Karnataka Times
Trending Stories, Viral News, Gossips & Everything in Kannada

Free Bus Travel: ಫ್ರೀ ಬಸ್ ಬಗ್ಗೆ ಸಾರಿಗೆ ಸಚಿವರಿಂದ ಹೊಸ ಘೋಷಣೆ! ಮುಖ್ಯವಾದ ಮಾಹಿತಿ

advertisement

ಈ ಭಾರಿ ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗಾಗಿ ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ.ಈಗಾಗಲೇ ಈ ಎರಡು ಯೋಜನೆಗಳು ಕೂಡ ಮಹಿಳೆಯರಿಗೆ ಬಹಳಷ್ಟು ಸಹಾಯಕ ವಾಗುತ್ತಿದೆ.ಗೃಹಲಕ್ಷ್ಮಿ ಯೋಜನೆಯ ಮೂಲಕ ತಿಂಗಳಿಗೆ ಎರಡು ಸಾವಿರ ರೂ ಪಡೆಯುತ್ತಿದ್ದರೆ, ಶಕ್ತಿ ಯೋಜನೆ ಮೂಲಕ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಆದರೆ ಈಗ ಚರ್ಚೆ ಯಾಗುತ್ತಿರುವ ವಿಚಾರ ಎಂದರೆ ಉಚಿತ ಬಸ್ ಪ್ರಯಾಣ (Free Bus Travel) ರದ್ದು ಆಗಲಿದೆ ಎಂದು ಈ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ.

WhatsApp Join Now
Telegram Join Now

ಶಕ್ತಿ ಯೋಜನೆ ಬಗ್ಗೆ ವದಂತಿ:

 

Image Source: Coach Builders India

 

ಈಗಾಗಲೇ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದ್ದು ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಗಳಿಸಿದೆ. ಈಗಾಗಲೇ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬರದಿದ್ದರೆ ಗ್ಯಾರಂಟಿ ಯೋಜನೆ ರದ್ದು ಆಗಲಿದೆ ಎಂದು ಕೆಲವು ಕಾಂಗ್ರೆಸ್ ನಾಯಕರು ತಿಳಿಸಿದ್ದರು. ಇದರ ಬೆನ್ನಲ್ಲೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಡಿಮೆ ಮತ ಗಳಿಸಿದ್ದು ಇದು ಪಂಚ ಗ್ಯಾರಂಟಿಗಳ ಮೇಲೆ ಪ್ರಭಾವ ಬೀರಲಿದೆ ಎಂಬ ಊಹಾ ಪೋಹಗಳು ಹರಿದಾಡುತ್ತಿವೆ. ಅದರಲ್ಲೂ ಉಚಿತ ಬಸ್ ಪ್ರಯಾಣ (Free Bus Travel) ನೀಡುವ ಶಕ್ತಿ ಯೋಜನೆಯ ಸ್ಥಗೀತದ ಬಗ್ಗೆ ಬಹಳಷ್ಟು ಸುದ್ದಿ ಹರಿದಾಡುತ್ತಿದೆ.

ಇದನ್ನು ಓದಿ: ಸ್ವಂತ ಆಸ್ಪತ್ರೆ, ಕ್ಲಿನಿಕ್ ಇಟ್ಟುಕೊಂಡವರಿಗೆ ರಾಜ್ಯ ಸರ್ಕಾರದ ಹೊಸ ರೂಲ್ಸ್!

ಸಿಎಂ ಸ್ಪಷ್ಟನೆ:

 

advertisement

Image Source: Business Today

 

ಈಗಾಗಲೇ ಹಲವಾರು ಬಾರಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪಂದನೆಯ ಮಾತುಗಳನ್ನು ಆಡಿದ್ದಾರೆ.ಇದು ಬಡವರ ಪರ ಇರುವ ಯೋಜನೆ, ಇದನ್ನು ಯಾವುದೇ ಕಾರಣಕ್ಕೂ ಸ್ಥಗಿತ ಮಾಡಲ್ಲ ಎಂದಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರು ಕೂಡ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುವುದಿಲ್ಲ ಎಂದು ಹೇಳುತ್ತಲೆ ಇದ್ದಾರೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Transport Minister Ramalinga Reddy) ಕೂಡ ಶಕ್ತಿ ಯೋಜನೆ ಇರುತ್ತಾ ಇಲ್ವಾ ಎನ್ನುವ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

ಇದನ್ನು ಓದಿ: ಈಗಾಗಲೇ 18 ಲಕ್ಷ ಜನ ಅರ್ಜಿ ಹಾಕಿರುವ ಈ ಯೋಜನೆಗೆ ಹೆಸರು ಸೇರಿಸಲು ಸಿಎಂ ಮನವಿ! ಮುಗಿಬಿದ್ದ ರೈತರು

ಟ್ವೀಟ್ ಮಾಡಿದ್ದಾರೆ:

ಶಕ್ತಿ ಯೋಜನೆಯ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಈ ಬಗ್ಗೆ ಟ್ವೀಟ್ ಮಾಡಿದ್ದಾರೆ, ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿಗಳನ್ನು ಮತ ಪಡೆಯೋದಕ್ಕಾಗಿ ನೀಡಿಲ್ಲ. ಲೋಕಸಭಾ ಚುನಾವಣೆಯವರೆಗೆ ಅಂತನೂ ನಿಗದಿ ಮಾಡಿಲ್ಲ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಯನ್ನು ನಿಲ್ಲಿಸುವುದಿಲ್ಲ‌ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಕೆಲವೊಂದು ವಸ್ತುಗಳ ಬೆಲೆ ಏರಿಕೆ ಮಾಡಿದೆ.ಇದರಿಂದ ಜನರು ತತ್ತರಿಸಿದ್ದರು. ಬಡ ಬರ್ಗದ ಜನರಿಗಾಗಿ ಈ ಯೋಜನೆ ಜಾರಿ ಮಾಡಲಾಗಿದೆ. ಇದರಿಂದ ಬಡ, ಮಧ್ಯಮ ವರ್ಗದವರಿಗೆ ಸಹಾಯ ಆಗಿದೆ, ಗ್ಯಾರಂಟಿ ಯೋಜನೆ ಬಡವರಿಗೆ ತಲುಪುತ್ತಿದೆ ಎಂಬುದನ್ನು ಹೇಳಿದ್ದಾರೆ.

ಇದನ್ನು ಓದಿ: ಕೆಲವೇ ವರ್ಷಗಲ್ಲಿ ಹಿಟ್ ಆದ ಕ್ರಿಕೆಟರ್ ಸೂರ್ಯಕುಮಾರ್ ಆಸ್ತಿ ಎಷ್ಟು ಗೊತ್ತಾ?

ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಇದಕ್ಕೆ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಶಕ್ತಿ ಯೋಜನೆ ಇರುತ್ತೆ. ಮುಂದೆಯೂ ಸಹ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆಗಲೂ ಶಕ್ತಿ ಯೋಜನೆ ಇರುತ್ತದೆ. ಎನ್ನುವ ಭರವಸೆ ನೀಡಿದ್ದಾರೆ.

advertisement

Leave A Reply

Your email address will not be published.