Karnataka Times
Trending Stories, Viral News, Gossips & Everything in Kannada

Yuva Nidhi Scheme: ಯುವನಿಧಿ ಯೋಜನೆ ಇವರಿಗೆ ಮಾತ್ರ ಸಿಗುತ್ತೆ! ಅರ್ಹರು ಈ ದಾಖಲೆಗಳು ರೆಡಿ ಇಟ್ಟುಕೊಳ್ಳಿ.

advertisement

ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಕೊನೆಗೂ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಯುವನಿಧಿ ಯೋಜನೆ (Yuva Nidhi Scheme) ಯನ್ನು ಜಾರಿ ಮಾಡಿದೆ. ಈ ಮೂಲಕ ಸಾವಿರಾರು ನಿರುದ್ಯೋಗಿಗಳು ನಿಗದಿತ ಕಾಲದ ವರೆಗೆ ಪ್ರತಿ ತಿಂಗಳು ಭತ್ಯೆ ಪಡೆದುಕೊಳ್ಳಬಹುದಾಗಿದ್ದು, ಇದರಿಂದಾಗಿ ಸಾಕಷ್ಟು ಯುವಕರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.ಸದ್ಯವೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದಿನ ವಾರ ಡಿಸೆಂಬರ್ 26 ರಿಂದ ಶುರುವಾಗಲಿದೆ.

WhatsApp Join Now
Telegram Join Now

ಸೇವಾ ಸಿಂಧು ಮೂಲಕವೇ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಸಮೀಪದ ಆನ್‌ಲೈನ್‌ ಸೆಂಟರ್‌ಗಳಿಗೆ ತೆರಳಿ ಸೇವಾ ಸಿಂಧು ಪೋರ್ಟಲ್‌ (Seva Sindhu Portal) ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲವೇ ನೀವೇ ಖುದ್ದು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಅರ್ಜಿ ಸಲ್ಲಿಸಿ ಪರಿಶೀಲನೆ ಬಳಿಕ ಅರ್ಹರಾದವರಿಗೆ 2024ರ ಜನವರಿ ತಿಂಗಳಿನಿಂದಲೇ ಯುವನಿಧಿ ಸಹಾಯಧನ ಬ್ಯಾಂಕ್‌ಗಳ ಖಾತೆ (Bank Account) ಗೆ ಬರಲಿದೆ.

ಪದವಿ (Degree) ಇಲ್ಲವೇ ಡಿಪ್ಲೊಮಾ (Diploma) ಮುಗಿಸಿ ಆರು ತಿಂಗಳು ಕಳೆದರೂ ಉದ್ಯೋಗ ಲಭಿಸಿದೇ ಇರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ (Yuva Nidhi Scheme) ಅನ್ವಯಿಸುತ್ತದೆ. ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆ ಈ ಉದ್ಯೋ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ.

ಯುವನಿಧಿಗೆ ಯಾರೆಲ್ಲಾ ಅರ್ಹರು?

 

 

2022-23ರಲ್ಲಿ ಉತ್ತೀರ್ಣರಾಗಿರುವ 18 ರಿಂದ 25 ವರ್ಷದೊಳಗಿನ ನಿರುದ್ಯೋಗಿ ಪದವೀಧರರು ಇನ್ಮುಂದೆ ಪ್ರತಿ ತಿಂಗಳು 3000 ರೂ. ನಿರುದ್ಯೋಗ ಭತ್ಯೆ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಡಿಪ್ಲೋಮಾ ವಿದ್ಯಾಭ್ಯಾಸ ಮಾಡಿರುವವರು ಪ್ರತಿ ತಿಂಗಳು 1500ರೂ.ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ ಮಂಗಳಮುಖಿಯರಿಗೂ ಸಹ ಇದು ಅನ್ವಯವಾಗುತ್ತದೆ. ಈ ಪ್ರಕ್ರಿಯೆ 24 ತಿಂಗಳವರೆಗೆ ಮಾತ್ರ ಇರುತ್ತದೆ.

advertisement

ಈ ಯುವನಿಧಿಗೆ ಅರ್ಹರಾದ ವಿದ್ಯಾರ್ಥಿಗಳು ನಿಗದಿಪಡಿಸಿದ 24 ತಿಂಗಳ ಒಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ (Govt Job) ಪಡೆದುಕೊಳ್ಳಲು ಪಡೆದುಕೊಂಡರೆ ಅಂತಹ ಪದವೀಧರರಿಗೆ ಹಾಗೂ ಡಿಪ್ಲೋಮಾ ಹೊಂದಿರುವವರಿಗೆ ಈ ಹಣ ನೀಡುವುದನ್ನು ನಿಲ್ಲಿಸಲಾಗುತ್ತದೆ. ಗಮನಿಸಬೇಕಾದ ವಿಷಯ ಏನೆಂದರೆ ಈ ಅರ್ಜಿ ಸಲ್ಲಿಕೆ ಮಾಡಲು ಮುಂದಿನ ಆರು ತಿಂಗಳ ವರೆಗೆ ಕಾಲಾವಕಾಶ ನಿಡಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

ಯುವನಿಧಿಗೆ (Yuva Nidhi) ಅರ್ಜಿ ಸಲ್ಲಿಸಲು ಆಫ್‌ಲೈನ್‌ ಹಾಗೂ ಆನ್‌ಲೈನ್‌ ಎರಡೂ ಆಯ್ಕೆಯನ್ನು ನೀಡಲಾಗುತ್ತವೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಸಂಬಂಧ ವೆಬ್‌ಸೈಟ್‌ ಲಭ್ಯವಾಗಲಿದೆ. ಇದರಲ್ಲಿ ನಿರುದ್ಯೋಗಿ ವಿದ್ಯಾರ್ಥಿಗಳು ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಹಾಗೂ ದಾಖಲೆಗಳನ್ನು ಅಪ್‌ಲೋಡ್‌ ಮಾಡುವ ಮೂಲಕ ಈ ಸೇವೆ ಪಡೆದುಕೊಳ್ಳಬಹುದಾಗಿದೆ.

ಯುವನಿಧಿಗೆ ಏನೆಲ್ಲಾ ದಾಖಲೆಗಳು ಬೇಕು?

ಯುವನಿಧಿ ಪ್ರಯೋಜನ ಪಡೆದುಕೊಳ್ಳಲು ಅರ್ಹರಾದ ನಾಡಿನ ಎಲ್ಲಾ ನಿರುದ್ಯೋಗಿಗಳ ಬಳಿ ಕಡ್ಡಾಯವಾಗಿ ಈ ದಾಖಲೆಗಳು ಇರಲೇಬೇಕು.

  • Aadhaar Card
  • Permanent Certificate
  • Income Certificate
  • Educational Qualification Documents
  • Bank Account
  • Passport Size Photo
  • Mobile Number
  • Caste Certificate (If Applicable)
  • SSLC Marks List
  • Graduation Certificate and Mark Sheet

advertisement

Leave A Reply

Your email address will not be published.