Karnataka Times
Trending Stories, Viral News, Gossips & Everything in Kannada

Govt New Rules: ಜುಲೈ ಒಂದರಿಂದಲೇ ದೇಶದಲ್ಲಿ ಪ್ರಾರಂಭ ಆಗಲಿದೆ ನೋಡಿ ಈ ಹೊಸ ನಿಯಮಗಳು!

advertisement

ನಮ್ಮ ಭಾರತ ಸರ್ಕಾರ ಪ್ರತಿ ತಿಂಗಳು ಕೂಡ ಹೊಸ ಹೊಸ ನಿಯಮಗಳನ್ನ ಜಾರಿಗೆ ತರುವುದು ಅಥವಾ ಇರುವಂತಹ ನಿಯಮಗಳಲ್ಲಿ ಬದಲಾವಣೆ ತರುವಂತಹ ಕೆಲಸವನ್ನ ಮಾಡಿಕೊಂಡು ಬರ್ತಾನೆ ಇದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಬದಲಾವಣೆಗಳನ್ನು ಸಮಯಕ್ಕೆ ಸರಿಯಾಗಿ ಪೂರಕ ಆಗುವ ರೀತಿಯಲ್ಲಿ ಬದಲಾವಣೆ ಮಾಡಲಾಗುತ್ತೆ ಹಾಗೂ ಹೊಸ ನಿಯಮವನ್ನು (Govt New Rules) ಜಾರಿಗೆ ತರಲಾಗುತ್ತೆ.

WhatsApp Join Now
Telegram Join Now

ಇನ್ನು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ಕೂಡ ಜುಲೈ ತಿಂಗಳಲ್ಲಿ ಅಂದರೆ ಜುಲೈ (July) ಮೊದಲನೇ ದಿನಾಂಕದಿಂದ ಜಾರಿಗೆ ಬರುವಂತಹ ಕೆಲವೊಂದು ಹೊಸ ನಿಯಮಗಳ ಬಗ್ಗೆ ನಿಮಗೆ ಹೇಳುವುದಕ್ಕೆ ಹೊರಟಿದ್ದೇವೆ. ಒಂದು ವೇಳೆ ಈ ನಿಯಮಗಳು (Govt New Rules) ನಿಮಗೂ ಕೂಡ ಸಂಬಂಧಪಟ್ಟದ್ದಾಗಿದ್ದರೆ ಮುಂದಿನ ದಿನಗಳಲ್ಲಿ ಇವುಗಳ ಬಗ್ಗೆ ಮಾಹಿತಿಯನ್ನು ಹೊಂದುವುದರ ಮೂಲಕ ನೀವು ಇದರಿಂದ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು ಇದೇ ಕಾರಣಕ್ಕಾಗಿ ಲೇಖನವನ್ನು ತಪ್ಪದೆ ಕೊನೆವರೆಗೂ ಓದಿ.

ಹೊಸದಾಗಿ ಜಾರಿಗೆ ಬರಲಿದೆ ಈ ಕಾನೂನುಗಳು:

 

Image Source: Business Today

 

advertisement

ಜುಲೈ 1ನೇ ತಾರೀಖಿನಿಂದಲೇ ಪ್ರಾರಂಭವಾಗಿ ಆಂಗ್ಲರು IPC ಸೆಕ್ಷನ್ ನಲ್ಲಿ ಜಾರಿಗೆ ತಂದಿರುವಂತಹ ಮೂರು ಪ್ರಮುಖ ಕಾನೂನು ನಿಯಮಗಳು ಸಮಾಪ್ತಿಯಾಗಲಿದ್ದು ಅವುಗಳ ಬದಲಾಗಿ BNS 2023, BNSS 2023, BSA 2023 ನಿಯಮಗಳನ್ನು ಹೊಸದಾಗಿ ಜಾರಿಗೆ ತರುವಂತಹ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಗೃಹ ಮಂತ್ರಿಗಳಾಗಿರುವಂತಹ ಅಮಿತ್ ಶಾಹ್ (Amit Shah) ಅವರ ಮಾರ್ಗದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ರವರು ಕೂಡ ಈ ವಿಚಾರದ ಬಗ್ಗೆ ಅನುಮೋದನೆ ನೀಡಿದ್ದಾರೆ ಎಂಬುದಾಗಿ ಮಾಹಿತಿ ತಿಳಿದು ಬಂದಿದೆ.

ಈ ನಿಯಮಗಳ ಅಳವಳಿಕೆಯಿಂದಾಗಿ ಮುಂದೆ ಕಾನೂನು ಚೌಕಟ್ಟಿನಲ್ಲಿ ಕಂಡುಬರುವಂತಹ ಪ್ರಕರಣಗಳಲ್ಲಿ ತನಿಖೆ ಟ್ರಯಲ್ ಹಾಗೂ ನ್ಯಾಯಾಂಗ ತನಿಖೆಯಲ್ಲಿ ಇನ್ನಷ್ಟು ವೇಗ ತಂದು ಕೊಡಬಹುದಾಗಿದೆ ಎಂಬುದಾಗಿ ತಿಳಿದು ಬಂದಿದೆ. CCTNS ನಂತಹ ಬೇರೆ ಪ್ರಮುಖ ಕೆಲಸಗಳಲ್ಲಿ ಎಫ್ಐಆರ್ ದರ್ಜಿಸುವಾಗ ಯಾವುದೇ ಸಮಸ್ಯೆಗಳು ಬರಬಾರದು ಎನ್ನುವ ಕಾರಣಕ್ಕಾಗಿ ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಇನ್ನು ಫಾರಿನ್ಸಿಕ್ ಇಲಾಖೆಯ ಸಿಬ್ಬಂದಿಗಳು ಕೂಡ ಸರಿಯಾದ ರೀತಿಯಲ್ಲಿ ಕೆಲಸ ಮಾಡುವುದಕ್ಕಾಗಿ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿವೆ.

ಇನ್ನು 36 Support Team ಹಾಗೂ Call Centre ಅನ್ನು ಕೂಡ ಈಗಾಗಲೇ ತೆರೆಯಲಾಗಿದೆ. ಈ ಕಾನೂನು ನಿಯಮಗಳನ್ನ ಯಾವುದೇ ರಾಜ್ಯದಲ್ಲಿ ಜಾರಿಗೆ ತರಲು ಕೂಡ ಯಾವುದೇ ಸಮಸ್ಯೆಗಳು ಕಂಡುಬರಬಾರದು ಎನ್ನುವ ಕಾರಣಕ್ಕಾಗಿಯೇ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ.

ಇದೇ ರೀತಿಯಲ್ಲಿ ಈ ಹಿನ್ನಲೆಯಲ್ಲಿ ಮೂರು ಅಪ್ಲಿಕೇಶನ್ಗಳನ್ನು ಕೂಡ ಲಾಂಚ್ ಮಾಡಲಾಗಿದ್ದು ಇದರ ಮೂಲಕ ಕೇವಲ ಕಾನೂನು ಜಾಗೃತಿ ತರುವುದು ಮಾತ್ರವಲ್ಲದೆ ಯುನಿವರ್ಸಿಟಿಯ ವಿದ್ಯಾರ್ಥಿಗಳಿಗೂ ಕೂಡ ಇದನ್ನ ತಲುಪೋ ರೀತಿಯಲ್ಲಿ ಮಾಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಇದರ ಅಧಿಕೃತ ಮಾಹಿತಿಯನ್ನು ಲಾಂಚ್ ಆದ ನಂತರ ನಾವು ತಿಳಿದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.