Karnataka Times
Trending Stories, Viral News, Gossips & Everything in Kannada

LPG Cylinder: ಗ್ರಹಲಕ್ಷ್ಮೀ ಯೋಜನೆಗೆ ಟಾಂಗ್ ಕೊಡಲು ಗ್ಯಾಸ್ ಸಿಲಿಂಡರ್ ಬಗ್ಗೆ ಕೇಂದ್ರದ ಹೊಸ ನಿರ್ಧಾರ

advertisement

ಸೌದೆ ಒಲೆ ಉಪಯೋಗ ಮಾಡುವವರ ಸಂಖ್ಯೆ ಕಡಿಮೆ ಮಾಡಿ ಮಹಿಳೆಯರ ಆರೋಗ್ಯ ಸುಧಾರಣೆ ಮಾಡುವ ಜೊತೆಗೆ ಪರಿಸರಕ್ಕೆ ಪುರಕವಾಗುವ ನೆಲೆಯಲ್ಲಿ LPG Cylinder ಬಳಕೆಗೆ ಆಧ್ಯತೆ ನೀಡಲಾಗುತ್ತಿದ್ದು. LPG ಸಿಲಿಂಡರ್ ಬಳಕೆ ಅನೇಕ ಜನರಿಗೆ ಬಹಳ ಉಪಯುಕ್ತ ಆಗುತ್ತಲಿದೆ. ಪ್ರಧಾನ ಮಂತ್ರಿ ನರೆಂದ್ರ ಮೋದಿ (Narendra Modi) ಅವರು ದೇಶದ ಬಡ ಜನರ ಅಭಿವೃದ್ಧಿಯ ಉದ್ದೇಶಕ್ಕಾಗಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಪರಿಚಯಿಸಿದ್ದು 2016ರಿಂದಲೇ ಈ ಯೋಜನೆ ಕಾರ್ಯ ಗತವಾಗಿದೆ ಎನ್ನಬಹುದು.

WhatsApp Join Now
Telegram Join Now

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಅಡಿಯಲ್ಲಿ ಬಡ ವರ್ಗದ ಮಹಿಳೆಯರಿಗೆ ಸಹಾಯವಾಗಲಿದೆ. ಹಳ್ಳಿ ಹಾಗೂ ಗ್ರಾಮೀಣ ಭಾಗದಲ್ಲಿ ವಾಸ್ತವ್ಯ ಇದ್ದ ಜನರಿಗೆ LPG ಸಿಲಿಂಡರ್ ಖರೀದಿ ಮಾಡುವುದು ಬಹಳ ದುಬಾರಿ ಎನಿಸುವ ಸಂಗತಿಯಾಗಿದ್ದು ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ (PM Ujjwala Yojana) ಅಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ಹಾಗೂ ಪ್ರತಿ LPG Cylinder ಮೇಲೆ ಸಬ್ಸಿಡಿ ಮೊತ್ತ ಕೂಡ ಸಿಗಲಾಗುವುದು. ಇದುವರೆಗೆ 75ಲಕ್ಷಕ್ಕೂ ಅಧಿಕ LPG ಸಂಪರ್ಕದ ಸೌಲಭ್ಯ ಒದಗಿಸಿ ಕೊಟ್ಟಿದ್ದು ಇದನ್ನು ಕೇಂದ್ರದಿಂದ ಜಾರಿಗೆ ತಂದಾಗ ಉಜ್ವಲ್ 2.0 (Ujjwala 2.0 Yojana) ಎಂದು ಹೆಸರಿಸಲಾಗಿದೆ.

ಅರ್ಜಿ ಆಹ್ವಾನ:

 

Image Source: The New Indian Express

 

ಈ ಯೋಜನೆ ಆರಂಭ ಆದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಾಗಲು ಕರೆ ನೀಡಲಾಗಿತ್ತು. ಈ ಮೂಲಕ ಅರ್ಹರಿಗೆ ಉಚಿತ ಗ್ಯಾಸ್ ಸಂಪರ್ಕ ಮತ್ತು ಸಹಾಯಧನ ಸೌಲಭ್ಯ ನೀಡಲಾಗುತ್ತಿದ್ದು ಇದೀಗ ಎರಡನೇ ಹಂತದಲ್ಲಿ ಮತ್ತೆ ಪುನಃ ಯಾರೆಲ್ಲ ಸೌಲಭ್ಯ ಪಡೆಯಲಿಲ್ಲ ಅಂತವರಿಗೆ ಅರ್ಜಿ ಹಾಕಿ LPG Ujjwala Yojana ಪ್ರಯೋಜನೆ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಇದಕ್ಕೆ ಕೆಲವು ನಿರ್ದಿಷ್ಟ ಮಾನದಂಡಗಳು ಅರ್ಹತೆ ಹೊಂದಿರಬೇಕಾಗಲಿದೆ. ಅಂತಹ ಅರ್ಜಿದಾರರನ್ನು ಆಯ್ಕೆ ಮಾಡಿದ್ದ ಬಳಿಕ ಉಜ್ವಲ್ ಯೋಜನೆಯ ಫಲಾನುಭವಿಗಳಾಗಬಹುದು.

advertisement

ಸಾಮಾನ್ಯ ಅರ್ಹತೆ ಏನು?

 

Image Source: Business League

 

  • ಭಾರತೀಯ ಪ್ರಜೆಯಾಗಿದ್ದು ಮಹಿಳೆಯರು ಮಾತ್ರ ಈ ಸೌಲಭ್ಯ ಸಿಗಲಿದೆ.
  • ಕನಿಷ್ಟ 18 ವಯೋಮಿತಿ ಮೀರಿದ್ದ ಮಹಿಳೆಯರಿಗೆ ಮಾತ್ರವೇ ಆಧ್ಯತೆ ಸಿಗಲಿದೆ.
  • ಅರ್ಜಿದಾರರು ಯಾವುದೇ ತರನಾದ ಸರಕಾರದ ತೆರಿಗೆ ಸಲ್ಲಿಕೆ ಮಾಡುವಂತವರಾಗಿರಬಾರದು.
  • ಅರ್ಜಿದಾರರ ವಾರ್ಷಿಕ ಆದಾಯ 1ಲಕ್ಷದ ಒಳಗೆ ಇರಬೇಕು.
  • ಗ್ರಾಮೀಣ ಮತ್ತು ನಗರ ಎರಡು ಭಾಗದ ನಿವಾಸಿಗಳು ಕೂಡ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ಒಂದು ಕುಟುಂಬದ ಒಂದು ರೇಶನ್ ಕಾರ್ಡ್ ಮೇಲೆ ಒಬ್ಬರಿಗೆ ಮಾತ್ರವೇ ಈ ಸೌಲಭ್ಯ ಸಿಗಲಿದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಪ್ರಧಾನ ಮಂತ್ರಿ ಉಜ್ವಲ್ ಯೋಜನೆ (PM Ujjwala Yojana) ಅಡಿಯಲ್ಲಿ ಫಲಾನುಭವಿಗಳಾಗಲು ಬಯಸುವವರು https://pmuy.gov.in/ ಗೆ ಭೇಟಿ ನೀಡಿದರೆ ಅದರಲ್ಲಿ ಅರ್ಜಿಯ ಫಾರಂ ತೆರೆದುಕೊಳ್ಳಲಿದೆ. ಬಳಿಕ Online Portals ಎಂದು ಕ್ಲಿಕ್ ಮಾಡಿರಿ. ಬಳಿಕ ಯಾವ ಕಂಪೆನಿಯ ಗ್ಯಾಸ್ ಎಂಬ ನಿಮ್ಮ ಹತ್ತಿರದ ಗ್ಯಾಸ್ ಸಂಪರ್ಕ ಪಟ್ಟಿ ತಿಳಿಸಲಾಗುವುದು. ಬಳಿಕ ಮೊಬೈಲ್ ಸಂಖ್ಯೆ ಹಾಕಿ OTP ಜನರೇಟ್ ಮಾಡಬೇಕು.

ಎಲ್ಲ ಮಾಹಿತಿ ಫಿಲಪ್ ಮಾಡಿ ಸಬ್ಮಿಟ್ ಮಾಡಿದರೆ ಬಳಿಕ ನಿಮ್ಮ ಅರ್ಜಿ ಸಲ್ಲಿಕೆ ಆಗಲಿದೆ. ಇದಕ್ಕೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪ್ರತಿ, ಪಡಿತರ ಚೀಟಿ, ವಿಳಾಸ ಪುರಾವೆ, ಮೊಬೈಲ್ ಸಂಖ್ಯೆ ಹಾಗೂ ಪಾಸ್ ಪೋರ್ಟ್ ಅಳತೆಯ ಫೋಟೊ ಅಗತ್ಯವಾಗಿ ಲಗತ್ತಿಸಬೇಕು ಆಗ ಎಲ್ಲ ದಾಖಲೆ ಸರಿ ಇದ್ದರೆ ಯೋಜನೆಗೆ ನೀವು ಕೂಡ ಅರ್ಹರಾಗಬಹುದು.

advertisement

Leave A Reply

Your email address will not be published.