Karnataka Times
Trending Stories, Viral News, Gossips & Everything in Kannada

Ramalinga Reddy: ಬಸ್ ನಲ್ಲಿ ಪ್ರಯಾಣಿಸುವ ಎಲ್ಲರಿಗೂ ಸರ್ಕಾರದ ಮಹತ್ವದ ಆದೇಶ, ಹೊಸ ನಿಯಮ ಜಾರಿಗೆ!

advertisement

ರಾಜ್ಯದಲ್ಲಿ ಕಳೆದ ಕೆಲ ವರ್ಷದಿಂದ ಕೊರೊನಾ ಸೋಂಕು ರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆ ಆಗುತ್ತಿದ್ದು. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ‌. ಕೊರೊನಾ ಸೋಂಕಿನ ಹೊಸ ಹೊಸ ರೂಪಾಂತರ ಪ್ರಕರಣ ಹೆಚ್ಚಾಗುತ್ತಿದ್ದು ಈಗಾಗಲೇ ಕರ್ನಾಟಕದಲ್ಲಿ ಈ ಬಗ್ಗೆ ಕೆಲ ಅಗತ್ಯ ಕ್ರಮ ಮೊದಲೇ ಕೈಗೊಳ್ಳಲಾಗುತ್ತಿದೆ. ಜೆಎನ್ 1 ರೂಪಾಂತರ ರಾಷ್ಟ್ರೀಯ ಮಟ್ಟದಲ್ಲಿ ಬಹಳ ದೊಡ್ಡ ಮಟ್ಟದ ಚರ್ಚೆಯಾಗುತ್ತಿದ್ದು ಈಗಾಗಲೇ ಈ ಕೊರೊನಾ ಸೋಂಕಿನ ಹಬ್ಬುವಿಕೆ ತಡೆಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ.

WhatsApp Join Now
Telegram Join Now

ಕೋವಿಡ್ ತೀವ್ರ ಪರಿಸ್ಥಿತಿ ಎದುರಿಸುವ ಸಲುವಾಗಿ ಈಗಾಗಲೇ ಪ್ರಯತ್ನ ಪಡಲಾಗುತ್ತಿದೆ. ಇದರ ಹರಡುವಿಕೆ ತಡೆಹಿಡಿಯಲು ಕೋವಿಡ್ ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ. ಮುಂಜಾಗೃತೆಯ ಕ್ರಮವಾಗಿ ಅರವತ್ತು ವರ್ಷದ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಅದೇ ರೀತಿ ಸರಕಾರ ಈ ಬಗ್ಗೆ ಅನೇಕ ಆದೇಶ ಹೊರಡಿಸಲಾಗಿದ್ದು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಕೂಡ ಕೆಲ ಅಗತ್ಯ ಕ್ರಮವನ್ನು ಕೇಂದ್ರ ಸರಕಾರದ ಆದೇಶದ ಅನ್ವಯ ಪಾಲಿಸಲು ಮುಂದಾಗಿದೆ.

ಸಚಿವರಿಂದ ಆದೇಶ

ಕೋವಿಡ್ ಹರಡುವಿಕೆ ಪ್ರಮಾಣ ತಗ್ಗಿಸಲು ಮೊದಲ ಹಂತದಲ್ಲಿ ಜನರು ಅತಿಯಾಗಿ ಸೇರುವ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯ ಮತ್ತು ಸ್ಯಾನಿಟೈಸೇಶನ್ ಸೇರಿದಂತೆ ಕೆಲ ಅಗತ್ಯ ಕ್ರಮ ತೆಗೆದುಕೊಳ್ಳಲು ಮುಂದಾಗಲಿದೆ‌. ಅದೇ ರೀತಿ ಅಂತಹ ಜನದಟ್ಟಣೆಯ ಸೇರುವ ಸಾಲಿನಲ್ಲಿ ಸದ್ಯ ಕರ್ನಾಟಕದ ಸರಕಾರಿ ಬಸ್ ಕೂಡ ಸೇರಿಕೊಂಡಿದೆ. ಸರಕಾರಿ ಬಸ್ ಗಳು ಪ್ರಸ್ತುತ ಶಕ್ತಿ ಯೋಜನೆ ಇರುವ ಹಿನ್ನೆಲೆಯಲ್ಲಿ ಸದಾ ತುಂಬಿಕೊಳ್ಳುತ್ತಲಿದ್ದು ಈ ಬಗ್ಗೆ ಮೊದಲೇ ಎಚ್ಚೆತ್ತುಕೊಳ್ಳುವ ಸಲುವಾಗಿ ಸರಕಾರಿ ಬಸ್ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ಮಾಡಲು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy)ಅವರು ಆದೇಶ ನೀಡಿದ್ದಾರೆ.

ಸೂಚನೆ ನೀಡಿದ್ದಾರೆ

advertisement

ಇದೀಗ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸುವಂತೆ ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ. ಕೇರಳದಿಂದ ಪ್ರಯಾಣ ಮಾಡುವ ಹಾಗೂ ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ಮುನ್ನೆಚ್ಚರಿಕಾ ಕ್ರಮವನ್ನು ಅನುಸರಿಸಬೇಕು. ಸ್ಯಾನಿಟೈಸರ್ ಸಿಂಪಡಿಸುವಿಕೆ ಅಗತ್ಯ ಎಂದಿದ್ದಾರೆ.

ಮಾಸ್ಕ್ ಕಡ್ಡಾಯ

ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಮನವಿ ಮಾಡಿದರು. ಇಂದು ಮಾಧ್ಯಮದವರೊಂದಿಗೆ ಸಭೆ ನಡೆಸಿ ಮಾತನಾಡಿದ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು ಸರ್ಕಾರದ ಆದೇಶವನ್ನು ನಾವು ಕಟ್ಟನಿಟ್ಟಾಗಿ ಪಾಲನೆ ಮಾಡುತ್ತೇವೆ. ಕೇಂದ್ರ ಆರೋಗ್ಯ ಸಚಿವರ ಜೊತೆ ಸಚಿವ ದಿನೇಶ್ ಗುಂಡೂರಾವ್ ಸಭೆಯು ನಡೆದಿದೆ. ಅದರಂತೆ ಮುಜರಾಯಿ ಇಲಾಖೆ ಹಾಗೂ ಸಾರಿಗೆ ನಿಗಮಗಳಲ್ಲಿ ಕ್ರಮ ತೆಗೆದುಕೊಳ್ಳಲು ಸೂಕ್ತ ವ್ಯವಸ್ಥೆ ಜಾರಿಗೆ ತರುತ್ತೇವೆ ಎಂದಿದ್ದಾರೆ.

ಮಾರ್ಗಸೂಚಿ ಪ್ರಕಟ

  • ಶೀತಜ್ವರ, ಉಸಿರಾಟದ ತೊಂದರೆ ಸೇರಿ ಕೋವಿಡ್ ಲಕ್ಷಣಗಳಿದ್ದರೆ ಸೋಂಕು ಪರೀಕ್ಷೆಗೆ ಒಳಗಾಗಬೇಕು
  • ಇನ್ನು ತಮಿಳುನಾಡು ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಜ್ವರ, ಕೆಮ್ಮು ಇದ್ದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ.ಅದೇ ರೀತಿ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ
  • ಅದೇ ರೀತಿ ಉತ್ತಮ ವೈಯಕ್ತಿಕ ಸ್ವಚ್ಛತೆ, ಆಗಾಗ್ಗೆ ಕೈಗಳನ್ನು ತೊಳೆಯುದು, ಇತ್ಯಾದಿಗಳ ಪಾಲನೆಯು ಅಗತ್ಯವಾಗಿದೆ ಎಂದು ಸೂಚನೆ ನೀಡಿದ್ದಾರೆ.
  • ಅದೇ ರೀತಿ ಗಡಿ ಜಿಲ್ಲೆಗಳ ಕೋವಿಡ್ ಪರೀಕ್ಷಾ ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಲು ಜಿಲ್ಲಾಡಳಿತಗಳಿಗೆ ಈಗಾಗಲೇ ಸೂಚನೆಯನ್ನು ಸಹ ನೀಡಲಾಗಿದೆ.

advertisement

Leave A Reply

Your email address will not be published.