Karnataka Times
Trending Stories, Viral News, Gossips & Everything in Kannada

LPG Cylinder Price: ಜೂನ್ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯುಸ್, ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ

advertisement

ಇಂದು ಪ್ರತಿಯೊಂದು ವ್ಯಕ್ತಿಗೂ ಅಗತ್ಯ ಮೂಲಭೂತ ವಸ್ತುಗಳು ಬೇಕು.‌ಆದರೆ ಇಂದು ಬಡ ಬರ್ಗದ ಜನತೆ ಮೂಲಭೂತ ವಸ್ತುಗಳನ್ನು ಕೂಡ ಬಳಸಿ ಕೊಳ್ಳುವುದು ಕಷ್ಟ ವಾಗಿದೆ.ಯಾಕೆಂದರೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಯಾಗಿದ್ದು ತರಕಾರಿ,ಹಣ್ಣು,ಹಾಲು, ಪೆಟ್ರೋಲ್,ಡಿಸೇಲ್ ಇತ್ಯಾದಿ ಬೆಲೆ ಏರಿಕೆಯಾಗಿದೆ.‌ ಮೂಲಭೂತ ವಸ್ತು ಅಂದಾಗ ಅಗತ್ಯವಾಗಿ ಬೇಕಾಗಿರುವುದು ಗ್ಯಾಸ್ ಸಿಲಿಂಡರ್ (LPG Cylinder Price) ಕೂಡ, ಮಹಿಳೆಯರಿಗೆ ಅಡುಗೆ ಕೆಲಸ ಸುಲಭ ವಾಗಲು ಈ ಗ್ಯಾಸ್ ಸಿಲಿಂಡರ್ ಅಗತ್ಯ ವಾಗಿ ಬೇಕಾಗಲಿದೆ.

WhatsApp Join Now
Telegram Join Now

ಬೆಲೆ ಇಳಿಕೆ:

 

Image Source: Rightsofemployees.com

 

ಇಂದು ಜೂನ್ ತಿಂಗಳ ಮೊದಲ ದಿನ ವಾಗಿದ್ದು ಗ್ಯಾಸ್ ಬಳಕೆ ದಾರರಿಗೆ ಗುಡ್ ನ್ಯೂಸ್ ಮಾಹಿತಿ ಯೊಂದು ಬಂದಿದೆ. ಹೌದು ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಕಡಿತಗೊಳಿಸಿವೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಮೊತ್ತವನ್ನು ಇಳಿಕೆ ಮಾಡಿದ್ದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ (LPG Cylinder Price) ವನ್ನು 72 ರೂ.ಗೆ ಇದೀಗ ಇಳಿಸಲಾಗಿದೆ.

ಇದರಲ್ಲಿ ಬದಲಾವಣೆ ಇಲ್ಲ:

advertisement

ತೈಲ ಕಂಪನಿಗಳು ಅಡುಗೆ ಗ್ಯಾಸ್ ಸಿಲಿಂಡರ್ ಬೆಲೆ (LPG Cylinder Price) ಯಲ್ಲಿ ಯಾವುದೇ ಬದಲಾವಣೆ ಇಲ್ಲ.ಪ್ರಸ್ತುತ ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 803, ಆಗಿದೆ.LPG ದರಗಳಲ್ಲಿ ಸತತ ಮೂರನೇ ಮಾಸಿಕ ಕಡಿತವಾಗಿದ್ದು ಮೇ 1 ರಂದು ಪ್ರತಿ ಸಿಲಿಂಡರ್‌ಗೆ 19 ರೂಪಾಯಿ ಮತ್ತು ಏಪ್ರಿಲ್ 1 ರಂದು 30.5 ರೂಪಾಯಿ ಇಳಿಕೆ ಮಾಡಲಾಗಿತ್ತು.

ಇತರ ಕಡೆ ಎಷ್ಟು ಇದೆ?

ದೆಹಲಿಯಲ್ಲಿ ಇದೀಗ ವಾಣಿಜ್ಯ ಸಿಲಿಂಡರ್ ಬೆಲೆ 69.50 ರೂಪಾಯಿ ಕಡಿಮೆ ಯಾಗಿದ್ದು ರಾಜಧಾನಿಯಲ್ಲಿ 1676 ರೂ.ಗೆ ಸಿಗಲಿದೆ.ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ರೂ 70.50, ಕೋಲ್ಕತ್ತಾದಲ್ಲಿ ಇದೇ ಸಿಲಿಂಡರ್ ಬೆಲೆ ರೂ72 ಕಡಿಮೆಯಾಗಿದೆ.

ಕಾರಣ ಏನು?

ಬೆಲೆ ಇಳಿಕೆಯ ಬಗ್ಗೆ ನಿಖರವಾದ ಕಾರಣಗಳನ್ನು ಇನ್ನು ತಿಳಿಸಲಾಗಿಲ್ಲ. ಅಂತರರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಬದಲಾವಣೆಗಳು, ತೆರಿಗೆ ನೀತಿಯಲ್ಲಿನ ಬದಲಾವಣೆ ಇರಬಹುದು.ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಮೊತ್ತದ ಅಧಿಸೂಚನೆಯ ಪ್ರಕಾರ, ಏವಿಯೇಷನ್ ​​ಟರ್ಬೈನ್ ಇಂಧನ ಬೆಲೆಯನ್ನು ರಾಷ್ಟ್ರ ರಾಜ ಧಾನಿಯಲ್ಲಿ ಪ್ರತಿ ಲೀಟರ್‌ಗೆ ಶೇ 6.5 ರಷ್ಟು ಕಡಿತಗೊಳಿಸಲಾಗಿದೆ.

advertisement

Leave A Reply

Your email address will not be published.