Karnataka Times
Trending Stories, Viral News, Gossips & Everything in Kannada

Inherited Property: ದತ್ತು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಹಕ್ಕು ಇರುತ್ತಾ? ಬಂತು ಹೊಸ ನಿಯಮ

advertisement

ಮಕ್ಕಳಿದ್ದ ಮನೆ ಸದಾ ಲವಲವಿಕೆಯಿಂದ ಕೂಡಿರಲಿದೆ. ಮಗುವಿನ ಮುಗ್ದ ಮನಸ್ಸಿಗೆ ಮನ ಕರಗದೇ ಇರುವವರು ಬಹಳ ವಿರಳ ಎನ್ನಬಹುದು. ಅದೆ ರೀತಿ ಪುಟ್ಟ ಮಗು ಬೇಕು ಎಂದು ಅಂದು ಕೊಂಡರು ಕೂಡ ಅನೇಕ ಪೋಷಕರಿಗೆ ಮಕ್ಕಳಿನ ಭಾಗ್ಯವೆ ಸಿಗಲಾರದು ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಮಗು ದತ್ತು ಪಡೆದು ಸಾಕಲು ಮುಂದಾಗುತ್ತಾರೆ. ಹೀಗೆ ಮಗು ದತ್ತು ಪಡೆಯಲು ಕೂಡ ಅನೇಕ ಕಾನೂನು ಚೌಕಟ್ಟು ಇದೆ. ಅದೆ ರೀತಿ ದತ್ತು ಪಡೆದ ಮಗುವಿಗೆ ಆಸ್ತಿ (Property) ಪಾಲಿನಲ್ಲಿ ಅಧಿಕಾರ ಇರುತ್ತಾ ಎಂಬ ಪ್ರಶ್ನೆಗೆ ನಾವಿಂದು ನಿಮಗೆ ಉತ್ತರಿಸಲಿದ್ದೇವೆ.

WhatsApp Join Now
Telegram Join Now

ಮಗುವನ್ನು ದತ್ತು ಪಡೆಯುವುದು ಈಗ ಸುಲಭವಾದ ಪ್ರಕ್ರಿಯೆಯಲ್ಲ ಇದೊಂದು ಕಠಿಣ ಪ್ರಕ್ರಿಯೆ. ದತ್ತು ಪಡೆಯುವ ಮುನ್ನ ಆ ಮಗುವನ್ನು ಸಾಕಲು ಇವರು ಸಬಲರೆ ಪೂರ್ವಪರ ಯೋಜನೆ ಎಲ್ಲವನ್ನು ಕೂಡ ಯೋಜನೆ ಮಾಡುತ್ತಾರೆ ಎನ್ನಬಹುದು. ಹಾಗಾಗಿ ಮಗು ದತ್ತು ಪಡೆಯುವ ಮೊದಲೇ ಅವರನ್ನು ಸಾಕುವವರ ಹಿನ್ನೆಲೆ ಕಲೆ ಹಾಕಲಾಗುವುದು.

ಮಗುವಿಗಾಗಿ ಇಂತಿಷ್ಟು ಆಸ್ತಿ (Property) ಮೊದಲೇ ನೀಡುವುದು ಕೂಡ ನಿಯಮ ಇದೆ‌. ಹಾಗಿದ್ದರು ಮಗು ದತ್ತು ಪಡೆದ ತಂದೆಯ ಪಿತ್ರಾರ್ಜಿತ ಆಸ್ತಿ (Inherited Property) ಯಲ್ಲಿ ದತ್ತು ಮಗುವಿಗೆ ಪಾಲು ಪಡೆಯುವ ಅಧಿಕಾರ ಇದೆಯೇ ಎಂಬುದನ್ನು ನೀವಿ ಈ ಲೇಖನದ ಮೂಲಕ ತಿಳಿಯಿರಿ.

ದಾಖಲೆಗಳು ಅವಶ್ಯಕ:

 

Image Source: RERA Registration

 

advertisement

ಮಗು ದತ್ತು ಪಡೆಯುವಾಗ ನೀವು ಕುಟುಂಬದಲ್ಲಿ ಮನೆಯ ಸಂಬಂಧಿಕರನ್ನು ಯಾವುದೇ ದಾಖಲೆ ಪತ್ರ ಗಳ ಸಾಕ್ಷಿ ಇಲ್ಲದೆ ದತ್ತು ಪಡೆದಿದ್ದೀರೆ ಅಥವಾ ಕಾನೂನಾತ್ಮಕವಾಗಿ ದಾಖಲೆ ಮಾಡಿ ಸರಕಾರದ ನಿಯಮಾನುಸಾರ ನೀವು ಮಗು ದತ್ತು ಪಡೆದಿದ್ದೀರಿ ಎಂಬುದು ಇಲ್ಲಿ ಮೊದಲು ಪರಿಗಣಿಸಲಾಗುವುದು.

ಹಳೆ ಕಾಲದಲ್ಲಿ ಚಿಕ್ಕಮ್ಮ , ಚಿಕ್ಕಪ್ಪ, ದೊಡ್ಡಮ್ಮ ಹೀಗೆ ಕುಟುಂಬದವರೆ ತಮ್ಮ ಮಕ್ಕಳನ್ನು ಮಕ್ಕಳು ಇಲ್ಲದವರಿಗೆ ದತ್ತು ನೀಡುತ್ತಾರೆ. ಹಾಗೆ ಅನೇಕ ವರ್ಷದ ಹಿಂದೆ ದತ್ತು ಪಡೆದಿದ್ದಕ್ಕೆ ಸಾಕ್ಷಿ ಇದ್ದರೆ ದಾಖಲಾತಿ ಇದ್ದರೆ ದತ್ತು ಪಡೆದ ಪೋಷಕರ ಆಸ್ತಿ ಪಡೆಯಬಹುದು.

ಇತ್ತೀಚೆಗೆ ಮಗು ದತ್ತು ಪಡೆಯುವಾಗ ದಾಖಲೆ ಪ್ರಕಾರ ಕಾನೂನು ಬದ್ಧವಾಗಿ ಪಡೆಯಲೇ ಬೇಕು ಎಂಬ ನಿಯಮ ಇದೆ. ಒಂದು ವೇಳೆ ನಿಯಮ ಪಾಲನೆ ಮಾಡದೇ ಇದ್ದರೆ ಆಗ ಶಿಕ್ಷೆ ಆಗುವ ಸಾಧ್ಯತೆ ಸಹ ಇದೆ. ಹಾಗಾಗಿ ಕಾನೂನಾತ್ಮಕ ರೀತಿಯಲ್ಲಿ ದತ್ತು ಪಡೆದ ಮಕ್ಕಳಿಗೆ ಪೋಷಕರ ಪಿತ್ರಾರ್ಜಿತ ಆಸ್ತಿ (Inherited Property) ಯಲ್ಲಿ ಕೂಡ ಪಾಲು ಪಡೆಯುವ ಹಕ್ಕು ಇರಲಿದೆ.

 

Image Source: LiveChennai

 

ಪಿತ್ರಾರ್ಜಿತ ಆಸ್ತಿ (Inherited Property) ಯಲ್ಲಿ ತಂದೆಯಿಂದ ಪಡೆಯುವ ಎಲ್ಲ ತರಹದ ಸ್ವಂತ ಮಕ್ಕಳು ಪಡೆಯುವ ಹಕ್ಕಿನ ಬಾಧ್ಯತೆ ದತ್ತು ಮಕ್ಕಳಿಗೆ ಕೂಡ ಸಿಗುತ್ತದೆ. ಇಷ್ಟು ಮಾತ್ರವಲ್ಲದೆ ತಂದೆ ಹಾಗೂ ತಾಯಿಗೆ ಸಂಬಂಧ ಪಟ್ಟ ಎಲ್ಲ ತರವಾದ ಹಕ್ಕಿಗೂ ದತ್ತು ಮಗು ಸ್ವಂತ ಮಗುವಿನಷ್ಟೇ ಹಕ್ಕುದಾರ ಎಂದು ಹೇಳಬಹುದು.

ಹಿಂದು ದತ್ತಕ ಮತ್ತು ನಿರ್ವಹಣ ಕಾಯ್ದೆ 1956ರಲ್ಲಿ ಉಲ್ಲೇಖಿಸಿದಂತೆ ದತ್ತು ಪಡೆದವರ ಆಸ್ತಿ (Property) ಪಾಲು ಪಡೆಯುತ್ತಾರೆ. ಹಾಗೆಯೇ ದತ್ತು ನೀಡಿದ್ದವರು ಬದುಕಿದ್ದರೆ ಅಂದರೆ ದತ್ತು ಮಕ್ಕಳ ಸ್ವಂತ ತಂದೆ ತಾಯಿ ಬದುಕಿದ್ದಾಗ ಅವರಿಂದ ಪಿತ್ರಾರ್ಜಿತ ಆಸ್ತಿ (Inherited Property) ಪಡೆಯುವ ಅಧಿಕಾರವನ್ನು ದತ್ತು ಮಕ್ಕಳು ಕಳೆದುಕೊಳ್ಳಲಿದ್ದಾರೆ. ಸ್ವಂತ ತಂದೆ ಅಥವಾ ತಾಯಿ ಆಸ್ತಿ ಅಥವಾ ಅವರ ಪಿತ್ರಾರ್ಜಿತ ಆಸ್ತಿ ದತ್ತು ಮಗುವಿಗೆ ಇರಲಾರದು ಎಂದು ಈ ಮೂಲಕ ಕೂಡ ಹೇಳಬಹುದು.

advertisement

Leave A Reply

Your email address will not be published.