Karnataka Times
Trending Stories, Viral News, Gossips & Everything in Kannada

Property Rules: ತಂದೆ ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಂದ ಆಸ್ತಿ ಹಿಂಪಡೆಯುವುದು ಹೇಗೆ! ಹೊಸ ರೂಲ್ಸ್

advertisement

ಆಸ್ತಿಯನ್ನು ತಂದೆ ತಾಯಿಯ ಕಾಲಾಂತರದ ಬಳಿಕ ಮಕ್ಕಳಿಗೆ ನೀಡುವುದು ಸಾಮಾನ್ಯ. ಪೋಷಕರು ದುಡಿಯುವ ಕಾಲದವರೆಗೂ ಯಾರನ್ನು ಅವಲಂಬಿಸಿ ಇರಲಾರರು. ಆದರೆ ಕಾಲ ಕ್ರಮೇಣ ವಯಸ್ಸಾಗುತ್ತಿದ್ದಂತೆ ತಂದೆ ತಾಯಿಯನ್ನು ಅವಲಂಬನೆ ಮಾಡುತ್ತಾರೆ. ಹೀಗೆ ಅವಲಂಬಿಸಿದವರಿಗೆ ತಮ್ಮ ಆಸ್ತಿ (Property) ಯನ್ನು ಮಕ್ಕಳಿಗೆ ನೀಡುವುದು ಸಹ ಅನಿವಾರ್ಯ ಆಗುವುದು. ಮಕ್ಕಳು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಇದ್ದ ಆಸ್ತಿ ಮಕ್ಕಳ ಹೆಸರಿಗೆ ಹಂಚಿಕೆ ಮಾಡುತ್ತಾರೆ ಹೀಗೆ ಆಸ್ತಿ ಹಂಚಿಕೆ ಆದ ಮೇಲೆ ಮಕ್ಕಳು ತಮ್ಮ ಹೊಣೆಯಿಂದ ದೂರ ಸರಿಯುವುದು ಇದೆ.

WhatsApp Join Now
Telegram Join Now

ಆಸ್ತಿ ಹಂಚಿಕೆ ಮಾಡಿದ್ದ ಪ್ರಾರಂಭದಲ್ಲಿ ಚೆನ್ನಾಗಿ ನೋಡಿಕೊಂಡು ಕಾಲ ಕ್ರಮೇಣ ಅವರನ್ನು ವೃದ್ಧಾಶ್ರಮಕ್ಕೆ ಹಾಕುವುದು, ಅವರ ಜೀವನದ ಸಣ್ಣ ಪುಟ್ಟ ಅಗತ್ಯಕ್ಕೂ ಸ್ಪಂದನೆ ನೀಡದೆ, ಮೂಲಭೂತ ಅಗತ್ಯ ಕೂಡ ನೀಡದಿರುವುದು. ಆಹಾರ ನೀಡದಿರುವುದು ಹೀಗೆ ಹಿಂಸೆ ನೀಡುವುದನ್ನು ಕೂಡ ನಾವು ನೋಡಬಹುದು ಆದರೆ ಅಂತ ಸಂದರ್ಭದಲ್ಲಿ ಪೋಷಕರು ಕಾನೂನಿನ ಮೂಲಕ ಆಸ್ತಿ (Property) ವಾಪಾಸ್ಸು ಪಡೆಯುವ ಅಧಿಕಾರ ಹೊಂದಿದ್ದಾರೆಯೇ ಎಂಬ ಪ್ರಶ್ನೆಗೆ ನಾವಿಂದು ನಿಮಗೆ ಉತ್ತರಿಸಲಿದ್ದೇವೆ.

ಸೂಕ್ತ ಕಾನೂನು ಇದೆ?

ತಂದೆ ಅಥವಾ ತಾಯಿಯ ಆಸ್ತಿ (Property) ಯನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿದ್ದ ಬಳಿಕ ಮಕ್ಕಳು ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಆಗ ಪೋಷಕರು ಕಾನೂನಾತ್ಮಕ ಹೋರಾಟ ಮಾಡಬಹುದು.

ಪೋಷಕರು ಮಕ್ಕಳ ಹೆಸರಿಗೆ ದಾನ ಪತ್ರ ಅಥವಾ ಇನ್ಯಾವುದೇ ಮೂಲದಿಂದ ಆಸ್ತಿ ನೀಡಿದರು ಕೂಡ ಅದನ್ನು ವಾಪಾಸ್ಸು ಪಡೆಯಲು ಕಾನೂನಾತ್ಮಕವಾಗಿ ನೆರವು ಸಿಗಲಿದೆ. ಅದಕ್ಕಾಗಿ ಉಪತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಕೆ ಮಾಡಿದರೆ ವಿಚಾರಣೆ ನಡೆಸಿ ಬಳಿಕ ಆಸ್ತಿ ಹಿಂಪಡೆಯಬಹುದಾಗಿದೆ.

advertisement

ಕಾಯ್ದೆ ಅನ್ವಯ:

 

Image Source: The Hindu

 

ಪಾಲಕರ ರಕ್ಷಣೆ ಪೋಷಣೆ, ಹಿರಿಯ ನಾಗರಿಕರ ಸಂರಕ್ಷಣೆ 2007ರ ಕಾಯ್ದೆಯ ಅನ್ವಯ ಈ ಆಧಿಕಾರದ ಮೂಲಕ ಉಪ ತಹಶೀಲ್ದಾರರ ಸಹಯೋಗದೊಂದಿಗೆ ಆಸ್ತಿ ಮರು ಪಡೆಯುವ ಅಧಿಕಾರ ಸಿಗುವುದು. ಆದರೆ ಮಕ್ಕಳು ಪೋಷಕರನ್ನು ನೋಡಿಕೊಳ್ಳಲಾರರು ಎಂಬುದು ಸಾಬೀತಾಗಬೇಕು. ವಿಕಲ ಚೇತನರ ಕಲ್ಯಾಣ ಇಲಾಖೆಯಲ್ಲಿ ಕೂಡ ಈ ಬಗ್ಗೆ ದೂರು ನೀಡುವ ಅಧಿಕಾರ ಪೋಷಕರಿಗೆ ಇದೆ. ಈ ಮೂಲಕ ಸೂಕ್ತ ವಿಚಾರಣೆ ನಡೆಸಿದ್ದ ಬಳಿಕ ಆಸ್ತಿ ಹಿಂಪಡೆಯಲು ಪೋಷಕರ ಪರವಾಗಿ ಕೋರ್ಟ್ ನಿಂದಲೇ ಆದೇಶ ಬರಲಿದೆ.

ದಾನವಾಗಿ ನೀಡಿದ ಆಸ್ತಿಯೂ ಅನ್ವಯ:

ಪೋಷಕರು ಮಕ್ಕಳಿಗೆ ದಾನವಾಗಿ ಆಸ್ತಿ ನೀಡಿದರೆ ಆಗ ಕೂಡ ಅದನ್ನು ವಾಪಾಸ್ಸು ಪಡೆಯಲು ಕಾನೂನಿನ ನೆರವು ಪೋಷಕರಿಗರ ಇರಲಿದೆ. ಅಂದರೆ ಜಮೀನು, ತೋಟ, ಮನೆ ಇತ್ಯಾದಿ ಮಕ್ಕಳ ಹೆಸರಿಗೆ ದಾನ ಮಾಡಿದ್ದ ಪೋಷಕರು ಕಾಲ ಕ್ರಮೇಣ ಮಕ್ಕಳಿಂದ ದೌರ್ಜನ್ಯಕ್ಕರ ಒಳಗಾದರೆ ಆಗ ಅವರಿಗೆ ತಮ್ಮ ಆಸ್ತಿ ಹಿಂಪಡೆಯುವ ನೈತಿಕ ಹಕ್ಕು ಕೂಡ ಇರುವುದು.

ಅನೇಕ ಸಲ ವಿಲ್ ಮಾಡಿಸಿದಾಗ ಕೂಡ ವಕೀಲರು ಮಕ್ಕಳ ಹೆಸರಿಗೆ ಮೊದಲೇ ಆಸ್ತಿ ವರ್ಗಾಯಿಸದಂತೆ ಸೂಚನೆ ನೀಡುವುದನ್ನು ಸಹ ನಾವು ಕಾಣಬಹುದು. ಪೋಷಕರ ಎಲ್ಲ ಜವಾಬ್ದಾರಿ, ಬೇಕು ಬೇಡವನ್ನು ಮಕ್ಕಳು ಪಾಲಿಸಿದ ಬಳಿಕ ಆಸ್ತಿ ವರ್ಗಾವಣೆ ಮಾಡುವುದು ಕೂಡ ಒಳ್ಳೆಯ ಆಲೋಚನೆ ಆಗಿದೆ.

advertisement

Leave A Reply

Your email address will not be published.