Karnataka Times
Trending Stories, Viral News, Gossips & Everything in Kannada

PM Kisan: ಪಿಎಂ ಕಿಸಾನ್ 17ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ! ಸರ್ಕಾರದ ಆದೇಶ.

advertisement

PM Kisan Samman Nidhi Yojana: ರೈತರನ್ನು ಕೃಷಿಯಲ್ಲಿ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅದರಲ್ಲಿ ಪಿಎಂ ಕಿಸಾನ್ (PM Kisan) ಸಮ್ಮನ್ ನಿಧಿ ಯೋಜನೆ ಕೂಡ ಒಂದು. ಈ ಯೋಜನೆಗೆ ಅರ್ಜಿ ಸಲ್ಲಿಸಿರುವ ರೈತರ ಹದಿನಾರನೇ ಕಂತಿನ ಹಣವನ್ನು ಈಗಾಗಲೇ ಸರ್ಕಾರ ಅವರವರ ಖಾತೆಗೆ ಜಮೆ ಮಾಡಿದ್ದಾರೆ. ಮುಂದಿನ ಕಂತಿನ ₹2000 ಹಣ ಯಾವಾಗ ಬರಲಿದೆ? ಎಂಬುದನ್ನು ರೈತರು ಎದುರು ನೋಡುತ್ತಿದ್ದಾರೆ.

WhatsApp Join Now
Telegram Join Now

ಭೂಮಿಯ ಪರಿಶೀಲನೆ ಅಗತ್ಯ

ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಫಲವನ್ನು ಪಡೆಯಲು ರೈತರು ಎರಡು ಅಥವಾ ಎರಡಕ್ಕಿಂತ ಕಡಿಮೆ ಎಕರೆ ಜಮೀನನ್ನು ಹೊಂದಿರಬೇಕು, ಅವರ ಬಳಿ ಇರುವಂತಹ ಭೂಮಿಯನ್ನು ಪರಿಶೀಲಿಸುವುದು ಅತ್ಯವಶ್ಯಕ. ಹೀಗಾಗಿ ರೈತರು ತಮ್ಮ ಜಮೀನಿನ ಸಂಪೂರ್ಣ ದಾಖಲಾತಿಯನ್ನು(Land Document) ಪರಿಶೀಲಿಸುವುದರ ಜೊತೆಗೆ ಯೋಜನೆಗೆ ಅದನ್ನು ಲಿಂಕ್ ಮಾಡಬೇಕು. ನಿಮ್ಮ ಹತ್ತಿರದ ಇ- ಮಿತ್ರ ಅಥವಾ ಸೈಬರ್ ಕೆಫೆ ಗೆ ಭೇಟಿ ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು(ekyc process) ಪೂರ್ಣಗೊಳಿಸಿಕೊಂಡರೆ ಮಾತ್ರ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಫಲವನ್ನು ಪಡೆಯಲು ಅರ್ಹರಾಗಿರುತ್ತೀರಾ.

advertisement

Image Source: Y20 India

ಈ ದಿನ 17ನೇ ಕಂತಿನ ಹಣ ನಿಮ್ಮ ಖಾತೆಗೆ ಬರಲಿದೆ

ಪ್ರತಿ ವರ್ಷವೂ ಅರ್ಜಿ ಸಲ್ಲಿಸಿರುವ ರೈತರ ಖಾತೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ(PM Kisan Samman Nidhi Yojana) 2000 ಹಣವನ್ನು ಮೂರು ಕಂತುಗಳ ರೂಪದಲ್ಲಿ ಸರ್ಕಾರ ವರ್ಗಾವಣೆ ಮಾಡುವ ಮೂಲಕ ರೈತರಿಗೆ ಆರ್ಥಿಕ ನೆರವನ್ನು(Financial Support) ನೀಡುತ್ತಿದೆ. ಅದರಂತೆ 2024ನೇ ಸಾಲಿನ ಮೊದಲ ಕಂತು ಏಪ್ರಿಲ್ ನಿಂದ ಜುಲೈ ತಿಂಗಳ ನಡುವೆ ಬರಲಿದೆ, ಅದರಂತೆ ಎರಡನೇ ಕಂತಿನ ಹಣವನ್ನು ಆಗಸ್ಟ್ ನಿಂದ ನವೆಂಬರ್ ತಿಂಗಳೊಳಗೆ ಹಾಕಲಾಗುತ್ತದೆ. ಮೂರನೇ ಕಂತು ಡಿಸೆಂಬರ್ನಿಂದ ಮಾರ್ಚ್ ತಿಂಗಳ ನಡುವೆ ಜಮಯಾಗಲಿದೆ. ಈ ಮೂಲಕ ಪ್ರತಿ ವರ್ಷ ರೈತರಿಗೆ 6,000 ಹಣವನ್ನು ನೀಡಿ ಅವರನ್ನು ಕೃಷಿಯತ್ತ ಉತ್ತೇಜಿಸುವುದಲ್ಲದೆ ಆರ್ಥಿಕ ಬಲವನ್ನು ಸರ್ಕಾರ ನೀಡುತ್ತಿದೆ.

advertisement

Leave A Reply

Your email address will not be published.