Karnataka Times
Trending Stories, Viral News, Gossips & Everything in Kannada

Silver Price: ಚಿನ್ನದ ಜೊತೆ ಬೆಳ್ಳಿ ಬೆಲೆಯಲ್ಲೂ ಕುಸಿತ..

advertisement

ಚಿನ್ನ ಇಂದು ಅತೀ ಅಮೂಲ್ಯ ವಾದ ವಸ್ತು ವಾಗಿದ್ದು ಬೇಡಿಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಚಿನ್ನ ಇಂದು ಮಹಿಳೆಯರಿಗೆ ಮಾತ್ರ ಪ್ರಿಯವಲ್ಲ.‌ಪುರುಷರು ಕೂಡ ಚಿನ್ನ‌ ಖರೀದಿ (Gold Purchase) ಮಾಡಲು ಹೆಚ್ಚಿನ‌ ಆಸಕ್ತಿಯನ್ನು ವಹಿಸುತ್ತಾರೆ. ಚಿನ್ನವನ್ನು ಮತ್ತು ಬೆಳ್ಳಿಯನ್ನು ಮನುಷ್ಯರು ಸಾವಿರಾರು ವರ್ಷದಿಂದ ಬಳಕೆ ಮಾಡ್ಕೊಂಡು ಬರ್ತಾ ಇದ್ದು ಚಿನ್ನದ ಮಾನ್ಯತೆ ಬಹಳಷ್ಟು ಹೆಚ್ಚಾಗಿದೆ.‌ ಇಂದು ಚಿನ್ನದ ಬೆಲೆ (Gold Price) ಸ್ವಲ್ಪ ಮಟ್ಟಿಗೆ ಕಡಿಮೆ ಯಾಗಿದ್ದು ಅದರ ಜೊತೆ ಬೆಳ್ಳಿ ಬೆಲೆಯು ಇಳಿಕೆಯಾಗಿದೆ.ಹಾಗಿದ್ದಲ್ಲಿ ಇಂದಿನ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಎಷ್ಟು ಬೆಲೆ?

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ (Gold Price) 22 ಕ್ಯಾರೆಟ್‌ಗೆ 66,550 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 72,600 ರೂ. ಆಗಿದೆ. ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 66,840 ಆಗಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 72,900 ಇದೆ.

ಚಿನ್ನದ ಬೆಲೆ ಕುಸಿತ:

 

Image Source: News18

 

advertisement

ಇಂದು 10 ಗ್ರಾಂಗೆ 66,700 ರೂ. ಇರಲಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 4,400 ರೂಪಾಯಿ ಕುಸಿತ ಕಂಡಿದೆ. ಈಗ 24 ಕ್ಯಾರೆಟ್ ಚಿನ್ನದ ಬೆಲೆ, 72,760 ರೂಪಾಯಿ ಆಗಿದೆ. ಹಾಗೇ 18 ಕ್ಯಾರೆಟ್ ಚಿನ್ನದ ಬೆಲೆ 3,300 ರೂ. ಕುಸಿತ ಕಂಡು ಪ್ರತಿ 10 ಗ್ರಾಂಗೆ 54,570 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ ಕುಸಿತ:

 

Image Source: Times Now

 

ಇಂದು ಬೆಳ್ಳಿ ಕೂಡ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಪೂಜೆ, ಜಾತ್ರೆ ಇತ್ಯಾದಿ ಸಂದರ್ಭದಲ್ಲಿ ಹೆಚ್ಚು ಮಹತ್ವ ವನ್ನು ಕೂಡ ಪಡೆದುಕೊಂಡಿದ್ದು ಮೊನ್ನೆಯಷ್ಟೆ ಚಿನ್ನದ ಬೆಲೆ (Gold Price) ಬಹಳಷ್ಟು ಏರಿಕೆಯಾಗಿತ್ತು‌‌. ಬೆಳ್ಳಿ ಬೆಲೆ (Silver Price) ಯು 1 ಲಕ್ಷ ರೂಪಾಯಿ ವರೆಗೆ ತಲುಪಿತ್ತು ಈಗ ದಿಢೀರ್ ಬೆಳ್ಳಿ ಬೆಲೆಯಲ್ಲಿ 1200 ರೂಪಾಯಿ ಕುಸಿತ ಕಂಡಿದೆ. ಇಂದು ಪ್ರತಿ 1 ಕೆಜಿಗೆ ಬೆಳ್ಳಿ ಬೆಲೆ, 1,200 ರೂಪಾಯಿ ಕುಸಿತ ಕಂಡಿದ್ದು 96,500 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಬೆಳ್ಳಿಗೆ 9,650 ರೂ. ಆಗಿದೆ.

ಇತರ ಕಡೆ ಚಿನ್ನ‌ಬೆಲೆ:

ಇಂದು ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆಯು 67,400 ಆಗಿದ್ದು 24 ಕ್ಯಾರೆಟ್‌ಗೆ 73,530 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,550 ರೂ. 24 ಕ್ಯಾರೆಟ್‌ಗೆ 72,600 ರೂ. ಇದೆ.
ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಕೆಜಿ ಬೆಳ್ಳಿ ಬೆಲೆ ರೂ. 95,400 ಇದೆ.

advertisement

Leave A Reply

Your email address will not be published.