Karnataka Times
Trending Stories, Viral News, Gossips & Everything in Kannada

Stree Shakti Sangha: ಸ್ತ್ರೀ ಶಕ್ತಿ ಮಹಿಳಾ ಸಂಘಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್! ಅಧಿಕೃತ ಆದೇಶ

advertisement

ಸರಕಾರವು ಮಹಿಳೆಯರ ಏಳಿಗೆಗಾಗಿ ಹಲವು ಯೋಜನೆ ರೂಪಿಸಿದೆ. ಈಗಾಗಲೇ ರಾಜ್ಯ ಸರಕಾರವು ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆ (Shakti Yojana) ರೂಪಿಸಿದೆ.ಅದೇ ರೀತಿ ಮಾತೃಶ್ರೀ ಯೋಜನೆ, ಮಾತೃ ವಂದನಾ ಯೋಜನೆ, ಮಾತೃ ಶ್ರಿ ಯೋಜನೆ ಸೇರಿದಂತೆ ಮಹಿಳಾ ಸಬಲೀಕರಣಕ್ಕಾಗಿ ಒತ್ತು ನೀಡುತ್ತಿದೆ‌. ಈಗಾಗಲೇ ಸ್ತ್ರಿ ಶಕ್ತಿ ಯೋಜನೆ (Stree Shakti Yojana) ಯನ್ನು ಜಾರಿಗೆ ಮಾಡಿದ್ದು ಈ ಯೋಜನೆಯ ಮೂಲಕ ಹಲವು ರೀತಿಯ ಸೌಲಭ್ಯಗಳು ಮಹಿಳೆಯರಿಗೆ ಸಿಗ್ತಾ ಇದೆ. ಮಹಿಳೆಯರಿಗಾಗಿಯೇ ಸ್ವ-ಸಹಾಯ ಸಂಘಗಳ ಸದಸ್ಯರಾಗಿರುವವರಿಗೆ ಉದ್ಯಮಶೀಲತೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಈಗಾಗಲೇ ಕಾಯಕ ಯೋಜನೆ ಕೂಡ ಜಾರಿ ಮಾಡಿದೆ.

WhatsApp Join Now
Telegram Join Now

ಸ್ವಸಹಾಯ ಸಂಘಗಳಿಗೆ ಈಗಾಗಲೇ ಸ್ವ ಉದ್ಯಮ, ಉದ್ಯಮ ಶೀಲತೆ ಗಾಗಿ 5 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಅದೇ ರೀತಿ 5 ಲಕ್ಷ ಮೇಲ್ಪಟ್ಟು, 10 ಲಕ್ಷದವರೆಗೆ ಸಾಲ ಬೇಕಿದ್ದರೆ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.

ಇದೀಗ ರಾಜ್ಯದಲ್ಲಿ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ಬಂದಿದ್ದು ಸ್ರ್ತಿ ಶಕ್ತಿ ಸಂಘದಲ್ಲಿ (Stree Shakti Sangha) ಇದ್ದರೆ ಮಹಿಳೆಯರಿಗೆ ಈ ಅವಕಾಶವೂ ಇರಲಿದೆ. ಹೌದು ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಿಲ್ ಮತ್ತು ಆಸ್ತಿ ತೆರಿಗೆ ಬಾಕಿ ಮೊತ್ತ ಪಡೆಯುವ ಜವಾಬ್ದಾರಿಯನ್ನು ಮಹಿಳಾ ಸ್ವಸಹಾಯ ಗುಂಪು, ಸರ್ಕಾರೇತರ ಸಂಸ್ಥೆ ಹಾಗೂ ಸ್ತ್ರೀಶಕ್ತಿ ಗುಂಪುಗಳಿಗೆ ವಹಿಸಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ.

 

advertisement

Image Source: Medium

 

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಣೆ ಸರಿಯಾದ ಮಟ್ಟದಲ್ಲಿ ಆಗುತ್ತಿಲ್ಲ ಎಂಬ ಬಗ್ಗೆ ಅಧಿಕಾರಿಗಳ ಮಾಹಿತಿ ಪಡೆದು ಸಂಪುಟ‌ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಲಾಯಿತು. ಹಾಗಾಗು ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಹಾಗೂ ಬಾಕಿ ವಸೂಲಾತಿ ಮಾಡಲು ಸ್ಥಳೀಯ ಮಹಿಳಾ ಸ್ವ ಸಹಾಯ ಗುಂಪುಗಳ ಸೇವೆಯನ್ನು ಪಡೆಯಲು ತಿರ್ಮಾನ ಮಾಡಲಾಯಿತು.ಇದಕ್ಕಾಗಿ ನೀರಿನ ಬಿಲ್, ಆಸ್ತಿ ತೆರಿಗೆ ಬಾಕಿ ವಸೂಲಿ ಮೊತ್ತದಲ್ಲಿ ಶೇ. 5ರಷ್ಟು ಪ್ರೋತ್ಸಾಹ ಧನವಾಗಿ ಮಹಿಳೆಯರಿಗೆ ನೀಡಲಾಗುತ್ತದೆ.

ರಾಜ್ಯದಲ್ಲಿ ಸುಮಾರು 10 ಮಹಾನಗರ ಪಾಲಿಕೆ, 61 ನಗರ ಸಭೆ, 114 ಪಟ್ಟಣ ಪಂಚಾಯಿತಿ ಸೇರಿ ಎಲ್ಲ 315 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಪಡೆಯಲು ಸ್ಥಳೀಯ ಮಹಿಳಾ ಸ್ವಸಹಾಯ ಗುಂಪುಗಳಿಗೆ ವಹಿಸಿಕೊಡಲಾಗುತ್ತದೆ. ಈಗಾಗಲೇ ಕೆಲಸ ಇಲ್ಲದೆ, ಮನೆಯಲ್ಲಿರುವ ಮಹಿಳೆಯರಿಗೆ ಈ ಕೆಲಸ ಸುಲಭ ವಾಗಲಿದೆ.ಇದರಿಂದ ಶೇ. 5ರಷ್ಟು ಮೊತ್ತ ಇವರಿಗೆ ನೀಡಲಾಗುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು ಈಗಾಗಲೇ ರಾಜ್ಯದಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಮಹಿಳಾ ಸ್ವಸಹಾಯ ಸಂಘ ಗಳಿಗೆ ಇದರಿಂದ ಪ್ರಗತಿ ಕಾಣಲು ಸುಲಭ ವಾಗುತ್ತದೆ. ಮಹಿಳೆಯರಿಗೂ ಪ್ರೋತ್ಸಾಹ ಸಿಕ್ಕಂತೆ ಆಗಲಿದೆ.ಹಾಗಾಗಿ ಸ್ರ್ತಿ ಸಂಘ ಉತ್ತೇಜಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ.

advertisement

Leave A Reply

Your email address will not be published.