Karnataka Times
Trending Stories, Viral News, Gossips & Everything in Kannada

Labour Card: ಕಾರ್ಮಿಕ ಕಾರ್ಡ್ ಮಾಡಿಸಿಕೊಂಡಿದ್ದ ಎಲ್ಲರಿಗೂ ಸಂಕಷ್ಟ! ಹೊಸ ನಿರ್ಧಾರ ತಿಳಿಸಿದ ಸರ್ಕಾರ

advertisement

ಇಂದು ಬಡವರ್ಗದ ಜನತೆ ಜೀವನ ನಿಭಾಯಿಸುವುದು ಕಷ್ಟವೇ ಆಗಿದೆ.ಹೌದು ದಿನ ದಿಂದ ದಿನಕ್ಕೆ ಬೆಲೆಗಳು ಏರಿಕೆ ಆಗ್ತಾ ಇದೆ,ಹಾಗಾಗಿ ಕೃಷಿಕರು, ಕಾರ್ಮಿಕರು ಇತ್ಯಾದಿ ಜೀವನ ನಡೆಸಲು ಕಷ್ಟ. ಅದಕ್ಕಾಗಿ ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯು ಹಲವು ರೀತಿಯ ಸೌಲಭ್ಯ ಗಳನ್ನು ನೀಡ್ತಾ ಇದೆ. ಹಾಗಾಗಿ ಕಟ್ಟಡ ಕೆಲಸ ಮಾಡುವ ಕಾರ್ಮಿಕರು ಕಾರ್ಮಿಕ ‌ಇಲಾಖೆಯ ಕಾರ್ಡ್ ಮಾಡಿಸುವ ಮೂಲಕ ಹಲವು ರೀತಿಯ ಸೌಲಭ್ಯ ಗಳನ್ನು ಪಡೆಯಬಹುದಾಗಿದೆ.

WhatsApp Join Now
Telegram Join Now

ಹೌದು ಈ ಕಾರ್ಡ್ (Labour Card) ಮೂಲಕ ವೈದ್ಯಕೀಯ ವೆಚ್ಚ, ಉಚಿತ ಬಸ್, ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಸೇರಿದಂತೆ ಹಲವು ಸೌಲಭ್ಯ ಗಳು ಸಿಗ್ತಾ ಇದೆ. ಆದರೆ ಇಂತಹ ಸೌಲಭ್ಯ ಗಳನ್ನು ಇಂದು ದುರುಪಯೋಗ ಮಾಡುವವರೇ ಹೆಚ್ಚು, ಇಂದು ಅರ್ಹರಿಗಿಂತ ಅನರ್ಹರೇ ಸುಳ್ಳು ದಾಖಲೆ ಮಾಡಿಸಿಕೊಂಡು ಇಂತಹ ಸೌಲಭ್ಯ ಗಳನ್ನು ಪಡೆಯುತ್ತಿದ್ದಾರೆ .

ಹೌದು ರಾಜ್ಯದಲ್ಲಿ ನಕಲಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಸರಕಾರಕ್ಕೂ ಹೆಚ್ಚಿನ ಹೊರೆ ಯಾಗ್ತಾ ಇದೆ. ಸರ್ಕಾರಿ ಸವಲತ್ತುಗಳು ಅನರ್ಹರ ಪಾಲಾಗುತ್ತಿವೆ ಹೀಗಾಗಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ನಕಲಿ ಕಾರ್ಮಿಕರ ಕಾರ್ಡ್‌ (Fake Labour Card) ಗಳನ್ನು ಸೂಕ್ತವಾಗಿ ಪರಿಶೀಲನೆ ಮಾಡಿ ಮಾಡಿ, ರದ್ದುಗೊಳಿಸಲು ಮುಂದಾಗಿದೆ.

 

advertisement

 

ಈಗಾಗಲೇ‌ 18.49 ಲಕ್ಷ ಮಹಿಳಾ ಕಾರ್ಮಿಕರು, 27.83 ಲಕ್ಷ ಪುರುಷ ಕಾರ್ಮಿಕರು ಹಾಗೂ 9,076 ಇತರೆ ಸೇರಿದಂತೆ ಒಟ್ಟು 46.42 ಲಕ್ಷ ಕಾರ್ಮಿಕರು ನೋಂದಣಿ ಮಾಡಿದ್ದಾರೆ ಎನ್ನಲಾಗಿದ್ದು ಇದರಲ್ಲಿ ಕೆಲವು ನಕಲಿ ಕಾರ್ಡ್ ಮಾಡಿಸಿದ್ದಾರೆ. ಇದನ್ನು ರಿನೀವಲ್ ಮಾಡುವ ಸಂದರ್ಭದಲ್ಲಿ ಪತ್ತೆ ಹಚ್ಚಲು ತಿರ್ಮಾನ ಮಾಡಲಾಗಿದೆ

ಈಗಾಗಲೇ ಜಿಲ್ಲೆಯಾದ್ಯಂತ ನಕಲಿ ಕಾರ್ಡ್‌ಗಳನ್ನು ಪತ್ತೆ ಹಚ್ಚಿ, ರದ್ದುಗೊಳಿಸಲು ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ನೇತೃತ್ವದಲ್ಲಿ ತಂಡ ರಚನೆ ಕೂಡ ಮಾಡಲಾಗಿದ್ದು‌ ಜಿಲ್ಲೆಯಲ್ಲಿ ನಕಲಿ ಕಾರ್ಡ್ ಪತ್ತೆ ಮಾಡಲು ವಿವಿಧ ಕ್ರಮ ವಹಿಸಲಾಗಿದೆ

ಕಾರ್ಮಿಕ ಕಾರ್ಡ್ (Labour Card) ಗೆ ಅರ್ಜಿ ಹಾಕಲು ನೋಂದಣಿ ಪೂರ್ವ ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ಕಟ್ಟಡ ಅಥವಾ ಇತರೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದ ಅವರಿಗೆ ಮಾತ್ರ ಪ್ರಮಾಣಪತ್ರ ನೀಡಲಾಗ್ತ ಇದ್ದು ಒಂದು ವೇಳೆ ನೋಂದಣಿ, ನವೀಕರಣ ಇದ್ದರೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಮಂಡಳಿಯಿಂದ ಹೊರಡಿಸಲು ಹಾಗೂ ಎಲ್ಲ ಅರ್ಜಿಗಳನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸುವುದು ಅಗತ್ಯ ಎನ್ನುವ ಸೂಚನೆ ಯನ್ನು ಕೂಡ ಕಾರ್ಮಿಕ ಇಲಾಖೆ ನೀಡಿದೆ.

advertisement

Leave A Reply

Your email address will not be published.