ನಾಟಕದಲ್ಲಿ ಈಗಾಗಲೇ ಕೆಲವು ವರ್ಷಗಳಿಂದ ಬಾಕಿ ಉಳಿದುಕೊಂಡಿರುವ ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡಲು ಗೃಹ ಇಲಾಖೆ ಸಿದ್ದತೆ ಮಾಡಿಕೊಂಡಿದೆ.ನೇಮಕಗೊಂಡ ಜಿಲ್ಲೆ ಇಲ್ಲವೇ ವಿಭಾಗದಲ್ಲಿ ಆಯಾ ಪೊಲೀಸರು ಕೆಲಸ ಮಾಡಬೇಕಾಗುತ್ತದೆ.ರಾಜ್ಯದ ಅನೇಕ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಅಂತರ ಜಿಲ್ಲಾ ವರ್ಗಾವಣೆ ನಿರೀಕ್ಷೆಯಲ್ಲಿ ಇರಲಿದ್ದು ಇಂತಹ ಸಿಬ್ಬಂದಿಗಳಿಗೆ ಶೀಘ್ರವೇ ಅಂತರ್ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ (Dr. G Parameshwar) ಈಗಾಗಲೇ ತಿಳಿಸಿದ್ದಾರೆ

WhatsApp Join Now
Telegram Join Now

ಶೀಘ್ರದಲ್ಲೆ ನಡೆಯಲಿದೆ:

 

Image Source: The Statesman

 

ನೀತಿ ಸಂಹಿತೆ ಇದ್ದಿದ್ದರಿಂದ ಕಳೆದ ಎರಡು ತಿಂಗಳು ಸರ್ಕಾರದ ಯಾವುದೇ ರೀತಿಯ ಕೆಲಸ ಕಾರ್ಯಗಳು ಆಗಿಲ್ಲ. ಇದೀಗ ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆ ಶೀಘ್ರದಲ್ಲೇ ನಡೆಯಲಿದೆ, ಈಗ ನೀತಿ ಸಂಹಿತೆ ತೆರವುಗೊಂಡಿದ್ದು, ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡುತ್ತೇವೆ ಎಂದರು.

ಅರ್ಜಿ ಸಲ್ಲಿಕೆ ಮಾಡಿದ್ದಾರೆ:

ಈಗಾಗಲೇ ಸ್ವಂತ ಊರು ಗಳಲ್ಲಿಯೇ ಕೆಲಸ ಮಾಡಲು ಬಯಸಿ ಅರ್ಜಿ ಸಲ್ಲಿಸಿದ್ದ ನೂರಾರು ಕಾನ್‌ಸ್ಟೆಬಲ್‌ಗಳು ವರ್ಗಾವಣೆಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.ಈಗಾಗಲೇ ಪೊಲೀಸ್‌ ಇಲಾಖೆ ಆರಂಭಿಸಿದ ಆನ್‌ಲೈನ್‌ ಪೋರ್ಟಲ್‌ನಲ್ಲಿ ರಾಜ್ಯದ 3,286 ಮಂದಿ ಪರಸ್ಪರ ವರ್ಗಾವಣೆ ಕೋರಿ ಅರ್ಜಿ ಸಲ್ಲಿಕೆ ಕೂಡ ಮಾಡಿದ್ದಾರೆ

advertisement

ರಜೆಯೂ ಇಲ್ಲ:

 

Image Source: The Asian Age

 

ಈಗಾಗಲೇ ಬೇರೆ ಬೇರೆ ಕಾರಣಕ್ಕೆ ಕುಟುಂಬದವರನ್ನು ನಾವು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಕರೆತಂದಿಲ್ಲ. ಒತ್ತಡದ ಕರ್ವವ್ಯದಿಂದ ಅಗತ್ಯ ಸಂದರ್ಭಗಳಲ್ಲಿ ರಜೆಯೂ ಸಿಗುತ್ತಿಲ್ಲ. ಹಾಗಾಗಿ ವರ್ಗಾವಣೆ ಮಾಡಿಕೊಡಿ ಪೊಲೀಸ್ ಸಿಬ್ಬಂದಿಗಳು (Police Personnel) ಮನವಿ ಕೂಡ ಮಾಡಿಕೊಂಡಿದ್ದಾರೆ. 2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಪೊಲೀಸ್ ಸಿಬ್ಬಂದಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು.

ಪೋಲಿಸ್ ಸಿಬ್ಬಂದಿ ಪತಿ ಪತ್ನಿ ವರ್ಗಾವಣೆ:

ಇದೀಗ ಪೊಲೀಸ್ ಸಿಬ್ಬಂದಿ (Police Personnel) ಪತಿ ಪತ್ನಿ ವರ್ಗಾವಣೆ ಪ್ರಕರಣದ ಸಂಬಂಧ ಕೂಡ ಪೊಲೀಸ್ ಕಾನ್‌ಸ್ಟೇಬಲ್ ಗಳಿಗೆಅಂತರ್ ಜಿಲ್ಲಾ ವರ್ಗಾವಣೆ ಮಾಡುವಂತೆ ಇಲಾಖಾ ಮುಖ್ಯಸ್ಥರಿಗೆ ಗೃಹ ಸಚಿವ ಡಾ.ಜಿ.ಪರಮೇಶರ್ (Dr. G Parameshwar) ಅವರು ಆದೇಶ ಕೂಡ ನೀಡಿದ್ದಾರೆ. ಪೊಲೀಸ್ ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಸೂಕ್ತ ಆದೇಶವನ್ನು ಈಗಾಗಲೇ ಹೊರಡಿಸಿದ್ದರು.

ಈ ಬಗ್ಗೆ ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ:

ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಪರಿಗಣಿಸುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಏನು ಇಲ್ಲ. ನಮ್ಮಲ್ಲಿ ಒಳ ಜಗಳಗಳು ಆಗಿಲ್ಲ. ನಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತೇವೆ ಅಷ್ಟೇ, ಯಾವುದಾದರು ವಿಚಾರಗಳು ಬಂದಾಗ ಒಬ್ಬೊಬ್ಬರು ಅಭಿಪ್ರಾಯಗಳನ್ನು ಹಂಚಿ ಕೊಂಡಿರುವುದು ಸಹಜ. ಅಂತಹ ವಿಚಾರ ಬಿಟ್ಟರೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟನೆ ಕೂಡ ನೀಡಿದರು.

advertisement

Leave A Reply

Your email address will not be published.