Karnataka Times
Trending Stories, Viral News, Gossips & Everything in Kannada

Home Loan: ಈಗಾಗಲೇ ಹೋಮ್ ಲೋನ್ ಕಟ್ಟುತ್ತಿರುವವರು ಹಾಗು ಕಟ್ಟಿ ಮುಗಿದವರಿಗೆ ಹೊಸ ಸೂಚನೆ!

advertisement

ತಮ್ಮ ಕನಸಿನ ಮನೆಯನ್ನು ನಿರ್ಮಿಸಿಕೊಂಡು ಅದರಲ್ಲಿ ಸುಖವಾಗಿ ಜೀವನ ನಡೆಸಲು ಪ್ರತಿಯೊಬ್ಬರಿಗೂ ಇಷ್ಟವಿರುತ್ತದೆ ಈ ಕಾರಣದಿಂದ ಹಲವರು ತಮ್ಮ ಕೈಲಾದಷ್ಟು ಹಣವನ್ನು ಕೂಡಿಟ್ಟು ಅದಕ್ಕೆ ಬೇಕಾದ ಮತ್ತಷ್ಟು ಹಣವನ್ನು ಬ್ಯಾಂಕ್ ನಿಂದ ಲೋನ್ (Loan) ಪಡೆದುಕೊಂಡು ಮನೆ ನಿರ್ಮಿಸುತ್ತಾರೆ.

WhatsApp Join Now
Telegram Join Now

ಹೋಂ ಲೋನ್ (Home Loan) ಪಡೆಯಲು ಬ್ಯಾಂಕ್ ನಿಮ್ಮ ಅರ್ಜಿಯನ್ನು ಅನುಮೋದಿಸಬೇಕೆಂದರೆ ಸಾಕಷ್ಟು ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ. ನೀವು ನೀಡಿದಂತಹ ಎಲ್ಲಾ ಡಾಕ್ಯುಮೆಂಟ್ಗಳು ಸರಿಯಾಗಿ ಇದ್ದರೆ ಮಾತ್ರ ನಿಮಗೆ ಗೃಹ ಸಾಲ ಅನುಮೋದನೆ (Home Loan Approval) ಗೊಳ್ಳುತ್ತದೆ, ಇದೇ ರೀತಿ ಬ್ಯಾಂಕ್ ಅಥವಾ ಹಣಕಾಸು ಕಂಪನಿಗಳಿಂದ ಗೃಹ ಸಾಲ ಪಡೆದು ಮನೆ ನಿರ್ಮಿಸಿ ಪ್ರತಿ ತಿಂಗಳು ಲೋನ್ ಕಟ್ಟುತ್ತಿದ್ದರೆ ಅದು ಸಂಪೂರ್ಣ ಮುಗಿದ ನಂತರ ಬ್ಯಾಂಕ್ ನಿಂದ ಈ ಮೂರು ದಾಖಲಾತಿಗಳನ್ನು ಮರೆಯದೆ ಪಡೆದುಕೊಳ್ಳಿ.

ಅಗತ್ಯವಾಗಿ ಪಡೆಯಬೇಕಾದ ದಾಖಲಾತಿಗಳು:

 

Image Credit: Bank of India

 

  • NOC/NDC Certificate
  • Loan Account- Zero Balance
  • Original documents issued
  • CIBIL Report

advertisement

ನೋ ಅಬ್ಜೆಕ್ಷನ್ ಸರ್ಟಿಫಿಕೇಟ್/ನೋ ಡ್ಯೂ ಸರ್ಟಿಫಿಕೇಟ್:

ನೀವು ಗೃಹ ಸಾಲ (Home Loan) ವನ್ನು ಸಂಪೂರ್ಣವಾಗಿ ಮರುಪಾವತಿಸಿದ ನಂತರ ಬ್ಯಾಂಕ್ ಅಥವಾ ಸಾಲ ಪಡೆದುಕೊಂಡ ಏಜೆನ್ಸಿ ವತಿಯಿಂದ NOC (No Objection Certificate) ಅಥವಾ NDO (No Due Certificate) ಪಡೆಯಿರಿ, ಸಾಲವನ್ನು ಮರುಪಾವತಿಸಿದ ಬಳಿಕ ಬ್ಯಾಂಕ್ ನಿಮ್ಮ ಮುಂದಿನ ನಡೆಗಳಿಗೆ ಯಾವುದೇ ಅಕ್ಷೇಪಣೆಗಳಿಲ್ಲ ಎಂಬುದನ್ನು ಸೂಚಿಸುವ ಕಾನೂನು ದಾಖಲಾತಿ ಪತ್ರಯಿದಾಗಿದ್ದು, ಇದು ಉದ್ಯೋಗಕ್ಕೆ, ವಲಸೆ ಸಮಯದಲ್ಲಿ ಹಾಗೂ ನೀವು ಬೇರೆ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಲು ಸಹಾಯವಾಗುತ್ತದೆ. ಅದರಂತೆ NDO ಪತ್ರವು, ನೀವು ಪಡೆದುಕೊಂಡಿರುವ ಬ್ಯಾಂಕ್ ಲೋನ್ನಲ್ಲಿ (Bank Loan) ಮತ್ತೆ ಯಾವುದೇ ರೀತಿಯ ಹಣವನ್ನು ಪಾವತಿಸುವಂತಿಲ್ಲ ಎಂಬ ಮಾಹಿತಿಯನ್ನು ಸೂಚಿಸುತ್ತದೆ.

ಲೋನ್ ಅಕೌಂಟ್-ಶೂನ್ಯ ಬ್ಯಾಲೆನ್ಸ್ ಮೊತ್ತ (Zero Balance):

ಲಕ್ಷಾಂತರ ರೂಪಾಯಿ ಗೃಹ ಸಾಲ (Home Loan) ಪಡೆದುಕೊಂಡು ಹಂತ ಹಂತವಾಗಿ ಅದನ್ನು ತೀರಿಸಿದ ನಂತರ ಬ್ಯಾಂಕ್ ನಲ್ಲಿನ ನಿಮ್ಮ ಸಾಲದ ಖಾತೆಯು ಶೂನ್ಯ ಬ್ಯಾಲೆನ್ಸ್ ಮೊತ್ತವನ್ನು ತೋರಿಬೇಕು, ಇದನ್ನು ಸೂಚಿಸುವ ಪತ್ರವನ್ನು ಬ್ಯಾಂಕ್ ಸಿಬ್ಬಂದಿಗಳು ನಿಮಗೆ ಒದಗಿಸುತ್ತಾರೆ. ಲೋನ್ ಮುಚ್ಚುವಂತಹ ಸಮಯದಲ್ಲಿ ಈ ಪತ್ರವನ್ನು ಅಗತ್ಯವಾಗಿ ಪಡೆದುಕೊಳ್ಳಿ.

ಅಸಲಿ ದಾಖಲಾತಿಗಳು:

ಗೃಹ ಸಾಲ (Home Loan) ಪಡೆಯುವ ಸಮಯದಲ್ಲಿ ಬ್ಯಾಂಕ್ ನವರಿಗೆ ಒದಗಿಸಿದಂತಹ ಎಲ್ಲಾ ಅಸಲಿ ದಾಖಲಾತಿಗಳನ್ನು (Original Documents) ಲೋನ್ ಸಂಪೂರ್ಣವಾಗಿ ಮುಗಿದ ನಂತರ ಪಡೆದುಕೊಳ್ಳಬೇಕು. ಇಲ್ಲವಾದರೆ ಬ್ಯಾಂಕ್ ಸಿಬ್ಬಂದಿಗಳ ಬೇಜವಾಬ್ದಾರಿಯಿಂದಾಗಿ ನಿಮ್ಮ ದಾಖಲಾತಿಗಳು ಹಾಳಾಗಬಹುದು ಅಥವಾ ಕಳೆದುಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಗೃಹ ಸಾಲ ಸಂಪೂರ್ಣ ಮುಗಿದು ಹೋದ ನಂತರ ನೀವು ನೀಡಿರುವಂತಹ ಸಾಕ್ಷಿ ಆಧಾರದ ದಾಖಲಾತಿಗಳು ಹಾಗೂ ನಿಮ್ಮ ವೈಯಕ್ತಿಕ ದಾಖಲಾತಿಗಳನ್ನು ಹಿಂಪಡೆಯಿರಿ.

advertisement

Leave A Reply

Your email address will not be published.