Karnataka Times
Trending Stories, Viral News, Gossips & Everything in Kannada

Property Rules: 2005 ರ ಮೊದಲು ಮೃತಪಟ್ಟ ಹೆಣ್ಣುಮಕ್ಕಳ ಆಸ್ತಿ ಪಾಲಿನ ಬಗ್ಗೆ ಕೋರ್ಟ್ ಹೊಸ ತೀರ್ಪು

advertisement

ಹೆಣ್ಣು ಮಕ್ಕಳಿಗೆ ಆಸ್ತಿ (Property) ಯಲ್ಲಿ ಸಮಪಾಲು ನೀಡಬೇಕು ಎಂದು ಕಾನೂನಿನಲ್ಲೇ ತಿಳಿಸಲಾಗಿದೆ. ಇದಕ್ಕಾಗಿ ಕಾನೂನು ಬದ್ಧ ನಿಯಮ ಜಾರಿಗೆ ತಂದರೂ ಕೂಡ ಸ್ತ್ರೀ ಪುರುಷರಷ್ಟೆ ಆಸ್ತಿಯಲ್ಲಿ ಪಾಲುದಾರಳು ಅಲ್ಲ ಎನ್ನುವ ಅನೇಕ ವ್ಯಾಜ್ಯಗಳು ನಮ್ಮ ಸುತ್ತಮುತ್ತಲು ನಡೆಯುತ್ತಿರುವುದನ್ನು ನಾವು ಕಾಣಬಹುದು. 2005ರಲ್ಲಿ ಹಿಂದು ಉತ್ತರಾಧಿಕಾರ ಕಾಯ್ದೆಯಲ್ಲಿ ತಿದ್ದುಪಡಿಯನ್ನು ಜಾರಿಗೆ ತರಲಾಗಿದ್ದು ಅದರ ಪ್ರಕಾರ ಆಸ್ತಿ ಹಕ್ಕನ್ನು ನೀಡಲಾಗುತ್ತದೆ. ಇದನ್ನು ಕಾನೂನುಬದ್ಧವಾಗಿ ಪ್ರಶ್ನಿಸುವ ಅಧಿಕಾರ ಹೆಣ್ಣು ಮಕ್ಕಳಿಗೆ ಇರಲಿದೆ.

WhatsApp Join Now
Telegram Join Now

2005 ರ ತಿದ್ದುಪಡಿಯನ್ನು ಜಾರಿಗೆ ತರುವ ಮುನ್ನವೇ ಮಹಿಳೆ ಮೃತ ಪಟ್ಟಿದ್ದರೆ ಆಕೆಯ ಮಕ್ಕಳಿಗೆ ಪೂರ್ವಜರ ಆಸ್ತಿಯಲ್ಲಿ ಪಾಲು ಸಿಗುತ್ತಾ ಎಂಬ ಪ್ರಶ್ನೆಗೆ ಬೆಂಗಳೂರಿನ ಹೈಕೋರ್ಟ್ (High Court) ನಲ್ಲಿ ಇದೀಗ ಉತ್ತರ ಸಿಕ್ಕಿದೆ. ಗದಗ ಜಿಲ್ಲೆತ ನರಗುಂದ ತಾಲೂಕಿನಲ್ಲಿ ಮೃತ ನಾಗವ್ವ ಹಾಗೂ ಸಂಗಮ್ಮ ಅವರ ಮಕ್ಕಳಿಗೆ ಪೂರ್ವಜರ ಆಸ್ತಿ (Inherited Property) ಯಲ್ಲಿ ಸಮಪಾಲು ನೀಡುವಂತೆ ಗದಗ ಪ್ರಧಾನ ಸಿವಿಲ್ ನ್ಯಾಯಾಧೀಶರು 2023ರಲ್ಲಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಪ್ರಶ್ನಿಸಿ ಚನ್ನಬಸಪ್ಪ ಎನ್ನುವವರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಮೇಲ್ಮನವಿಯಲ್ಲಿ ಏನಿದೆ?

ಚನ್ನಬಸಪ್ಪ ಎಂಬುವವರು ಮೃತರಾದ ನಾಗವ್ವ ಮತ್ತು ಸಂಗವ್ವ 2005ಕ್ಕೂ ಮೊದಲೇ ಮೃತ ಪಟ್ಟಿದ್ದು ಹಿಂದು ಉತ್ತರಾಧಿಕಾರ ಕಾಯ್ದೆ ಅನ್ವಯ ಆಸ್ತಿ ಪಾಲು ಪಡೆಯಲು ಅನರ್ಹರು ಹಾಗಾಗಿ ಅವರ ನಂತರದ ವಾರಸುದಾರರಿಗೆ ಪೂರ್ವಜರ ಆಸ್ತಿ (Inherited Property) ಮೇಲೆ ಹಕ್ಕು ವಿಧಿಸಲು ಸಾಧ್ಯವೇ ಎಂದು ಮೇಲ್ಮನವಿ ಸಲ್ಲಿಸಿ ಗದಗ ಪ್ರಧಾನ ಸಿವಿಲ್ ನ್ಯಾಯಾಧೀಶರು ಸಲ್ಲಿಸಿದ್ದ ಆದೇಶ ವಜಾಗೊಳಿಸಲು ಮನವಿ ಮಾಡಲಾಗಿದೆ.

advertisement

ಕಾನೂನು ಬದ್ಧ ಹಕ್ಕು:

 

Image Source: Goodreturns

 

ಆಸ್ತಿ ಹಕ್ಕು ನೀಡಲು ಕಾಯ್ದೆ ತಿದ್ದುಪಡಿ ಅವಧಿ ಮುನ್ನವೇ ಮಹಿಳೆ ಮೃತ ಪಟ್ಟಿದ್ದಾರೆ ಎಂದು ಆಕೆಯ ಉತ್ತರಾಧಿಕಾರಿಗಳಿಗೆ ಪೂರ್ವಜರ ಆಸ್ತಿಯಲ್ಲಿ ಹಕ್ಕು ನೀಡಲಾಗದು ಎಂದು ಹೇಳುವ ಅಧಿಕಾರ ಇಲ್ಲ ಎಂದು ಹೈ ಕೋರ್ಟ್ ಈ ಸಂಬಂಧಿತ ಮಹತ್ವದ ತೀರ್ಪು ನೀಡಿದೆ. ಪಿತ್ರಾರ್ಜಿತವಾಗಿ ದಕ್ಕಿದ್ದ ಆಸ್ತಿ (Property) ಯಲ್ಲಿ ಜನ್ಮದಿಂದಲೇ ಮಕ್ಕಳಿಗೆ ಆಸ್ತಿ ಹಕ್ಕು ಸಿಗಲಿದೆ.

ಇಲ್ಲಿ ಯಾವುದೆ ಉತ್ತರಾಧಿಕಾರದ ಪ್ರಶ್ನೆ ಬರಲಾರದು ಅವರು ಜೀವಂತವಾಗಿ ಇದ್ದಾರೆ ಅಥವಾ ಇಲ್ಲ ಎಂಬುದು ಅಪ್ರಸ್ತುತ. 2005 ಕ್ಕೂ ಮೊದಲೇ ಮೃತ ಪಟ್ಟ ಮಹಿಳೆಗೆ ಕಾನೂನು ಬದ್ಧ ವಾರಸುದಾರರು ಇದ್ದಲ್ಲಿ ಅವರು ತಮ್ಮ ಪಿತ್ರಾರ್ಜಿತ ಆಸ್ತಿ (Inherited Property) ಯಲ್ಲಿ ಪಾಲು ಪಡೆಯಲು ಅರ್ಹರಾಗಲಿದ್ದಾರೆ ಎಂದು ಹೈಕೋರ್ಟ್ ತೀರ್ಪು ನೀಡಿದ್ದು ಮೇಲ್ಮನವಿಯ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಹಿಂದೂ ಉತ್ತರಾಧಿಕಾರ ಕಾಯ್ದೆ ಸೆಕ್ಷನ್ 1 A ಪ್ರಕಾರ ಗಂಡು ಮಗುವಿನಂತೆ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಪಾಲು ಸಿಗಲಿದೆ. 2005ರ ತಿದ್ದುಪಡಿ ಪ್ರಕಾರ ಹೆಣ್ಣು ಮಕ್ಕಳಿಗೆ ಆಸ್ತಿ ಪಾಲನ್ನು ಪಡೆಯುವಂತೆ ಹೇಳದಿರುವ ಯಾವುದೇ ಅಧಿಕಾರ ಇಲ್ಲ ಎಂದು ಹೇಳಬಹುದು‌. ಹೆಣ್ಣು ಮಗಳು 2005 ಕ್ಕೂ ಮೊದಲೇ ಮೃತಳಾದರೂ ಕಾನೂನಾತ್ಮಕ ರೀತಿಯಲ್ಲಿ ಆಕೆಯ ವಾರಸುದಾರರಿಗೆ ಆಸ್ತಿ ಹಕ್ಕು ನೀಡುವುದು ಕಡ್ಡಾಯವಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಕೂಡ ತಿಳಿಸಿದೆ.

advertisement

Leave A Reply

Your email address will not be published.