Karnataka Times
Trending Stories, Viral News, Gossips & Everything in Kannada

Aadhaar Card: ಒಂದು ಮೊಬೈಲ್ ಸಂಖ್ಯೆ ಗೆ ಎಷ್ಟು ಆಧಾರ್ ಲಿಂಕ್ ಮಾಡಬಹುದು?

advertisement

ಭಾರತದಲ್ಲಿ ಆಧಾರ್ ಕಾರ್ಡ್ (Aadhaar Card) ಅನ್ನು ಪ್ರಮುಖ ಗುರುತು ಚೀಟಿಗಳ ಸಾಲಿನಲ್ಲಿ ಒಂದು ಎಂಬಂತೆ ಪರಿಗಣಿಸಲಾಗುವುದು. ಆಧಾರ್ ಕಾರ್ಡ್ ಅನ್ನು ಹೊಂದಿದ್ದವರಿಗೆ ಸರಕಾರದಿಂದ ಅನೇಕ ಸೌಲಭ್ಯ ಸಿಗಲಿದ್ದು ಆಧಾರ್ ಕಾರ್ಡ್ ಅನ್ನು ಇತರ ಪ್ರಮುಖ ದಾಖಲೆಗೆ ಕೂಡ ಲಿಂಕ್ ಮಾಡುವುದು ನಾವು ಕಾಣಬಹುದು. ಈ ಮೂಲಕ ವ್ಯಕ್ತಿಗೆ ಸಂಬಂಧ ಪಟ್ಟ ಎಲ್ಲ ನಿಖರ ಮಾಹಿತಿ ಪಡೆಯಲು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅತ್ಯವಶ್ಯಕವಾಗಿದೆ. ಅದೆ ರೀತಿ ಆಧಾರ್ ಕಾರ್ಡ್ (Aadhaar Card) ಮೊಬೈಲ್ ಗೆ ಲಿಂಕ್ ಮಾಡಲಾಗುತ್ತಿದ್ದು ಒಂದೇ ಮೊಬೈಲ್ ಸಂಖ್ಯೆಗೆ ಎರಡು ಮೂರು ಆಧಾರ್ ಲಿಂಕ್ ಮಾಡಬಹುದಾ ಎಂಬ ಪ್ರಶ್ನೆ , ಗೊಂದಲ ನಿಮಗೂ ಇರಬಹುದು ಈ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಈಗ ಪುಟ್ಟ ಮಕ್ಕಳಿಗೂ ಆಧಾರ್ ಕಾರ್ಡ್ ಮಾಡಲಾಗುತ್ತದೆ. ದೊಡ್ಡವರಿಗೆ ಹೇಗೊ ಪ್ರತ್ಯೇಕ ಮೊಬೈಲ್ ಇರುತ್ತೆ ಆದರೆ ಸಣ್ಣ ಮಕ್ಕಳಲ್ಲಿ ಮೊಬೈಲ್ ಇಲ್ಲದಿದ್ದಾಗ ಪೋಷಕರ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ಗೆ ನೀಡುತ್ತಾರೆ. ಅದೇ ರೀತಿ ಮನೆಯಲ್ಲಿ ಯಾರಾದರೂ ವೃದ್ಧರು ಇದ್ದರೆ ಅಂತವರು ಕೂಡ ಮೊಬೈಲ್ ಬಳಕೆ ಮಾಡಲು ಸಾಧ್ಯವಾಗದೆ ಇದ್ದ ಪಕ್ಷದಲ್ಲಿ ಆಗ ಅವರ ಆಧಾರ್ ಅನ್ನು ಕೂಡ ಫೋನ್ ಲಿಂಕ್ ಮಾಡಬೇಕಾಗಲಿದೆ. ಹಾಗಾದರೆ ಒಂದು ಸಿಮ್ ಸಂಖ್ಯೆಯ ಮೇಲೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು ಎಂದು ನಿಮಗೆ ನಾವು ಇಂದು ಮಾಹಿತಿ ನೀಡಲಿದ್ದೇವೆ.

ಅವಕಾಶ ಇದೆ:

ಮಕ್ಕಳಿಗೆ, ಹಿರಿಯರಿಗೆ, ಮೊಬೈಲ್ ಬಳಕೆ ತಿಳಿಯದೆ ಇದ್ದವರು ಹಾಗೂ ಬಳಸದೆ ಇರುವವರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ (Aadhaar Card Number) ಯನ್ನು ಕುಟುಂಬದ ಹಿರಿಯರು ಅಥವಾ ತಾವು ಇಚ್ಛಿಸಿದ್ದ ವ್ಯಕ್ತಿಯ ಮೊಬೈಲ್ ಸಂಖ್ಯೆ ನೀಡಿದರೆ ಆಧಾರ್ ಲಿಂಕ್ ಮಾಡಬಹುದು. ಎರಡು ಅಥವಾ ಮೂರು ಲಿಂಕ್ ಅನ್ನು ಒಂದು ಮೊಬೈಲ್ ಸಂಖ್ಯೆಯಲ್ಲಿ ಮಾಡಬಹುದು ಅದಕ್ಕಿಂತ ಹೆಚ್ಚು ಲಿಂಕ್ ಮಾಡಿದರೆ ಅನಗತ್ಯ ಗೊಂದಲ ಆಗುಬ ಸಾಧ್ಯತೆ ಸಹ ಇದೆ ಹಾಗಾಗಿ ಈ ಬಗ್ಗೆ ಯೋಚಿಸಿದ್ದ ಬಳಿಕ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಲಿಂಕ್ ಮಾಡುವುದು ಉತ್ತಮ.

 

advertisement

Image Source: News18

 

ಇದರ ಉಪಯೋಗ ಏನು?

ಬಹುತೇಕ ಕಡೆಗಳಲ್ಲಿ ನಿಮ್ಮ ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆ ನೀಡುವಂತೆ ಕೇಳಲಿದ್ದಾರೆ ಇದರ ಅರ್ಥ ಅದು ನಿಮಗೆ OTP ಪಡೆಯುವ ಕೆಲಸಕ್ಕೆ ನಿಮಗೆ ಸಹಕಾರಿ ಆಗಲಿದೆ. ನೀವು ಯಾವುದೊ ಸರಕಾರಿ ಸೌಲಭ್ಯಕ್ಕೆ ಅರ್ಜಿ ಹಾಕಿದಾಗ ಹೆಚ್ಚಾಗಿ ಈ OTP ನಿಮ್ಮ ಆಧಾರ್ ಲಿಂಕ್ (Aadhaar Card Link) ಇರುವ ಮೊಬೈಲ್ ಸಂಖ್ಯೆಗೆ ಬರಲಿದೆ ಹಾಗಾಗಿ ನೀವು ಸುಸ್ಥಿತಿಯಲ್ಲಿ ಇರುವ ಮೊಬೈಲ್ ಸಂಖ್ಯೆ ನೀಡಬೇಕು.

ಅನಗತ್ಯ ಗೊಂದಲ ಬೇಡ:

ನಿಮ್ಮ ಬಳಿ ವೈಯಕ್ತಿಕ ಮೊಬೈಲ್ ಸಂಖ್ಯೆ ಇದ್ದರೆ ಆ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ನೀವು ನೀಡಬಹುದು. ಅದನ್ನು ಬಿಟ್ಟು ಎರಡಕ್ಕಿಂತ ಹೆಚ್ಚು ಆಧಾರ್ ಕಾರ್ಡ್ ಲಿಂಕ್ ಮಾಡಲು ಒಂದೆ ಸಂಖ್ಯೆ ನೀಡಿದರೆ OTP ಅಥವಾ ಇತರ ಸಂದರ್ಭದಲ್ಲಿ ಅದು ಯಾವ ಆಧಾರ್ ಕಾರ್ಡ್ ಗೆ ಬಂದ ಮಾಹಿತಿ ಎಂದು ಗೊಂದಲ ಆಗುವ ಸಾಧ್ಯತೆ ಇದೆ. ಹಾಗಾಗಿ ತೀರ ಅಗತ್ಯ ಇದ್ದ ಸಂದರ್ಭದಲ್ಲಿ ಮಾತ್ರವೇ ಬೇರೆ ಅವರ ಮೊಬೈಲ್ ಸಂಖ್ಯೆಗೆ ನಿಮ್ಮ ಆಧಾರ್ ಲಿಂಕ್ ಕೂಡ ಮಾಡಿಸಬಹುದಾಗಿದೆ.

advertisement

Leave A Reply

Your email address will not be published.