Karnataka Times
Trending Stories, Viral News, Gossips & Everything in Kannada

Next PM Of India: ಪ್ರಧಾನಿ ಮೋದಿ ಬಳಿಕ ಇವರೇ ಮುಂದಿನ ಪ್ರಧಾನಿ ಆಗಲಿದ್ದಾರೆ, ಸಮೀಕ್ಷೆಯಲ್ಲಿ ಇರುವ ಹೆಸರು ಯಾರದ್ದು?

advertisement

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆಯ ಚುನಾವಣೆ ನಡೆಯಲಿದೆ. ಈ ಮೂಲಕ ಪಕ್ಷ ,ಪ್ರತಿಪಕ್ಷಗಳು ಪಕ್ಷಗಳ ಬಗ್ಗೆ ಪ್ರಚಾರ ಕೈಗೊಳ್ಳುವುದು ಕೂಡ ಅಂಕೆ ಮೀರಿ ನಡೆಯುತ್ತಿದೆ. ಲೋಕಸಭೆ ಚುನಾವಣೆಯ ಬಳಿಕ ಪ್ರಧಾನ ಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಕೂಡ ತಣಿಯಲಿದ್ದು ಸದ್ಯಕ್ಕೆ ಪ್ರಧಾನ ಮಂತ್ರಿ ಎಂದಾಗ ಮೊದಲು ನೆನಪಾಗೊ ಹೆಸರೇ ನರೇಂದ್ರ ಮೋದಿ ಎಂಬುದಾಗಿದೆ. ಮೋದಿ ಅವರಿಗೆ ದೇಶಾದ್ಯಂತ ಅಪಾರ ಸಂಖ್ಯೆ ಅಭಿಮಾನಿಗಳಿದ್ದು ಅವರ ಚಾಪು ಮೀರಿಸುವ ಪ್ರಬಲ ನಾಯಕ ಇನ್ಯಾರಿಲ್ಲವೇ ಎಂಬ ಪ್ರಶ್ನೆ ಸಹ ಎದುರಾಗುತ್ತಿದೆ.

ಅಪೂರ್ವ ವ್ಯಕ್ತಿತ್ವ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರದ್ದು ಅಪೂರ್ವ ವ್ಯಕ್ತಿತ್ವ ಎಂದು ಹೇಳಬಹುದು. ಟೀ ಮಾರಿ ಜೀವನ ಸಾಗಿಸುವ ಮೋದಿ ಇದೀಗ ರಾಷ್ಟ್ರದ ಪ್ರಧಾನಿ ಆಗಿದ್ದಾರೆ ಎಂದರೆ ಅವರ ನಿತ್ಯ ಪರಿಶ್ರಮ ಯಾವ ಮಟ್ಟಿಗೆ ಇದೆ ಎಂಬುದು ನಮ್ಮ ಊಹೆಗೂ ನಿಲುಕದ ಒಂದು ಸತ್ಯವಾಗಿದೆ‌. ಆಡಳಿತ ಪಕ್ಷದಲ್ಲಿ ಇದ್ದುಕೊಂಡು ಅನೇಕ ಜನಪರ ಕಾರ್ಯಕ್ರಮ ಪರಿಚಯಿಸಿ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪಕ್ಷವನ್ನು ಹೆಚ್ಚು ಬಲಗೊಳಿಸಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ‌‌. ಅದೇ ರೀತಿ ಮೋದಿ ಹೊರತು ಪಡಿಸಿದರೆ ಪ್ರಧಾನಿ ಸ್ಥಾನಕ್ಕೆ ಯಾರು ಅರ್ಹರಾಗುತ್ತಾರೆ ಎಂಬ ಪ್ರಶ್ನೆಗೆ ಸಮೀಕ್ಷೆ ಒಂದರ ಮೂಲಕ ಉತ್ತರ ದೊರೆತಿದ್ದು ಸದ್ಯ ಈ ವಿಚಾರ ಎಲ್ಲ ಕಡೆ ಚರ್ಚೆ ಆಗುತ್ತಿದೆ.

ಮೂವರ ನಾಯಕರ ಹೆಸರು?

ಬಿಜೆಪಿ ಪಕ್ಷದಲ್ಲಿ ಮೋದಿ ಅವರು ಪ್ರಬಲ ನಾಯಕ ಎಂಬ ಸತ್ಯ ನಮಗೆಲ್ಲ ತಿಳಿದೆ ಇದೆ. ಆದರೆ ಅವರನ್ನು ಬಿಟ್ಟರೆ ಪ್ರಧಾನಿ ಸ್ಥಾನ ಯಾರಿಗೆ ಹೆಚ್ಚು ಸೂಕ್ತ ಎಂಬ ಪ್ರಶ್ನೆಗೆ ಮೂರು ಪ್ರಬಲ ಬಿಜೆಪಿ ನಾಯಕರ ಹೆಸರು ಕೇಳಿ ಬಂದಿದೆ. ಆ ಮೂರು ನಾಯಕರು ಯಾರೆಂದರೆ ಕೇಂದ್ರ ಗೃಹ ಸಚಿವರಾದ ಅಮೀತ್ ಶಾ (Amit Shah), ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath), ರಸ್ತೆ , ಸಾರಿಗೆಯ ಕೇಂದ್ರ ಸಚಿವರಾದ ನಿತೀನ್ ಗಡ್ಕರಿ (Nitin Gadkari) ಹೆಸರು ಕೇಳಿ ಬಂದಿದೆ‌.

advertisement

ಯಾವ ಸಮೀಕ್ಷೆ

ಮೂಡ್ ಆಫ್ ದಿ ನೇಶನ್ ಹೆಸರಿನಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. 2024ರ ಲೋಕಸಭೆಗೆ ಪೂರ್ವಭಾವಿಯಾಗಿ ಈ ಸಮೀಕ್ಷೆ ನಡೆಸಲಾಗಿದ್ದು ಒಟ್ಟು ಇದರಲ್ಕಿ 35,801 ಜನ ಭಾಗಿ ಯಾಗಿದ್ದಾರೆ. ಈ ಸಮೀಕ್ಷೆಯನ್ನು 2023ರರ ಡಿಸೆಂಬರ್ 15 ರಿಂದ 2024ರ ಜನವರಿ 28ರ ವರೆಗೆ ನಡೆಸಲಾಗಿದೆ. ಈ ಸಮೀಕ್ಷೆ ಕೆಲ ದಿನಗಳ ಹಿಂದಿನ ಮಾತಾಗಿದ್ದು ಇತ್ತೀಚಿನ ಕೆಲ ರಾಜಕೀಯ ಬದಲಾವಣೆ ಅಂಶಗಳು ಸಮೀಕ್ಷೆಯಲ್ಲಿ ಯಾವುದೆ ವಿಧವಾಗಿ ಸೆರ್ಪಡೆ ಆಗಲಿಲ್ಲ ಎನ್ನಬಹುದು.

ಸಮೀಕ್ಷೆ ಹೇಳಿದ್ದೇನು?

ಮೂಡ್ ಆಫ್ ದಿ ನೇಶನ್ ಸಮೀಕ್ಷೆಯಲ್ಲಿ ಕೆಲ ಮಾಹಿತಿ ತಿಳಿದು ಬಂದಿದೆ. ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಅವರ ನಂತರ ಪ್ರಧಾನಿ ಆಗಲು ಕೇಂದ್ರ ಗೃಹ ಸಚಿವರಾದ ಅಮೀತ್ ಶಾ ಅವರು ಸೂಕ್ತ ಎಂದು 29% ನಷ್ಟು ಜನ ಉತ್ತರಿಸಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ 25% ನಷ್ಟು ಸೂಕ್ತ ಎಂದು ಉತ್ತರಿಸಿದ್ದಾರೆ. ರಸ್ತೆ , ಸಾರಿಗೆಯ ಕೇಂದ್ರ ಸಚಿವರಾದ ನಿತೀನ್ ಗಡ್ಕರಿ ಅವರು 16% ನಷ್ಟು ಸೂಕ್ತ ಎಂದು ತಿಳಿಸಿದ್ದಾರೆ.

advertisement

Leave A Reply

Your email address will not be published.