Karnataka Times
Trending Stories, Viral News, Gossips & Everything in Kannada

Free Sewing Machine: ಸರಕಾರದಿಂದ ಸಿಗಲಿದೆ ಉಚಿತ ಹೊಲಿಗೆ ಯಂತ್ರ ಪಡೆಯಲು ಈ ವಿಧಾನ ಅನುಸರಿಸಿ

advertisement

ರಾಜ್ಯ ಸರಕಾರದಿಂದ ಹೊಸದಾಗಿ ಕಾಂಗ್ರೆಸ್ ಸರಕಾರ ಬಂದರೆ ಅನೇಕ ಯೋಜನೆ ಜಾರಿಗೆ ತರುವ ಭರವಸೆ ನೀಡಲಾಗಿತ್ತು ಅದರ ಪ್ರಕಾರ ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಯೋಜನೆ ಜಾರಿಯಾದ ಕಾರಣ ಅನೇಕರಿಗೆ ಈ ಎಲ್ಲ ಯೋಜನೆಗೆಳು ಕೂಡ ದೊಡ್ಡ ಮಟ್ಟಿಗೆ ಸಹಕಾರ ನೀಡಿದೆ ಎಂದು ಹೇಳಬಹುದು. ಪಂಚ ಯೋಜನೆ ಮಾನ್ಯತೆ ಪಡೆಯುವ ಜೊತೆ ಜೊತೆಗೆ ಅನೇಕ ಬಡವರ್ಗದವರಿಗಾಗಿ ಸಾಲ ಸೌಲಭ್ಯ ಹಾಗೂ ಕೌಶಲ್ಯ ಅಭಿವೃದ್ಧಿ ಯೋಜನೆ ಸಹ ಜಾರಿಗೆ ತರಲಾಗುತ್ತಿದೆ. ಹಾಗಾಗಿ ಅಂತಹ ಯೋಜನೆಯಲ್ಲಿ ಸರಕಾರದಿಂದ ಹೊಲಿಗೆ ಯಂತ್ರದ ವಿತರಣೆ ಮಾಡುವುದನ್ನು ನಾವು ಕಾಣಬಹುದು.

ಉಚಿತ ಹೊಲಿಗೆ ಯಂತ್ರ:

 

Image Source: AhmednagarLive24

 

ಬಡವರ್ಗದ ಮಹಿಳೆಯರಿಗೆ ಹಾಗೂ ಪುರುಷರು ಸ್ವ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ನೆಲೆಯಲ್ಲಿ ಅವರಿಗೆ ಕೌಶಲ್ಯ ಅಭಿವೃದ್ಧಿ ಮಾಡುವ ಅನೇಕ ವಿಚಾರದ ಬಗ್ಗೆ ಸರಕಾರ ಮಾಹಿತಿ ನೀಡಲಾಗುತ್ತಿದೆ. ಹೀಗಾಗಿ ಉಚಿತ ಹೊಲಿಗೆ ಯಂತ್ರ (Free Sewing Machine) ವನ್ನು ಪಡೆದು ಕೂಡ ನೀವು ಅದರಿಂದ ಆದಾಯವನ್ನು ಕೂಡ ಗಳಿಸಬಹುದಾಗಿದೆ ಹಾಗಾಗಿ ನೀವು ಉಚಿತವಾಗಿ ಹೊಲಿಗೆ ಯಂತ್ರವನ್ನು ಸುಲಭವಾಗಿ ಪಡೆದು ಬಳಿಕ ಆದಾಯ ಪಡೆದು ಸಾಧನೆಯನ್ನು ಮಾಡಬಹುದು.

ಯೋಜನೆಯ ಹೆಸರೇನು?

ಶ್ರಮ ಶಕ್ತಿ (Shram Shakti) ವಿಶೇಷ ಮಹಿಳಾ ಯೋಜನೆಯ ಅಡಿಯಲ್ಲಿ ಸರಕಾರದಿಂದ ಅನೇಕ ಸೌಲಭ್ಯ ಸಿಗಲಿದೆ. ಈ ಯೋಜನೆಯ ಮೂಲಕ 50,000 ಸಹಾಯಧನ ಸಿಗಲಿದ್ದು ಅದರಲ್ಲಿ 25,000 ವಾಪಾಸ್ಸು ನೀಡಬೇಕು.ಈ ಯೋಜನೆಯನ್ನು ಯಾರೆಲ್ಲ ಪಡೆಯಬಹುದು, ಈ ಯೋಜನೆಗೆ ಇರುವ ಸಾಮಾನ್ಯ ಅರ್ಹತೆ ಏನು? ಇದಕ್ಕೆ ಅರ್ಜಿ ಹೇಗೆ ಸಲ್ಲಿಸುವುದು ಎಂಬ ಇತ್ಯಾದಿ ಮಾಹಿತಿಯನ್ನು ನಾವು ಇಂದು ನಿಮಗೆ ನೀಡಲಿದ್ದೇವೆ. ಹಾಗಾಗಿ ಈ ಮಾಹಿತಿ ಪೂರ್ತಿ ಓದಿ.

advertisement

ಯಾವುದಕ್ಕೆಲ್ಲ ಬಳಸಬಹುದು?

 

Image Source: Lokmat

 

ಶ್ರಮ ಶಕ್ತಿ ಯೋಜನೆ (Shram Shakti Yojana) ಮೂಲಕ ಸಿಗುವ ಹಣವನ್ನು ನೀವು ಹೊಲಿಗೆ ಯಂತ್ರ (Sewing Machine) ಖರೀದಿ ಮಾಡಲು ಬಳಸಬಹುದು. ಇಲ್ಲವೇ ಮರಗೆಲಸ ಮಾಡಲು ಸಹ ಬಳಸಬಹುದು. ದೋಬಿ ಕೆಲಸ ಮಾಡುವವರು, ಕ್ಷೌರಿಕರು ಕೂಡ ಈ ಮೊತ್ತ ಪಡೆಯಬಹುದು. ಅದಲ್ಲದೆ ಇನ್ನಿತರ ಸ್ವ ಉದ್ಯೋಗಕ್ಕೆ ಬೇಕಾದ ಕೌಶಲ್ಯ ಪಡೆದು ಉದ್ದಿಮೆ ಮಾಡಲು ಸಾಧ್ಯ ಆಗದೆ ಇದ್ದವರು ಕೆಲ ಅಗತ್ಯ ದಾಖಲಾತಿ ನೀಡಿ ಅರ್ಜಿ ಸಲ್ಲಿಸಿದರೆ ಹಣ ಬಿಡುಗಡೆ ಆಗಲಿದೆ.

ಹೇಗೆ ಅರ್ಜಿ ಸಲ್ಲಿಸುವುದು?

ನೀವು ನಿಮ್ಮ ಜಿಲ್ಲೆಯ ಹೆಸರನ್ನು ಟೈಪ್ ಮಾಡಿ Search ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ನಿಮ್ಮ ಜಿಲ್ಲೆಗೆ ಸಂಬಂಧ ಪಟ್ಟ ಸರಕಾರಿ ವೆಬ್‌ಸೈಟ್‌ ಲಿಂಕ್ ಸಿಗಲಿದೆ ಅದರ ಒಳಗೆ ಪ್ರವೇಶಿಸಿ ಬಳಿಕ ___ district gov of Karnataka ಎಂದು ಇದ್ದರೆ ಅದರಲ್ಲಿ ಮತ್ತೊಂದು ಲಿಂಕ್ ಕೂಡ ಸಿಗಲಿದೆ. ಅದರಲ್ಲಿ Document ಎಂದು ಇರಲಿದೆ.

ಅದರಲ್ಲಿ ನಿಮಗೆ ಅರ್ಜಿ ಸಲ್ಲಿಸುವ ಮಾಹಿತಿ ಸಿಗಲಿದ್ದು ವೃತ್ತಿನಿರತ ಕುಶಲ ಕರ್ಮಿಗಳನ್ನು ಬೆಂಬಲಿಸುವ ಸಲುವಾಗಿ ಇಲಾಖೆ ಸೌಲಭ್ಯ ಸಿಗಲಿದೆ. https://mandya.nic.in ನಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಆಗಸ್ಟ್ 8 ರಿಂದ ಅಕ್ಟೋಬರ್10ರ ಒಳಗೆ ಅರ್ಜಿ ಸಲ್ಲಿಸಲು ಸರಕಾರ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ತಾಲೂಕು ಕೈಗಾರಿಕಾ ವಿಸ್ತಾರಣಾಧಿಕಾರಿ ಕಚೇರಿ ಭೇಟಿ ನೀಡಿದರೆ ಮಾಹಿತಿ ಕೂಡ ಸಿಗಲಿದೆ.

advertisement

Leave A Reply

Your email address will not be published.