Karnataka Times
Trending Stories, Viral News, Gossips & Everything in Kannada

Senior Citizen Card: 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಭರ್ಜರಿ ಸಿಹಿಸುದ್ದಿ! ಎಲ್ಲಿ ಬೇಕಾದರೂ ಪ್ರಯಾಣಿಸಿಬಹುದು

advertisement

ಕೇಂದ್ರ ಸರ್ಕಾರ 60 ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಈಗ ವಿಶೇಷವಾದ ಸೀನಿಯರ್ ಸಿಟಿಜನ್ ಕಾರ್ಡ್ (Senior Citizen Card) ಅನ್ನು ಕೂಡ ಜಾರಿಗೆ ತಂದಿದೆ. ಇದರಿಂದಾಗಿ 60 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ಸರ್ಕಾರ ನೀಡಿದೆ. ವಯಸ್ಸಾದ ನಂತರ ಯಾವುದೇ ರೀತಿಯ ಚಿಂತೆ ಮಾಡುವ ಅಗತ್ಯ ಇರುವುದಿಲ್ಲ ಯಾಕೆಂದರೆ ಕಾಳಜಿ ವಹಿಸುತ್ತೆ. ನೀವು ಕೂಡ ನಿಮ್ಮ ಮನೆಯಲ್ಲಿರುವಂತಹ ಹಿರಿಯ ನಾಗರಿಕರಿಗೆ ಸರ್ಕಾರದ ಈ ಅಧಿಕೃತ ವೆಬ್ಸೈಟ್ಗೆ ಹೋಗುವ ಮೂಲಕ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

Senior Citizen Card:

 

Image Source: IndiaMART

 

60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಹಿಸಿರುವಂತಹ ಹಿರಿಯ ನಾಗರಿಕರಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸೀನಿಯರ್ ಸಿಟಿಜನ್ ಕಾರ್ಡ್ (Senior Citizen Card) ಅನ್ನು ಜಾರಿಗೆ ತಂದಿದೆ. ಇದರಲ್ಲಿ ಆ ಹಿರಿಯ ನಾಗರಿಕರ ಪ್ರತಿಯೊಂದು ಮಾಹಿತಿಗಳನ್ನು ತುಂಬಲಾಗುತ್ತದೆ ಅದರ ಜೊತೆಗೆ ಮೆಡಿಕಲ್ ಮಾಹಿತಿಗಳು ಕೂಡ ಇದರಲ್ಲಿ ಇರುತ್ತವೆ. ಇದರಿಂದಾಗಿ IT Return ಅನ್ನು ಸಲ್ಲಿಸದೆ ಇರುವುದು, ರೈಲು ಹಾಗೂ ವಿಮಾನ ಪ್ರಯಾಣದಲ್ಲಿ ಟಿಕೆಟ್ ದರದಲ್ಲಿ ರಿಯಾಯಿತಿ ಸಿಗುವುದು, BSNL ನಂತಹ ಸರ್ಕಾರಿ ಕಂಪನಿಗಳ ಸೇವೆಯ ಬಿಲ್ ನಲ್ಲಿ ರಿಯಾಯಿತಿ ದೊರಕುವುದು ಹೇಗೆ ಹತ್ತು ಹಲವರು ಲಾಭಗಳು ದೊರಕುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರಕುತ್ತದೆ. ರಾಜ್ಯ ಹಾಗೂ ರಾಷ್ಟ್ರ ಸರ್ಕಾರ ನೀಡುವಂತಹ ಕೆಲವೊಂದು ಯೋಜನೆಗಳ ಪ್ರಮುಖ ಪ್ರಯೋಜನಗಳನ್ನು ಹಿರಿಯ ನಾಗರಿಕರು ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಡ್ ಯೋಜನೆಯನ್ನು ಜಾರಿಗೆ ತರಲಾಗಿದೆ.

ಸೀನಿಯರ್ ಸಿಟಿಜನ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ಯೋಗ್ಯತೆ ಹಾಗೂ ಡಾಕ್ಯುಮೆಂಟ್ ಗಳು:

 

advertisement

Image Source: IDFC FIRST Bank

 

  • ವ್ಯಕ್ತಿ ಪ್ರಮುಖವಾಗಿ ಅರವತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹೊಂದಿರಬೇಕು ಹಾಗೂ ಭಾರತೀಯರಾಗಿರಬೇಕು. ಅದರ ಜೊತೆಗೆ ಅವರು ಬಳಿ ನಿವಾಸ ಪ್ರಮಾಣ ಪತ್ರ ಇರಬೇಕು.
  • ಮೊಬೈಲ್ ನಂಬರ್ ಹಾಗೂ ಅದಕ್ಕೆ ಲಿಂಕ್ ಆಗಿರುವ ಆಧಾರ್ ಕಾರ್ಡ್ (Aadhaar Card) ಬೇಕಾಗಿರುತ್ತದೆ.
  • ಆದಾಯ ಪ್ರಮಾಣ ಪತ್ರದ ಜೊತೆಗೆ ತಮ್ಮ ಪಾಸ್ಪೋರ್ಟ್ ಸೈಜ್ನ ಫೋಟೋ ಹಾಗೂ ರೇಷನ್ ಕಾರ್ಡ್ (Ration Card) ಬೇಕಾಗಿರುತ್ತದೆ.
  • ನಿವಾಸ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ ಬೇಕಾಗಿರುತ್ತದೆ.

Senior Citizen Card Benefits:

  1. ರೈಲು ಹಾಗೂ ವಿಮಾನ ಪ್ರಯಾಣದ ಸಂದರ್ಭದಲ್ಲಿ ಟಿಕೆಟ್ ದರದಲ್ಲಿ ರಿಯಾಯಿತಿ ಅಥವಾ ಸಂಪೂರ್ಣ ರಿಯಾಯಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಈ ವಿಶೇಷವಾದ ಸೀನಿಯರ್ ಸಿಟಿಜನ್ ಕಾರ್ಡ್ ಅನ್ನು ಉಪಯೋಗಿಸಬಹುದಾಗಿದೆ.
  2. ದೇಶದ ಯಾವುದೇ ಮೂಲೆಯಲ್ಲಿ ಹಿರಿಯ ನಾಗರಿಕರಿಗೆ ಉಚಿತವಾದ ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಕರ್ಯಗಳನ್ನು ಈ ಕಾಡಿನ ಮೂಲಕ ನೀಡಲಾಗುತ್ತದೆ.
  3. ಕೆಲವೊಂದು ಸರ್ಕಾರಿ ಕಂಪನಿಗಳಲ್ಲಿ ಸೈನ್ ಅಪ್ ಮಾಡಿದರೆ ಈ ಕಾರ್ಡನ್ನು ಹೊಂದಿರುವಂತಹ ಹಿರಿಯ ನಾಗರಿಕರು ಕೆಲವೊಂದು ಶುಲ್ಕ ಗಳನ್ನು ನೀಡಬೇಕಾದ ಅಗತ್ಯ ಇರುವುದಿಲ್ಲ. ಇದರ ಜೊತೆಗೆ ಅಂಚೆ ಕಚೇರಿಯಲ್ಲಿ ಯಾವುದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹಿರಿಯ ನಾಗರಿಕರಿಗೆ ಬೇರೆಯವರ ಹೋಲಿಕೆಯಲ್ಲಿ ಹೆಚ್ಚಿನ ಲಾಭಗಳು ಸಿಗುತ್ತವೆ.
  4. ಬೇರೆಯವರಿಗೆ ಹೋಲಿಸಿದರೆ ಈ ಕಾರ್ಡ್ ಅನ್ನು ಹೊಂದಿರುವಂತಹ ಹಿರಿಯ ನಾಗರಿಕರು ಟ್ಯಾಕ್ಸ್ ಕಟ್ಟುವ ಸಂದರ್ಭದಲ್ಲಿ ರಿಯಾಯಿತಿಯನ್ನು ಪಡೆದುಕೊಳ್ಳುತ್ತಾರೆ ಹಾಗೂ ವೃದ್ಧಾಪ್ಯದಲ್ಲಿ ಉತ್ತಮ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ.

ಸೀನಿಯರ್ ಸಿಟಿಜನ್ ಕಾರ್ಡಿಗೆ ಆನ್ಲೈನ್ ಮೂಲಕ ಅಪ್ಲೈ ಮಾಡೋದು ಹೇಗೆ:

  • https://services.india.gov.in/service/detail/apply-for-senior-citizen-certificate-1 ಮೊದಲನೆಯದಾಗಿ ನೀವು ಈ ಅಧಿಕೃತ ವೆಬ್ ಸೈಟ್ ಗೆ ಹೋಗಬೇಕಾಗಿರುತ್ತದೆ. ಇದಾದ ನಂತರ ಹೋಂ ಪೇಜ್ ಗೆ ಹೋಗಿ ಹೊಸ ರಿಜಿಸ್ಟ್ರೇಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
  • ನಂತರ ನಿಮ್ಮ ಬಗ್ಗೆ ಕೇಳುವಂತಹ ಮಾಹಿತಿಗಳನ್ನು ತುಂಬಾ ಬೇಕಾಗಿರುತ್ತದೆ ಹಾಗೂ ಅಗತ್ಯ ಇರುವಂತಹ ಡಾಕ್ಯುಮೆಂಟ್ ಗಳನ್ನು ಅಟ್ಯಾಚ್ ಮಾಡಬೇಕಾಗಿರುತ್ತದೆ.
  • ಎಲ್ಲಾ ದಾಖಲೆ ಹಾಗೂ ವಿವರಗಳನ್ನು ಸರಿಯಾದ ರೀತಿಯಲ್ಲಿ ಚೆಕ್ ಮಾಡಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ ಇಲ್ಲಿಗೆ ನೀವು ನಿಮ್ಮ ಸೀನಿಯರ್ ಸಿಟಿಜನ್ ಕಾರ್ಡ್ ಪಡೆದುಕೊಳ್ಳುವಂತಹ ಅರ್ಜಿ ಪ್ರಕ್ರಿಯೆಯನ್ನು ಪೂರೈಸಿದಂತಾಗುತ್ತದೆ.

advertisement

Leave A Reply

Your email address will not be published.