Karnataka Times
Trending Stories, Viral News, Gossips & Everything in Kannada

Drought Relief Money: ಇದುವರೆಗೂ ಬರಪರಿಹಾರ ಸಿಗದವರಿಗೆ ಸಚಿವರ ಅಪ್ಡೇಟ್, ಗುಡ್ ನ್ಯೂಸ್! ಉಪಯುಕ್ತ ಮಾಹಿತಿ

advertisement

ಈ ಭಾರಿ ಬಿಸಿಲಿನ ‌ಬೇಗೆಯಿಂದ ಜನರು ಬೇಸೆತ್ತು ಹೋಗಿದ್ದರು.ಕುಡಿಯಲು ಸಹ ನೀರಿನ ಸಮಸ್ಯೆ ಉಂಟಾಗಿ ಬರ ಪರಿಸ್ಥಿತಿ ಎದುರಾಗಿತ್ತು.ಅದರಲ್ಲೂ ರೈತರು ಈ ಭಾರಿ ಕೃಷಿಯಲ್ಲಿ ಇಳುವರಿ ಕಾಣದೇ ಬಹಳಷ್ಟು ನಷ್ಟ ಅನುಭವಿಸಿದ್ದಾರೆ.‌ ಮಳೆ‌‌‌ ಇಲ್ಲದೆ ಕೃಷಿ ಯಲ್ಲಿ ನಷ್ಟು ಉಂಟಾಗಿದ್ದು ಬರ ಪರಿಹಾರ (Drought Relief Money) ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದರು. ಅದಕ್ಕಾಗಿ ಸರಕಾರ ಕೂಡ ಬೆಳೆವಿಮೆಯನ್ನು ನೀಡಲು ಮುಂದಾಗಿದ್ದು ಕೆಲವು ರೈತರ ಖಾತೆಗೆ ಕೂಡ ಈ ಬರ ಪರಿಹಾರ ಮೊತ್ತ ಬಿಡುಗಡೆ ಮಾಡಿದೆ.‌ಕೆಲವು ರೈತರಿಗೆ ಈ ಹಣ ಜಮೆಯಾಗಿಲ್ಲ ಇದೀಗ ಈ ಬಗ್ಗೆ ಸಚಿವರು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

ಹಾಗಿದ್ದಲ್ಲಿ ಖಾತೆಗೆ ಎಷ್ಟು ಹಣ ಖಾತೆಗೆ ಜಮೆ ಯಾಗಲಿದೆ ಎನ್ನುವ ಮಾಹಿತಿ ‌ತಿಳಿಯಬೇಕಾದರೆ ಈ ಲೇಖನ ಪೂರ್ತಿ ಓದಿ. ಇದೀಗ ಬರ ಪರಿಹಾರದ (Drought Relief) ಕುರಿತಾಗಿ ಸಚಿವರು ಮಾತನಾಡಿದ್ದು ಒಂದು ವಾರದೊಳಗೆ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗಿದ್ದು ಎಫ್ ಐ ಡಿ ಮಾಡಿಸಿದ ರೈತರಿಗೆ ಹಣ ಜಮೆಯಾಗಲಿದೆ ಎಂದಿದ್ದಾರೆ. ಸುಮಾರು 17 ಲಕ್ಷದ 9 ಸಾವಿರ ರೈತ ಕುಟುಂಬಕ್ಕೆ ಬರ ಪರಿಹಾರ ನೀಡಲಿದ್ದೇವೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ (Krishna Byre Gowda) ತಿಳಿಸಿದ್ದಾರೆ.

ಇದನ್ನು ಓದಿ: ಪ್ರಮಾಣವಚನ ಸ್ವೀಕರಿಸಿದ 24 ಗಂಟೆಯೊಳಗಡೆ ಈ ಸ್ಕೀಮ್ ಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ

 

Image Source: Mint

 

ಲೋಕ‌ಸಭೆ ಚುನಾವಣೆಯ ಫಲಿತಾಂಶ ಕೂಡ ಬಂದಿದೆ. ಹೀಗಾಗಿ ಹಣ ಪಾವತಿ ವಿಳಂಬ ವಾಗಿತ್ತು.‌ ಇನ್ನು ಒಂದು ವಾರದೊಳಗೆ ಶೀಘ್ರವೇ ರೈತರಿಗೆ ಪರಿಹಾರ (Drought Relief Money) ನೀಡಲು ಸೂಚನೆ ನೀಡಲಾಗಿದ್ದು ಈಗಾಗಲೇ ರಾಜ್ಯ ಸರಕಾರದಿಂದ ಎರಡು ಸಾವಿರ ಹಣ ಖಾತೆಗೆ ಬಿಡುಗಡೆಯಾಗಿದ್ದು 2800 ಅಥವಾ 3000 ರೂ. ಸಣ್ಣ ರೈತರ ಖಾತೆಗೆ ಬರಬಹುದು.‌ ಇದು ಜೀವನೋಪಾಯ‌ ನಷ್ಟದ ಪರಿಹಾರವಾಗಿದ್ದು ಇದು ಸಣ್ಣ, ಅತಿ ಸಣ್ಣ ರೈತರಿಗೆ ನೀಡುವ ಪರಿಹಾರ ಮೊತ್ತ ವಾಗಿದೆ ಎಂದಿದ್ದಾರೆ. ಹಾಗಾಗಿ ಸುಮಾರು 40-41 ಲಕ್ಷ ರೈತರಿಗೆ ಪರಿಹಾರ ಪಾವತಿ ವಿತರಣೆ ಮಾಡಲಿದ್ದು, 17 ಲಕ್ಷದ 9 ಸಾವಿರ ರೈತ ಕುಟುಂಬಕ್ಕೆ ಜೀವನೋಪಾಯ ಪರಿಹಾರ ನೀಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

advertisement

ಇದನ್ನು ಓದಿ: ಈ ಯೋಜನೆಯಲ್ಲಿ ಹಣ ಪಡೆಯುತ್ತಿದ್ದವರಿಗೆ ಇನ್ಮೇಲೆ ಏರಿಕೆಯಾಗಲಿದೆ ಹಣ! ಹೊಸ ಸರ್ಕಾರದ ಗುಡ್ ನ್ಯೂಸ್

ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಸಚಿವರು ಈ ವರ್ಷದ ಮುಂಗಾರು ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಕೂಡ ಮಾಡಿದ್ದೇವೆ. ರಾಜ್ಯಕ್ಕೆ ಈಗಾಗಲೇ ಮುಂಗಾರು ಪ್ರವೇಶವಾಗಿದೆ ಹೀಗಾಗಿ ಮುಂದಿನ ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಆಗಲಿದೆ ಎಂದರು.

 

Image Source: Rediff.com

 

ಇನ್ನು ಬರ ಪರಿಹಾರದ ಹಣ (Drought Relief Money) ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಇಲ್ಲದಿದ್ದಲ್ಲಿ ಈ ಹಣ ಖಾತೆಗೆ ಜಮೆ ಯಾಗೋದಿಲ್ಲ ಎಂದು ಸಚಿವರು ಈಗಾಗಲೇ ಸ್ಪಷ್ಟನೇ ನೀಡಿದ್ದಾರೆ. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಲು ಸೂಚನೆ ಕೂಡ‌ನೀಡಿದ್ದಾರೆ.

ಇದನ್ನು ಓದಿ: ಈಗಾಗಲೇ 18 ಲಕ್ಷ ಜನ ಅರ್ಜಿ ಹಾಕಿರುವ ಈ ಯೋಜನೆಗೆ ಹೆಸರು ಸೇರಿಸಲು ಸಿಎಂ ಮನವಿ! ಮುಗಿಬಿದ್ದ ರೈತರು

ಈ ಎಫ್‌ಐಡಿಯನ್ನು ಮಾಡಿಸಲು ರೈತರ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಪುಸ್ತಕದ ಪ್ರತಿ, ತಮ್ಮ ಹೆಸರಿನಲ್ಲಿರುವ ಜಮೀನಿನ ಪಹಣಿ ಪ್ರತಿಗಳು, ತಮ್ಮ ಮೊಬೈಲ್‌ ಸಂಖ್ಯೆ, ಜಾತಿ ಪ್ರಮಾಣ ಪತ್ರ,ಪೋಟೋ ದಾಖಲಾತಿಗಳು ಕಡ್ಡಾಯವಾಗಿ ಬೇಕು.

advertisement

Leave A Reply

Your email address will not be published.