Karnataka Times
Trending Stories, Viral News, Gossips & Everything in Kannada

Senior Citizen: ರಾಜ್ಯದ ಎಲ್ಲ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಎಲೆಕ್ಷನ್ ಮುಗಿಯುತ್ತಿದ್ದಂತೆ ಘೋಷಣೆ

advertisement

ಹಿರಿಯ ನಾಗರಿಕರ ಸಬಲೀಕರಣಕ್ಕೆ ರಾಜ್ಯ ಸರಕಾರ ಸದಾ ಕಾಲ ಬೆಂಬಲ ನೀಡುತ್ತಲೇ ಬಂದಿದೆ. ರಾಜ್ಯ ಸರಕಾರವು ಅನೇಕ ರೀತಿಯಲ್ಲಿ ಬೆಂಬಲಿಸುತ್ತಲಿದ್ದು ಹಿರಿಯನಾಗರಿಕರಿಗೆ ಪಿಂಚಣಿ (Pension) ಹಾಗೂ ಇತರ ಸೌಲಭ್ಯ ನೀಡುತ್ತಲೇ ಬರಲಾಗಿದೆ. ಇಂತಹ ಸೌಲಭ್ಯವನ್ನು ಹಿರಿಯ ನಾಗರಿಕರು ಪಡೆಯಲು ಹಿರಿಯ ನಾಗರಿಕರು ಎನ್ನುವ ಕಾರ್ಡ್ (Senior Citizen Card ) ಅತ್ಯಗತ್ಯವಾಗಿದೆ. ಹಿರಿಯ ನಾಗರಿಕರಿಗೆ ಈ ಒಂದು ಕಾರ್ಡ್ ಅನ್ನು ಪೋರ್ಟಲ್ ಮೂಲಕ ನೀಡಲಾಗುತ್ತಿತ್ತು ಆದರೆ ಲೋಕಸಭೆ ಚುನಾವಣೆ ಇದ್ದ ಕಾರಣ ಈ ಕಾರ್ಡ್ ನೀಡುವ ಪೋರ್ಟಲ್ ಅನ್ನು ತಾತ್ಕಾಲಿಕ ಸ್ಥಗಿತ ಮಾಡಲಾಗಿದ್ದು ಈಗ ಎಲ್ಲರಿಗೂ ಒಂದು ಶುಭ ಸುದ್ದಿ ಕಾಯುತ್ತಿದೆ ಎನ್ನಬಹುದು.

WhatsApp Join Now
Telegram Join Now

ಲೋಕಸಭೆ ಚುನಾವಣೆಯ ಫಲಿತಾಂಶ ಕೂಡ ಬಂದ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಕಾರ್ಡ್ (Senior Citizen Card) ಪೋರ್ಟಲ್ ಅನ್ನು ಪುನರ್ ಆರಂಭ ಮಾಡಲಾಗುತ್ತಿದೆ. ಇದನ್ನು ಸ್ಥಗಿತ ಮಾಡಿದ್ದ ಸಂದರ್ಭದಲ್ಲಿ ಅನೇಕ ನಾಗರಿಕರಿಗೆ ಸಮಸ್ಯೆ ಆಗಿತ್ತು ಹಾಗಾಗಿ ಮತ್ತೆ ಮರು ಸ್ಥಾಪನೆ ಮಾಡಲು ಎಷ್ಟು ಬಾರಿ ಮನವಿಯನ್ನು ಮಾಡಿದರೂ ಸ್ಪಂದನೆ ಸಿಕ್ಕಿರಲಿಲ್ಲ ಇದೀಗ ವಿಕಲಚೇತನ ಮತ್ತು ಹಿರಿಯ ನಾಗರೀಕರಣ ಸಬಲೀಕರಣ ಇಲಖೆಯು ಮತ್ತೆ ಪೋರ್ಟಲ್ ಅನ್ನು ಪುನರ್ ಆರಂಭ ಮಾಡಿದೆ.

ಕಳೆದ ಮಾರ್ಚ್ 16ರಿಂದ ಜೂನ್ 8ರ ವರೆಗೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಡ್ ಅನ್ನು ಸ್ಥಗಿತ ಮಾಡಲಾಗಿತ್ತು.ಸುಮಾರು 54ದಿನಗಳ ಕಾಲ ಕಾರ್ಡ್ ಮಾಡಿಸಲು ಆಗದೇ ಅದರಿಂದ ಸಿಗುವ ಸೌಲಭ್ಯ ಕೂಡ ಪಡೆಯಲು ಸಾಧ್ಯವಾಗದೆ ಹಿರಿಯ ನಾಗರಿಕರು ತೊಂದರೆ ಪಟ್ಟಿದ್ದಾರೆ. ಪೋರ್ಟಲ್ ನಲ್ಲಿ ಹುಡುಕಾಡಿದರೂ ಚುನಾವಣೆ ನೀತಿ ಸಂಹಿತೆ ಇದ್ದ ಹಿನ್ನೆಲೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ ಎಂದು ತಿಳಿಸಲಾಗಿತ್ತು. ಈ ಬಗ್ಗೆ ಸಂದೇಶ ಕೂಡ ಬರುತ್ತಿತ್ತು. ಈ ಬಗ್ಗೆ ಎಲ್ಲ ಕಡೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸುದ್ದಿ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಎಚ್ಚೆತ್ತ ಇಲಾಖೆ ಸೇವೆ ಮರು ಆರಂಭ ಮಾಡುತ್ತಿದೆ.

ಯಾವೆಲ್ಲ ಸೌಕರ್ಯ ಸಿಗುತ್ತದೆ:

 

Image Source: The Hindu

 

advertisement

ಹಿರಿಯ ನಾಗರಿಕರಿಗೆ (Senior Citizen) ಬಸ್ ನಲ್ಲಿ ವಿನಾಯಿತಿ ಪಡೆಯಲು ಈ ಕಾರ್ಡ್ ಅಗತ್ಯವಾಗಿದೆ. ಅದೇ ರೀತಿ ಬ್ಯಾಂಕ್ ನಲ್ಲಿ ಕೆಲವು ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರ ಬರಲಿದ್ದು ಅದು ಕೂಡ ಅಗತ್ಯವಾಗಿದೆ. ಹಿರಿಯ ನಾಗರಿಕರಿಗೆ ವಯಸ್ಸಿನ ಆಧಾರದ ಮೇಲೆ ಪಿಂಚಣಿ ನೀಡುತ್ತಿದ್ದು ವಯಸ್ಸು ದೃಢೀಕರಣ ಮಾಡಲು ಹಿರಿಯ ನಾಗರಿಕರ ಕಾರ್ಡ್ ಮಾಡಿಸಿಕೊಳ್ಳಬೇಕು.

ಇವಿಷ್ಟು ಮಾತ್ರವಲ್ಲದೆ ಪ್ರವಾಸ ಹಾಗೂ ಇತರ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ರೈಲ್ಚೇ ಹಾಗೂ ಇತರ ರಿಯಾಯಿತಿ ದರ ಇರಲಿದೆ ಅದು ಪಡೆಯಲು ಕೂಡ ಕಾರ್ಡ್ ಹೊಂದುವುದು ಅಗತ್ಯ.

ಆಸ್ಪತ್ರೆಯ ಸೌಲಭ್ಯಕ್ಕೆ ಅಗತ್ಯ:

 

Image Source: ask.CAREERS

 

ಹಿರಿಯ ನಾಗರಿಕರ ಕಾರ್ಡ್ (Senior Citizen Card) ಆಸ್ಪತ್ರೆಯ ಸೌಲಭ್ಯ ಕೂಡ ಪಡೆಯಲು ಬಹಳ ಅಗತ್ಯವಾಗಿದೆ. ಆಸ್ಪತ್ರೆಯ ಬಿಲ್ ವಿನಾಯಿತಿ ಹಾಗೂ ಇತರ ಸರಕಾರಿ ಸೌಲಭ್ಯ ಪ್ರಯೋಜನೆಗಳನ್ನು ಪಡೆಯಲು ಅತ್ಯವಶ್ಯಕ ಆಗಿದೆ. ಇದರ ಮೂಲಕ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಹಾಗೂ ಕೆಲವು ಖಾಸಗಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದ ಸೇವೆ ಸಿಗಲಿದೆ. ಇದು ದೇಶಾದ್ಯಂತ ಚಲಾವಣೆ ಆಗಲಿದ್ದು ಜಿಲ್ಲೆಗೆ ಪ್ರತೀ ವರ್ಷ 600 ಮಂದಿಯಂತೆ ಈ ಕಾರ್ಡ್ ಕೂಡ ಪಡೆಯುತ್ತಿದ್ದಾರೆ.

advertisement

Leave A Reply

Your email address will not be published.