Karnataka Times
Trending Stories, Viral News, Gossips & Everything in Kannada

AnnaBhagya: ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯಾ ಎಂದು ಚೆಕ್ ಮಾಡುವ ಸುಲಭ ವಿಧಾನ ಇಲ್ಲಿದೆ!

advertisement

ಇಂದು ರೇಷನ್ ಕಾರ್ಡ್ ಇದ್ದರೆ ಸರಕಾರದ ಹಲವು ರೀತಿಯ ಸೌಲಭ್ಯ ಗಳು ನಮಗೆ ಸಿಗುತ್ತದೆ.ಬಡತನ‌ ರೇಖೆಗಿಂತ ಕೆಳಗಿರುವ ವರ್ಗದವರಿಗೆ ಬಿಪಿಎಲ್, ಅಂತ್ಯೋದಯ ಕಾರ್ಡ್ ನೀಡುವ ಮೂಲಕ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ.ಇದೀಗ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯಲ್ಲಿ ಅನ್ನಭಾಗ್ಯ ಯೋಜನೆಯೊಂದನ್ನು ಕೂಡ ಜಾರಿಮಾಡಿದ್ದು ಅಕ್ಕಿಯ ಜೊತೆಗೆ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣ ಕೂಡ ಜಮೆ ಮಾಡುತ್ತಿದೆ. ಈಗಾಗಲೇ ಹಲವು ಜನರು ಈ ಅನ್ನಭಾಗ್ಯ (AnnaBhagya) ಯೋಜನೆಯ ಸೌಲಭ್ಯ ಪಡೆದುಕೊಂಡಿದ್ದಾರೆ.

ಅನ್ನಭಾಗ್ಯ (AnnaBhagya) ಹಣ ಜಮೆ ಯಾಗಿಲ್ಲ?

ಹೆಚ್ಚಿನ ಫಲಾನುಭವಿಗಳಿಗೆ ಜನವರಿ ಯಿಂದ ಈ ಹಣ ಜಮೆಯಾಗಿಲ್ಲ. ಈ ಬಗ್ಗೆ ಫಲಾನುಭವಿಗಳು ಪ್ರಶ್ನೆ ಮಾಡುತ್ತಲೆ ಇದ್ದು ತಾಂತ್ರಿಕ ದೋಷದಿಂದ ಈ ಸಮಸ್ಯೆ ಉಂಟಾಗಿದ್ದು ಮಾರ್ಚ್ ಅಂತ್ಯದ ಒಳಗಾಗಿ ಎಲ್ಲರ ಖಾತೆಗೂ ಅಕ್ಕಿಯ ಹಣ ತಲುಪಿಸುವ ಬಗ್ಗೆ ಆಹಾರ ಸಚಿವರು ಸ್ಪಷ್ಟನೆ ಯನ್ನು ನೀಡಿದ್ದಾರೆ.

ಹಸಿವು ಮುಕ್ತ ಕರ್ನಾಟಕ

ಅನ್ನಭಾಗ್ಯ (AnnaBhagya) ಯೋಜನೆಯ ಮೂಲಕ ಬಡ ವರ್ಗದ ಜನತೆ ಹಸಿವು ನೀಗಿಸಿಕೊಳ್ಳುತ್ತಿದೆ. ಇದೀಗ ಅನ್ನಭಾಗ್ಯ ಯೋಜನೆಯು ಹತ್ತು ವರ್ಷ ಪೂರೈಸಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಟ್ವೀಟ್ ಮಾಡಿದ್ದು ಈ ಯೋಜನೆ ನಮ್ಮ ಸರಕಾರದ ಮಹತ್ವದ ಯೋಜನೆ ಎಂದು ತಿಳಿಸಿದ್ದಾರೆ. ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ‌ ಜಾರಿಗೆ ತಂದ ಯೋಜನೆಯಾಗಿದ್ದು ಅನ್ನಭಾಗ್ಯ ಯೋಜನೆಯು ಹತ್ತು ವರ್ಷ ಪೂರೈಸುತ್ತಿರುವುದು ಖುಷಿಯ ಜೊತೆಗೆ ಸಂತೃಪ್ತಭಾವ ಮೂಡಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

advertisement

ಪರಿಶೀಲನೆ ಹೇಗೆ?

AnnaBhagya ಯೋಜನೆಯ ಹಣ ಜಮೆ ಯಾಗಿದೆಯೇ ಎಂದು ಪರಿಶೀಲನೆ ಮಾಡಲು ಮೊದಲಿಗೆ ಆಹಾರ ಇಲಾಖೆಯ ವೆಬ್ ಸೈಟ್ ahara.kar.nic ಇಲ್ಲಿಗೆ ತೆರಳಿ ಇಲ್ಲಿ ಸ್ಟೇಟಸ್ ಆಫ್ ಡಿಬಿಟಿ ಎಂಬ ಆಯ್ಕೆ ಸಿಗಲಿದ್ದು ,ಅಲ್ಲಿ ಅರ್ ಸಿ ನಂ ಅಂದ್ರೆ ರೇಷಾನ್ ಕಾರ್ಡ್ ನಂ, ಹಾಕಿ, ಕ್ಯಾಪ್ಚಾ ನಂ ಕೂಡ ನಮೂದಿಸಿ, ಗೋ ಎಂಬ ಆಪ್ಚನ್ ಕ್ಲಿಕ್ ಮಾಡಿ.ಇಲ್ಲಿ ನಿಮ್ಮ ಸ್ಟೇಟಸ್ ಬಗ್ಗೆ ಮಾಹಿತಿ ತಿಳಿಯಲಿದೆ

ಇಷ್ಟು ಹಣ ಜಮೆ

ಪ್ರತಿ ಕೆಜಿಗೆ 34 ರೂಪಾಯಿಯಂತೆ ನೀಡಿ, 5 ಕೆಜಿಗೆ 170 ರೂಪಾಯಿ ಹಣ ನೀಡುತ್ತಿದೆ. ಬಿಪಿಎಲ್ ಮತ್ತು ಅಂತ್ಯೋದಯ ವರ್ಗದ ಪ್ರತಿಯೊಬ್ಬ ಸದಸ್ಯರಿಗೂ ಪ್ರತಿ ತಿಂಗಳು ಅಕ್ಕಿಗೆ ರೂ 34 ರೂಪಾಯಿಯಂತೆ ಹಣ ಜಮೆ ಮಾಡಲಾಗುತ್ತದೆ. ಅನ್ನಭಾಗ್ಯ ಯೋಜನೆಯ ಹಣವು ಜಮೆಯಾಗಿದ್ದಲ್ಲಿ ಮೊಬೈಲ್ ಲಿಂಕ್ ಮಾಡಿದ ನಂಬರ್ ಗೆ ಸಂದೇಶ ಕೂಡ ಬರಲಿದೆ.

advertisement

Leave A Reply

Your email address will not be published.