Karnataka Times
Trending Stories, Viral News, Gossips & Everything in Kannada

KSRTC: ನಿರ್ಧಾರ ಬದಲಿಸಲಿದೆ KSRTC ಬೆಳ್ಳಂಬೆಳಿಗ್ಗೆ ಪುರುಷರು ಸೇರಿದಂತೆ ಬಸ್ ಹತ್ತುವ ಎಲ್ಲರಿಗು ಗುಡ್ ನ್ಯೂಸ್

advertisement

Does KSRTC have insurance?: ರಾಜ್ಯದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉಚಿತ ಬಸ್ ಯೋಜನೆ ಅಡಿಯಲ್ಲಿ ಅಂದರೆ ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್ಆರ್ಟಿಸಿ ಸೇರಿದಂತೆ ಬಿಎಂಟಿಸಿ ಬಸ್ಸುಗಳಲ್ಲಿ ರಾಜ್ಯದ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಆರಂಭಿಕವಾಗಿ ಸಾಕಷ್ಟು ವ್ಯಾಪಕ ವಿರೋಧಕ್ಕೆ ಒಳಗಾಗಿದ್ದಂತಹ ಈ ಯೋಜನೆ ಈಗ ದಿನೇ ದಿನೇ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ ಅನ್ನೋದು ವಿಶೇಷವಾಗಿದೆ.

WhatsApp Join Now
Telegram Join Now

ಸಾರಿಗೆ ಸಚಿವರಾಗಿರುವಂತಹ ರಾಮಲಿಂಗ ರೆಡ್ಡಿ ಅವರು ನಮ್ಮ ಕರ್ನಾಟಕದ ಸಾರಿಗೆ ಸಂಸ್ಥೆ ಇನ್ನಷ್ಟು ಉತ್ತಮವಾಗಿ ಕಾಣಿಸಿಕೊಳ್ಳುವ ರೀತಿಯಲ್ಲಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಅದನ್ನ ಕೈಗೊಳ್ಳುತ್ತಿದ್ದಾರೆ. ಈಗ ಇದೇ ವಿಚಾರದಲ್ಲಿ ಮತ್ತೊಂದು ಗುಡ್ ನ್ಯೂಸ್ ನೀಡಿರುವಂತಹ ರಾಮಲಿಂಗ ರೆಡ್ಡಿ ಅವರ ಆದೇಶದ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

KSRTC Another New Good News

advertisement

ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವಂತಹ ಪ್ರತಿಯೊಬ್ಬರಿಗೂ ಸಿಗುತ್ತೆ ಇನ್ಸೂರೆನ್ಸ್

ಇತ್ತೀಚಿಗಷ್ಟೇ 58 ವರ್ಷ ಪೂರ್ಣಗೊಂಡಿರುವಂತಹ ಸಿಬ್ಬಂದಿಗಳಿಗೆ ಪ್ರಯಾಸ್ ಯೋಜನೆ ಅಡಿಯಲ್ಲಿ ಪಿಂಚಣಿ ಸೌಲಭ್ಯವನ್ನು ನೀಡುವ ಸಂದರ್ಭದಲ್ಲಿ ರಾಮಲಿಂಗ ರೆಡ್ಡಿ ಅವರು ಈ ಘೋಷಣೆಯನ್ನು ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಹಿಂದೆ ಕೇವಲ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಮಾತ್ರ ನೀಡುತ್ತಿದ್ದಂತಹ ಅ-ಪಘಾತ ವಿಮೆಯನ್ನು ಬಿಎಂಟಿಸಿ ಬಸ್ಸುಗಳಲ್ಲಿ ಕೂಡ ವಿಸ್ತರಿಸುವ ಬಗ್ಗೆ ಆಜ್ಞೆ ನೀಡಿದ್ದಾರೆ. 1 ಲಕ್ಷ ಇರುವಂತಹ ಪರಿಹಾರವನ್ನ 10 ಲಕ್ಷ ರೂಪಾಯಿಗಳ ವರೆಗೆ ಏರಿಸುವಂತಹ ಕೆಲಸವನ್ನು ಕೂಡ ಈ ಸಂದರ್ಭದಲ್ಲಿ ಮಾಡಿದ್ದಾರೆ. ಇನ್ನು ನೌಕರರು ಅಪ-ಘಾತದಲ್ಲಿ ಮರಣ ಹೊಂದಿದ್ರೆ ಅವರಿಗೆ ಅಂದರೆ ಅವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರವನ್ನು ನೀಡುವ ಬಗ್ಗೆ ಕೂಡ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ಇನ್ಮುಂದೆ ಕೇವಲ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಸಿಬ್ಬಂದಿಗಳು ಮಾತ್ರವಲ್ಲದೆ ಅಪಘಾತವಾದರೆ ಹಾಗೂ ಪ್ರಯಾಣಿಕರು ಮರಣ ಹೊಂದಿದರೆ ಅವರ ಕುಟುಂಬಕ್ಕೂ ಕೂಡ 10 ಲಕ್ಷ ರೂಪಾಯಿಗಳ ಇನ್ಸೂರೆನ್ಸ್ ಹಣ ಪರಿಹಾರ ರೂಪದಲ್ಲಿ ದೊರಕುತ್ತದೆ ಅನ್ನೋದನ್ನ ಈ ಮೂಲಕ ಸಾರಿಗೆ ಸಚಿವರಾಗಿರುವಂತಹ ರಾಮಲಿಂಗ ರೆಡ್ಡಿಯವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಅಂತ ಹೇಳಬಹುದಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಉಚಿತ ಬಸ್ ಪ್ರಯಾಣ ಯೋಜನೆ ಅಡಿಯಲ್ಲಿ ಪ್ರಯಾಣ ಮಾಡುವಂತಹ ಮಹಿಳೆಯರು ಸೇರಿದಂತೆ ಹಿರಿಯರು ಹಾಗೂ ಮಕ್ಕಳು ಕೂಡ ಈ ಇನ್ಶುರೆನ್ಸ್ ನಿಯಮಗಳ ಅಡಿಯಲ್ಲಿ ಬರ್ತಾರೆ.KSRTC AADHAR CARD RULES

ಒಂದು ವೇಳೆ ಯಾರಾದ್ರೂ ಒಬ್ಬ ವ್ಯಕ್ತಿಯನ್ನು ನಂಬಿಕೊಂಡಿರುವಂತಹ ಆ ಕುಟುಂಬ ಆತನನ್ನು ಕಳೆದುಕೊಂಡರು ಕೂಡ ಆತನ ಕುಟುಂಬಕ್ಕೆ ಆರ್ಥಿಕ ಪರಿಹಾರವನ್ನು ಒದಗಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ ಅನ್ನುವ ವಿಚಾರವನ್ನ ಇಲ್ಲಿ ಸಾರಿಗೆ ಸಚಿವರಾಗಿರುವಂತಹ ರಾಮಲಿಂಗ ರೆಡ್ಡಿ ಅವರು ಮತ್ತೆ ಮತ್ತೆ ಒತ್ತಿ ಹೇಳಿದ್ದಾರೆ ಎಂದು ಹೇಳಬಹುದಾಗಿದ್ದು ಖಂಡಿತವಾಗಿ ಇದು ಜನರಲ್ಲಿ ಸಾರಿಗೆ ವ್ಯವಸ್ಥೆಯ ಬಗ್ಗೆ ಇನ್ನಷ್ಟು ನಂಬಿಕೆ ಮೂಡುವಂತೆ ಮಾಡಿದೆ.

advertisement

Leave A Reply

Your email address will not be published.