Karnataka Times
Trending Stories, Viral News, Gossips & Everything in Kannada

Profitable Crop: ಅಡಿಕೆ ತೋಟದಲ್ಲಿ ಈ ಪುಟ್ಟ ಬೆಳೆ ಬೆಳೆದು ಲಕ್ಷಾಂತರ ರೂ ಗಳಿಸಿದ ರೈತ

advertisement

ಹಿಂದಿನ ಕಾಲದಿಂದಲೂ ಬಂದಂತಹ ಪದ್ದತಿ ಅಂದರೆ ಕೃಷಿ.‌ಭಾರತದಲ್ಲಿ ಹೆಚ್ಚಿನ ಜನರ ಮೂಲಾಧಾರವೇ ಕೃಷಿ ಯಾಗಿದೆ.ಇಂದು ಕೃಷಿಯಲ್ಲಿ ಆಕರ್ಷಣೆ ಮಾಡುವಂತೆ ಸರಕಾರ ಹಲವು ರೀತಿಯ ಸೌಕರ್ಯಗಳನ್ನು ನೀಡುತ್ತಿದೆ. ಆಧುನಿಕ ಕೃಷಿ ಪದ್ದತಿ ಯನ್ನು ಅಳವಡಿಕೆ ಮಾಡಲು ಕೂಡ ಪ್ರೋತ್ಸಾಹ ನೀಡುತ್ತಿದೆ. ಇಂದು ಯುವಕರು ಕೂಡ ಕೃಷಿಯತ್ತ ಮುಖ ಮಾಡಿದ್ದು ಲಾಭ ಕೊಡುವ ಬೆಳೆಯತ್ತ ಹೆಚ್ಚಿನ ರೈತರು ಆಸಕ್ತಿ ವಹಿಸಿದ್ದಾರೆ‌

WhatsApp Join Now
Telegram Join Now

ಲಾಭ ದಾಯಕ ಕೃಷಿ:

ಕೃಷಿ ಅಂದಾಗ ಮೊದಲು ನೆನಪಿಗೆ ಬರುವುದು ಅಡಿಕೆ, ತೆಂಗು,ಬಾಳೆ ಇತ್ಯಾದಿ. ಅದರಲ್ಲೂ ಅಡಿಕೆ ಕೃಷಿ (Arecanut Cultivation) ಲಾಭದಾಯಕ. ಒಮ್ಮೆ ಇದನ್ನು ಬೆಳೆಯುವ ವಿಧಾನ ತಿಳಿದರೆ ನಿರ್ವಹಣೆ ಮಾಡಲು ಸುಲಭ, ಮಾರುಕಟ್ಟೆ ಯಲ್ಲಿಯು ಉತ್ತಮ ಬೆಲೆ ಇರಲಿದ್ದು ಹೆಚ್ಚಿನ ಪ್ರದೇಶ ಗಳಿಗೆ ಅಡಿಕೆ ರಪ್ತು ಕೂಡ ಆಗಲಿದೆ.‌ ಅದರ ಜೊತೆ ಅಡಿಕೆ ಕೃಷಿ ಯೊಂದಿಗೆ ಇತರ ಬೆಳೆಯನ್ನು ಸಹ ಬೆಳೆದು ಲಾಭ ಗಳಿಸಬಹುದು.

ಕೋಕೊ‌ ಕೃಷಿ ಮಾಡಿ:

 

Image Source: Vijaya Karnataka

 

advertisement

ಭಾರತದಲ್ಲಿ ಇದನ್ನು ಹೆಚ್ಚಾಗಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಅಡಿಕೆ (Arecanut) ತೆಂಗು ಗಳ ನಡುವೆ ಅಂತರ ಬೆಳೆಯಾಗಿ ಬೆಳೆಯಲಾಗುತ್ತದೆ. ಕೊಕೋ (Cocoa) ಇಂದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಈ ಬೆಳೆಗೆ ಅಧಿಕ ಲಾಭ ಇದೆ. ಇದರ ‌ನಿರ್ವಹಣೆ ಸುಲಭ ವಾಗಿದ್ದು ಅಡಿಕೆ ಯೊಂದಿಗೆ ಉಪ ಬೆಳೆಯಾಗಿ ಬೆಳೆಯಬಹುದು.

ಹೇಗಿದೆ ಬೆಲೆ?

 

Image Source: Asia Farming

 

ಡಿಸೆಂಬರ್‌ನಿಂದ ಮಾರ್ಚ್ ತನಕ ಕೊಕ್ಕೊ (Cocoa) ಫಸಲು ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಕ್ಕೊ ಬೆಲೆ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದ್ದು ಚಾಕೊಲೇಟ್​​ನಲ್ಲಿ ಹೆಚ್ಚು ಉಪಯೋಗ ಆಗುವ ಕೋಕೋ ದಿಂದ ಸುಮಾರು 1.50 ಲಕ್ಷ ರೂಪಾಯಿ ಲಾಭವನ್ನು ಪಡೆಯಬಹುದು ಹಾಗಾಗಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದು. ಒಣ ಕೊಕ್ಕೊ ಬೆಲೆ ಹಿಂದಿನ ವರ್ಷದ ಗರಿಷ್ಠ ಬೆಲೆಗಿಂತ ಶೇ.172ರಷ್ಟು ಹೆಚ್ಚಿದ್ದು, ಪ್ರತಿ ಕೆಜಿಗೆ 680 ರೂ. ವರೆಗೆ ಇರಲಿದೆ.

ನಿರ್ವಹಣೆ ಸುಲಭ:

ಕೊಕೋದಲ್ಲಿ (Cocoa) ಮೂರು ಮುಖ್ಯ ತಳಿ ಇದೆ ಫಾರೆಸ್ಟಿಯೊ, ಕ್ರಿಯೆಲ್ಲೊ, ಟ್ರೆನಿಟಾಯೊ, ಕೋಕೋ ವಿಶೇಷ ನಿರ್ವಹಣೆಯಿಲ್ಲದೆ ಬದುಕುವ ಬೆಳೆಯಾಗಿದ್ದು ನೀರು, ಗೊಬ್ಬರಗಳ ಬಳಕೆ ಹೆಚ್ಚು ಇಲ್ಲ.ಇದರಿಂದ ತೋಟದಲ್ಲಿ ಕಳೆ ಕಡಿಮೆಯಾಗುತ್ತದೆ,ಯಾವುದೇ ರೀತಿಯ ರೋಗ ಇಲ್ಲ. ಅಡಿಕೆ ತೋಟಕ್ಕೆ ನೆರಳು ಕೂಡ ಒದಗಿಸುತ್ತವೆ.

advertisement

Leave A Reply

Your email address will not be published.