Karnataka Times
Trending Stories, Viral News, Gossips & Everything in Kannada

KSRTC Bus: ಉಚಿತವಾಗಿ KSRTC ಬಸ್ ಹತ್ತುತ್ತಿರುವ ಮಹಿಳೆಯರಿಗೆ ಹೊಸ ಮಾರ್ಗಸೂಚಿ! ತಕ್ಷಣವೇ ಜಾರಿಗೆ ಬರುವಂತೆ ಆದೇಶ

advertisement

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಕೂಡ ಬಹಳಷ್ಟು ಪ್ರಸಿದ್ಧಿ ಯಲ್ಲಿದ್ದು ಐದು ಯೋಜನೆಗಳ ಸದುಪಯೋಗ ವನ್ನು ಜನತೆ ಪಡೆಯುತ್ತಿದೆ.‌ಅದರಲ್ಲಿ ಮಹಿಳಾ ಪರ ಯೋಜನೆಯಾದ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಬಹಳಷ್ಟು ಪ್ರಸಿದ್ದಿ ಪಡೆದುಕೊಂಡಿದ್ದು ಗೃಹಲಕ್ಷ್ಮಿ (Gruha Lakshmi) ಮೂಲಕ ತಿಂಗಳಿಗೆ ಎರಡು ಸಾವಿರ ಮೊತ್ತ ಪಡೆದರೆ ಶಕ್ತಿ‌ಯೋಜನೆಯ ಮೂಲಕ ಉಚಿತ ಬಸ್ ಪ್ರಯಾಣ (Free Bus Travel) ವನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಇದೀಗ ಮಹಿಳಾ ಪ್ರಯಾಣಿಕರಿಗೆ ಸರಕಾರ ಈ ಬಗ್ಗೆ ಗುಡ್ ನ್ಯೂಸ್ ‌ಒಂದನ್ನು ನೀಡಿದೆ.

WhatsApp Join Now
Telegram Join Now

ಪ್ರಯಾಣಿಕರ ಸಂಖ್ಯೆ ಹೆಚ್ಚಳ:

 

Image Source: Onmanorama

 

ಸರ್ಕಾರಿ ಬಸ್‌ (KSRTC Bus) ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆ ಕಂಡಿದ್ದು ಅದರಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟು ಆಗಿದೆ. ಈಗಾಗಲೇ ಬಸ್ಸುಗಳಲ್ಲಿ ಪ್ರಯಾಣಿಕರ ಅದರಲ್ಲೂ ಮಹಿಳಾ ಪ್ರಯಾಣಿಕರ ದಟ್ಟಣೆಯನ್ನು ಹೆಚ್ಚಿಸಿದೆ. ಖಾಸಗಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ‌ಕಡಿಮೆ ಆಗಿದೆ.‌

advertisement

ಈಗಾಗಲೇ ಸಾರಿಗೆ ಇಲಾಖೆಯು ಕೂಡ ಹೆಚ್ಚುವರಿ ಬಸ್ ಅನ್ನು ಚಾಲನೆಗೆ ತಂದಿದ್ದು ಹಳ್ಳಿ ಪ್ರದೇಶಗಳಲ್ಲಿ ಸರಕಾರಿ ಬಸ್ ಇಲ್ಲದ ಕಾರಣ ಅಲ್ಲಿಯು ಮಹಿಳಾ ಪ್ರಯಾಣಿಕರಿಗೆ ಅಡಚಣೆ ಯಾಗದಂತೆ ಹೊಸ ಬಸ್ ಗಳ ಚಾಲನೆಗೆ ಸಿದ್ದತೆ ನಡೆಸಿದೆ

ಅವಕಾಶ ನೀಡಿದೆ:

ಶಕ್ತಿ ಯೋಜನೆ (Shakti Yojana) ಯಡಿ ಮಹಿಳೆಯರು ಉಚಿತ ಪ್ರಯಾಣ ಮಾಡಲು ವರ್ಜಿನಲ್ ಆಧಾರ್ ಕಾರ್ಡ್ (Aadhaar Card) ಅನ್ನು ತೋರಿಸಬೇಕಿತ್ತು. ಆದರೆ ಇದೀಗ ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ನಿಗಮದ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಹೊಸ ಅವಕಾಶವನ್ನು ಕಲ್ಪಿಸಿದ್ದು ತಿದ್ದುಪಡಿ ಆದೇಶದಲ್ಲಿ ಉಚಿತ ಪ್ರಯಾಣಕ್ಕಾಗಿ ಮಹಿಳಾ ಪ್ರಯಾಣಿಕರು ಮೂಲನಕಲು, ಡಿಜಿಲಾಕರ್ ಕಾರ್ಡ್ ಮತ್ತು ಸಾಫ್ಟ್ ಕಾಪಿ ಆಧಾರ್ ಕಾರ್ಡ್ ಪ್ರತಿ ತೋರಿಸಿದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಅವಕಾಶ ನೀಡಿದೆ

ಆದೇಶ ನೀಡಲಾಗಿದೆ:

ಹಾಗಾಗಿ ಮಹಿಳಾ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿಯೇ ಆಧಾರ್ ಕಾರ್ಡ್ ತೋರಿಸುವ ಮೂಲಕ ಶೂನ್ಯ ಮೊತ್ತದ‌ ಟಿಕೆಟ್ ವಿತರಿಸುವಂತೆ ಎಲ್ಲಾ ನಿರ್ವಾಹ ಕರಿಗೆ ತಿಳಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಆಡಚಣೆಯಾಗದಂತೆ ಹಾಗೂ ಯಾವುದೇ ತೊಂದರೆ ನೀಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಈ‌ ಮೂಲಕ ಆದೇಶ ನೀಡಲಾಗಿದೆ. ಹಾಗಾಗಿ ‌ಮಹಿಳಾ ಪ್ರಯಾಣಿಕರಿಗೆ ಈ ವಿಚಾರ ಮತ್ತಷ್ಟು ಖುಷಿ ನೀಡಿದೆ.

advertisement

Leave A Reply

Your email address will not be published.