Karnataka Times
Trending Stories, Viral News, Gossips & Everything in Kannada

Pahani: ರೈತರ ಪಹಣಿ ಪತ್ರ ತಿದ್ದುಪಡಿ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ?

advertisement

ಇಂದು ರೈತರಿಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಹೆಚ್ಚಿನ ರೈತರು ಸರಕಾರದಿಂದ ಸಿಗುವ ಸೌಲಭ್ಯ ಗಳನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಆದರೆ ಅನೇಕ ಸಲ ಸರಿಯಾದ ದಾಖಲೆ ಇಲ್ಲದೆ ಸರಕಾರದ ಸೌಲಭ್ಯ ಗಳು ನಮಗೆ ಸಿಗುವುದಿಲ್ಲ. ಹೌದು ದಾಖಲೆ ಅಂದಾಗ ರೈತರ ಆಧಾರ್ ಕಾರ್ಡ್ (Aadhaar Card), ರೇಷನ್ ಕಾರ್ಡ್ (Ration Card),ಅದರಲ್ಲೂ ಪಹಣಿ ಪತ್ರ (Pahani) ಅಗತ್ಯವಾಗಿ ಬೇಕು.

WhatsApp Join Now
Telegram Join Now

ತಿದ್ದುಪಡಿ ಮಾಡಬಹುದು:

ನಮ್ಮ ಆಸ್ತಿ ಅಥವಾ ಜಮೀನಿನ ದಾಖಲೆ ಇದ್ದರೂ ಕೂಡ ಕೆಲವೊಮ್ಮೆ ಅದರಲ್ಲಿ ಮಾಹಿತಿ ತಪ್ಪು, ಅಥವಾ ತಿದ್ದುಪಡಿ ಮಾಡಬೇಕಾಗುತ್ತದೆ. ಪಹಣಿ ಪತ್ರ (Pahani) ದಲ್ಲಿ‌ ಹೆಸರು ಮತ್ತು ಇನಿಶೀಯಲ್ ಸರಿಯಾಗಿ ಇಲ್ಲ‌ದೆ ಇದ್ದರೆ ಬಹಳಷ್ಟು ತೊಂದರೆ ಆಗಲಿದೆ. ಹಾಗಾಗಿ ನೀವು ಪಹಣಿ ಪತ್ರದಲ್ಲಿ ಇರುವ ಹೆಸರು ತಿದ್ದುಪಡಿ ಮಾಡಲು ಅವಕಾಶ ಕೂಡ ಇರಲಿದೆ.

ತಿದ್ದುಪಡಿ ಮಾಡದೇ ಇದ್ದಲ್ಲಿ ಸಮಸ್ಯೆ:

 

Image Source: IndiaFilings

 

advertisement

ನಿಮ್ಮ ಜಮೀನಿನ ಪಹಣಿ (Land Pahani) ಯ ಹೆಸರು ಬದಲಾವಣೆ ಮಾಡ ಬೇಕಿದ್ದಲ್ಲಿ ನೀವು ಮಾಡಿಸಲೇ ಬೇಕು. ನಿಮ್ಮ ಅಧಾರ್ ಗೆ ಇಂದು ಪಹಣಿ ಪತ್ರ ಲಿಂಕ್ ಮಾಡಿಸುವುದು ಸಹ ಕಡ್ಡಾಯ.ಹಾಗಾಗಿ ಪಹಣಿಯ ದಾಖಲೆಯಲ್ಲಿಯು ಹೆಸರು ಒಂದೇ ತರನಾಗಿ ಇರಬೇಕು.

ಒಂದು ವೇಳೆ ಹೆಸರನ್ನು ನೀವು ಬದಲಾವಣೆ ಮಾಡದಿದ್ದರೆ ನಿಮ್ಮ ಸ್ಥಳ ಖರೀದಿ ಮಾಡಲು, ಮಾರಾಟ ಮಾಡಲು ಸಾಧ್ಯ ಇಲ್ಲ. ನೀವು ಸರಕಾರದ ಯಾವುದೇ ಸೌಲಭ್ಯ ನೀವು ಪಡೆಯಬೇಕಾದರೆ ಪಹಣಿ ಹೆಸರು ಬದಲಾಯಿಸುವುದು ಕಡ್ಡಾಯ

ಹೆಸರನ್ನು ತಿದ್ದುಪಡಿ ಮಾಡುವುದು ಹೇಗೆ?

ನೀವು ನಿಮ್ಮ ಊರಿನ ತಾಲೂಕು ಕೇಂದ್ರಕ್ಕೆ ಹೋಗಿ‌ ತಾಲೂಕು ಆಫೀಸಿನ ಪಹಣಿ ಕೇಂದ್ರ (Pahani Center) ದಲ್ಲಿ ನೀವು ಪಹಣಿ ಪತ್ರವನ್ನು ಪಡೆದಿದ್ದರೆ ಇಲ್ಲಿ ಇ ಸ್ಟ್ಯಾಂಪ್ ಪೇಪರ್ ಅನ್ನು ಪಡೆದು ಅದರಲ್ಲಿ ಹೆಸರು ತಿದ್ದುಪಡಿ ಎಂದು ಬರೆಯಬೇಕು. ಬಳಿಕ ಅದರಲ್ಲಿ ಏನನ್ನು ನಾವು ತಿದ್ದುಪಡಿ ಮಾಡ್ತೇವೆ ಎಂಬುದನ್ನು ಸರಿಯಾಗಿ ಅರ್ಜಿಯಲ್ಲಿ ನಮೋದಿಸಬೇಕು.

ಬೇಕಾದ ಅಗತ್ಯ ದಾಖಲೆ ಯೊಂದಿಗೆ ನೀವು ತಾಲೂಕು ಕಚೇರಿಯ ಭೂಮಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು. ಆಗ ಭೂಮಿ ಕೇಂದ್ರದ ಮೂಲಕ ಬೇಕಾದ ದಾಖಲೆಯನ್ನು ಕಳುಹಿಸಲಾಗುವುದು. ತದನಂತರ VA ಅವರು‌ ದಾಖಲೆಗಳನ್ನು ಪರಿಶೀಲನೆ ಮಾಡಿ,ಇತರ ದಾಖಲೆಗೆ ಹೊಂದಿದ್ದರೆ ತಿದ್ದುಪಡಿ ಇಲ್ಲದಿದ್ದಲ್ಲಿ ತಿರಸ್ಕಾರ ಆಗಲಿದೆ.

advertisement

Leave A Reply

Your email address will not be published.