Karnataka Times
Trending Stories, Viral News, Gossips & Everything in Kannada

KSRTC: ಫ್ರಿ ಟಿಕೆಟ್ ಪಡೆದ ಮಹಿಳೆಯರು ಈ ಕೆಲಸ ಮಾಡಿದ್ರೆ ಕಂಡೆಕ್ಟರ್ ಉದ್ಯೋಗಕ್ಕೆ ಕುತ್ತು! ಹೊಸ ರೂಲ್ಸ್.

advertisement

ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುವಂತಹ ಶಕ್ತಿ ಯೋಜನೆ (Shakti Yojana) ಜಾರಿಯಾಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ಸರ್ಕಾರಿ ಬಸ್ಸುಗಳಲ್ಲಿ ಕರ್ನಾಟಕ ರಾಜ್ಯದೊಳಗೆ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನಿಶ್ಚಿತವಾಗಿದೆ. ಆರಂಭದಲ್ಲಿ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಎದುರಿಸಿದ್ದ ಈ ಯೋಜನೆ ಈಗ ರಾಜ್ಯದಾದ್ಯಂತ ಯಶಸ್ವಿಯಾಗಿ ಮುಂದುವರೆದುಕೊಂಡು ಬರುತ್ತಿದೆ.

WhatsApp Join Now
Telegram Join Now

ಉಚಿತವಾಗಿ ಬಸ್ನಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಕೂಡ ಮಹಿಳೆಯರು ಕೆಲವೊಂದು ವಿಚಾರಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಹುಷಾರಾಗಿರಬೇಕಾಗುತ್ತದೆ ಇಲ್ಲವಾದಲ್ಲಿ ಕಂಡಕ್ಟರ್(Conductor) ಕೆಲಸ ಹೋಗಬಹುದಾಗಿದೆ. ಇದಕ್ಕೆ ಉದಾಹರಣೆಯನ್ನು ರೀತಿಯಲ್ಲಿ ನಡೆದಿರುವಂತಹ ಒಂದು ಘಟನೆಯ ವಿವರಣೆಯನ್ನು ನೀಡುತ್ತೇವೆ ಬನ್ನಿ.

shakti yojana
Image Source: Business Standard

ಅಷ್ಟಕ್ಕೂ ನಡೆದಿದ್ದೇನು?

advertisement

ಮದ್ದೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಮೂವರು ಮಹಿಳೆಯರು ಬಸ್ ಹತ್ತಿದ್ದಾರೆ. ಬಸ್ ಹತ್ತಿರ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಒಬ್ಬರು ಇಳಿದುಕೊಂಡಿದ್ದಾರೆ ಆದರೆ ಮೂವರು ಸೇರಿ ಬಸ್ ಹತ್ತಿದಾಗ ಒಂದೇ ಟಿಕೆಟ್ ಪಡೆದುಕೊಂಡಿದ್ದರು. ಟಿಕೆಟ್ ಚೆಕ್ ಮಾಡಲು ಬಂದಂತಹ ಬಸ್ ನಿರ್ವಾಹಕರು ಮೂರು ಸದಸ್ಯರಲ್ಲಿ ಒಬ್ಬರು ಇಲ್ಲದೆ ಇರುವುದನ್ನು ನೋಡಿ ನಿರ್ವಾಹಕರನ್ನು ಅಂದರೆ ಕಂಡಕ್ಟರ್ ಅನ್ನು ಸಸ್ಪೆಂಡ್ ಮಾಡಿದ್ದಾರೆ.

ಸರ್ಕಾರ ಈ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡಿದ ನಿಜ ಆದರೆ ಇದು ಏನು ಅರಿಯದಂತಹ ಅಮಾಯಕ ಕಂಡಕ್ಟರ್ ಅಥವಾ ಸಿಬ್ಬಂದಿಯ ಕೆಲಸ ಹೋಗೋದಕ್ಕೆ ಕಾರಣವಾಗಬಾರದು ಎನ್ನುವುದೇ ಪ್ರತಿಯೊಬ್ಬರ ಅಭಿಪ್ರಾಯವಾಗಿದೆ. ಯಾಕೆಂದರೆ ಈ ಸಂದರ್ಭದಲ್ಲಿ ಇದನ್ನು ಚೆಕ್ ಮಾಡುವವರು ಆ ಮಹಿಳೆಯರ ಬಳಿ ಕೇಳಿದಾಗ ಬಂದಿರೋದು ನಾವಿಬ್ಬರೇ ಎಂಬುದಾಗಿ ಹೇಳಿ ಅಲ್ಲಿಂದ ಜಾರಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಅಧಿಕಾರಿಗಳು ಕಂಡಕ್ಟರ್ ಬೇಕು ಅಂತಾನೆ ಒಂದು ಟಿಕೆಟ್ ಹೆಚ್ಚಾಗಿ ತೆಗೆದಿದ್ದಾನೆ ಅನ್ನುವುದಾಗಿ ಹೇಳಿ ಆತನಿಗೆ ಮೆಮೊ ಜಾರಿ ಮಾಡಿದ್ದಾರೆ.

Shakti Scheme
Image Source: India Today

ಇದಕ್ಕಿಂತಲೂ ಬೇಸರ ಪಟ್ಟು ಕೊಳ್ಳುವಂತಹ ವಿಚಾರ ಅಂದ್ರೆ ಮೇ 1ನೇ ತಾರೀಖಿನಿಂದ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಅರ್ಧಕ್ಕೆ ಇಳಿದು ಹೋಗಿರುವಂತಹ ಮಹಿಳೆ ಹಾಗೂ ಅದನ್ನು ಒಪ್ಪದೇ ಇರುವಂತಹ ಆ ಇಬ್ಬರು ಮಹಿಳೆಯರ ಕಾರಣದಿಂದಾಗಿ ಸುಖಾ ಸುಮ್ಮನೆ ಆ ಕಂಡಕ್ಟರ್ ತನ್ನ ಕೆಲಸವನ್ನು ಕಳೆದುಕೊಳ್ಳಬೇಕಾಗಿ ಬಂತು.

ಇದೊಂದು ಉದಾಹರಣೆ ಅಷ್ಟೇ, ಆದರೆ ಇದೇ ರೀತಿ ಈ ಹಿಂದೆ ಕೂಡ ಸಾಕಷ್ಟು ಬಾರಿ ನಡೆದಿರಬಹುದು ಅಥವಾ ಮುಂದೆ ಕೂಡ ಸಾಕಷ್ಟು ಬಾರಿ ಪ್ರಕರಣಗಳು ನಡೆಯಬಹುದು. ಮಹಿಳೆಯರಿಗೆ ಉಚಿತವಾದ ಬಸ್ ಪ್ರಯಾಣ ಸಿಗುತ್ತದೆ ಆದರೆ ಅವರು ಮಾಡುವಂತಹ ಕೆಲವೊಂದು ಈ ರೀತಿಯ ತಪ್ಪುಗಳಿಂದಾಗಿ ಮುಗ್ಧ ಕಂಡಕ್ಟರ್ಗಳು ತಮ್ಮ ಕೆಲಸವನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ.

advertisement

Leave A Reply

Your email address will not be published.