Karnataka Times
Trending Stories, Viral News, Gossips & Everything in Kannada

Gruha Lakshmi Money: ಗೃಹಲಕ್ಷ್ಮಿ ಹಣ ಬಂತಾ ಇಲ್ವಾ? ಈ 3 ಲಿಂಕ್ ಮೂಲಕ ಚೆಕ್ ಮಾಡಿ, ಹೊಸ ಆಯ್ಕೆ

advertisement

ಈ ಭಾರಿ ಕಾಂಗ್ರೆಸ್ ಸರಕಾರ ಮಹಿಳೆಯರ ಅಭಿವೃದ್ಧಿ ಗಾಗಿ ಗೃಹಲಕ್ಷ್ಮಿ ‌ಯೋಜನೆ (Gruha Lakshmi Yojana) ಯನ್ನು ಜಾರಿಗೆ ತಂದಿದೆ. ಈಗಾಗಲೇ ಹತ್ತು ಕಂತಿನ ವರೆಗೆ ಗೃಹಲಕ್ಷ್ಮಿ ಹಣ (Gruha Lakshmi Money) ಬಿಡುಗಡೆ ಯಾಗಿದ್ದು ಹನ್ನೊಂದನೆಯ ಕಂತಿನ‌ಹಣ ಇನ್ನಷ್ಟೆ ಜಮೆಯಾಗಬೇಕಿದೆ. ಹಾಗಿದ್ದಲ್ಲಿ ನಿಮ್ಮ‌ ಖಾತೆಗೆ ಹಣ ಬಂದಿದೆಯೇ ನೋಡಲು ಈ ಸುಲಭ ವಿಧಾನ‌‌‌ ಅನುಸರಿಸಿ.

WhatsApp Join Now
Telegram Join Now

ಮಾಹಿತಿ ಕಣಜ ಲಿಂಕ್:

ಮೊದಲಿಗೆ https://mahitikanaja.karnataka.gov.in ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಂಬ Option ನೋಡಿ, ಇಲ್ಲಿ‌ ಒಂದು ಹೊಸ ಪೇಜ್ ಓಪನ್ ಆಗುತ್ತೆ, ಅಲ್ಲಿ ಗೃಹಲಕ್ಷ್ಮಿ (Gruha Lakshmi) ಅಪ್ಲಿಕೇಶನ್ ಸ್ಥಿತಿ ಎಂದು ಒಂದು Option ಇರಲಿದ್ದು ಅಲ್ಲಿ ರೇಷನ್ ಕಾರ್ಡ್ ನಂಬರ್ ಹಾಕಿ Submit ಮೇಲೆ ಕ್ಲಿಕ್ ಮಾಡಿ Payment Date and Amount ಅಂತ Option ಸಿಗುತ್ತೆ ಇಲ್ಲಿ ‌ಚೆಕ್ ಮಾಡಬಹುದು.

ಡಿಬಿಟಿ ಮೂಲಕ ಚೆಕ್ ಮಾಡಿ:

 

Image Source: Oneindia

 

advertisement

ಮೊದಲಿಗೆ DBT Karnataka ಅಧಿಕೃತ App ಡೌನ್‌ಲೋಡ್‌ ಮಾಡಿಕೊಳ್ಳಿ.ಬಳಿಕ Enter Aadhaar Number ಎಂದು ಇರಲಿದ್ದು ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟರ್‌ ಮಾಡಿ. GET OTP ಎಂಬುದರ ಮೇಲೆ ಕ್ಲಿಕ್‌ ಮಾಡಿ.ಆರು ಸಂಖ್ಯೆಗಳ OTP ಎಂಟರ್‌ ಮಾಡಿ. Verify OTP ಬಟನ್‌ ಮೇಲೆ ಕ್ಲಿಕ್‌ ಮಾಡಿ. ಮೊಬೈಲ್ ನಂಬರ್‌ ಎಂಟರ್‌ ಮಾಡಲು ತಿಳಿಸಲಾಗಿರುತ್ತದೆ.ನಂತರ ಆಧಾರ್ ಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ ನಮೂದಿಸಿ. OK ಬಟನ್‌ ಮೇಲೆ ಕ್ಲಿಕ್‌ ಕೊಟ್ಟು Create mPIN ನಾಲ್ಕು ಅಂಕಿಗಳ mPIN ಎಂಟರ್‌ ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿದರೆ ಹಣ ಜಮೆಯಾಗಿರುವ ಮಾಹಿತಿ ತಿಳಿಯಲಿದೆ

ಸೇವಾ ಸಿಂಧು ಮೂಲಕ ಚೆಕ್ ಮಾಡಿ:

ಸರ್ಕಾರದ ಸೇವಾ ಸಿಂಧು ಲಿಂಕ್ https://sevasindhu.karnataka.gov.in ಇಲ್ಲಿ ಭೇಟಿ ನೀಡಿ. ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ ಯಾವ ತಿಂಗಳು ಎಂದು ಸೆಲೆಕ್ಟ್ ಮಾಡಿ ಗೆಟ್ ಸ್ಟೇಟಸ್ ನೀಡಿದರೆ ಗೃಹಲಕ್ಷ್ಮಿ ಹಣ (Gruha Lakshmi Money) ದ ವಹಿವಾಟಿನ ವಿವರಗಳನ್ನು ಪರಿಶೀಲಿಸಬಹುದು.

ಹಣ ಯಾಕೆ ಜಮೆ ಯಾಗಿಲ್ಲ?

ಕೆಲವು ಮಹಿಳೆಯರಿಗೆ ತಾಂತ್ರಿಕ ಸಮಸ್ಯೆಗಳಿಂದ ಹಣ (Gruha Lakshmi Money) ಬಂದಿಲ್ಲ.‌ ಕೆಲವು ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸದ ಕಾರಣ ಹಣ ಜಮಾ ಆಗಿಲ್ಲ. ಕೆಲವರ ಆಧಾರ್ ಅಪ್ಡೇಟ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಸಮಸ್ಯೆ ಯಿಂದ ಹಣ ಬಂದಿಲ್ಲ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಅಗತ್ಯವಿರುವ ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದರೆ ಹಣ ಖಾತೆಗೆ ಜಮೆಯಾಗೋದಿಲ್ಲ.

advertisement

Leave A Reply

Your email address will not be published.