Karnataka Times
Trending Stories, Viral News, Gossips & Everything in Kannada

Lakshmi Hebbalkar: ರಾಜ್ಯದ ಜನತೆಗೆ 2 ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

advertisement

ಮಳೆಗಾಲ ಪ್ರಾರಂಭ ವಾಗಿದೆ. ಹಾಗಾಗಿ ಹೆಚ್ಚು ಮಳೆ ಉಂಟಾದಾಗ ತೆಗೆದು ಕೊಳ್ಳುವ ಮುನ್ನಚ್ಚೆರಿಕೆ ಕ್ರಮಗಳನ್ನು ಪಾಲಿಸುವ ಕುರಿತಾಗಿ ಸಚಿವೆ ಸೂಚನೆ ನೀಡಿದ್ದಾರೆ. ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಉಂಟಾಗುವ ಕಡಲ ಕೊರೆತದ ತುರ್ತು ಕಾಮಗಾರಿಗಳಿಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ.‌ ಈಗಾಗಲೇ ಐದು ಕೋಟಿ ರೂ. ಅನುದಾನವನ್ನು ಇದಕ್ಕಾಗಿ ರಾಜ್ಯ ಸರಕಾರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

WhatsApp Join Now
Telegram Join Now

ಕಡಲ ಕೊರೆತ ಉಂಟಾಗುವ ಪ್ರದೇಶಕ್ಕೆ ಶಾಶ್ವತ ಪರಿಹಾರಕ್ಕಾಗಿ ಡಿಪಿಆರ್‌ನ್ನು ಸಿದ್ಧಪಡಿಸಲಾಗಿದ್ದು ರಾಜ್ಯ ಸರಕಾರದಿಂದ ಮಾತ್ರ ಪರಿಹಾರ ನೀಡಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಟ್ಟಿಗೆ ಕೆಲಸ ಮಾಡಬೇಕಾಗಿದೆ ಎಂದು ಸಚಿವೆ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ‌ ಮಾತನಾಡಿದರು.

ರೇಷನ್ ಕಾರ್ಡ್ ವಿತರಣೆ:

 

Image Source: informalnewz

 

advertisement

ಅದೇ ರೀತಿ ರೇಷನ್ ಕಾರ್ಡ್ (Ration Card) ವಿತರಣೆ ಮಾಡುವ ಬಗ್ಗೆ ಮಾತನಾಡಿದ್ದು ಜಿಲ್ಲೆಯಲ್ಲಿ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿಯನ್ನು ಆಹ್ವಾನಿಸಲು ಬೇಡಿಕೆ ಬಂದಿದ್ದು ಅತೀ ಅವಶ್ಯಕ ತುರ್ತು ಅವಶ್ಯಕ ಇರುವವರಿಗೆ ಆರೋಗ್ಯ ಸಂಬಂಧಿ ಸಮಸ್ಯೆ ಇದ್ದವರಿಗೆ ಮೂರು ದಿನಗಳಲ್ಲೇ ಪಡಿತರ ಚೀಟಿ (Ration Card) ನೀಡಲು ನಿರ್ಧಾರ ಮಾಡಲಾಗಿದೆ ಎಂದರು. ಮಳೆಯಲ್ಲಿ ನೆರೆ ಸೇರಿದಂತೆ ಮತ್ತಿತರ ಅವಘಡಗಳಿಂದ ಜನ, ಪ್ರಾಣಿಗಳಿಗೆ ತೊಂದರೆ ಆಗದಂತೆ ಹಾಗೂ ಆಸ್ತಿ ಹಾನಿ‌ ಆಗದಂತೆ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವೆ ಸೂಚನೆ ಕೂಡ ನೀಡಿದರು.

ಪರಿಹಾರ ಒದಗಿಸಬೇಕು:

ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಬಂದಿದ್ದು ಈಗಾಗಲೇ ಸಿಡಿಲು ಬಡಿತದಿಂದ ಮೂರು ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯಿಂದ ಹಾನಿ ಗೊಳಗಾದವರಿಗೆ ಬೇಗ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುವ ಜೊತೆಗೆ ರೈತರಿಗೆ ಅಗತ್ಯ ಇರುವ ಬಿತ್ತನೆ ಬೀಜ, ರಸಗೊಬ್ಬರ, ಇತ್ಯಾದಿ ರೈತರಿಗೆ ಸಮರ್ಪಕವಾಗಿ ಒದಗಿಸಬೇಕು ಎಂದು ಸೂಚನೆ ಕೂಡ ನೀಡಿದರು.

ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಬಸ್ ಕೊರತೆ ಸಮಸ್ಯೆ ಹೆಚ್ಚಾಗಿದ್ದು ಕೊರತೆ ನೀಗಿಸಲು ಸಾರಿಗೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. 3 ಸಾವಿರ ಸಾವಿರ ಬಸ್ ಗಳ ಖರೀದಿ ಆಗಿದ್ದು ಅವುಗಳ ಪೈಕಿ ಕೆಲವನ್ನು ಇಲ್ಲಿಗೆ ಬಸ್ ಗಳನ್ನು ಹಾಕುವ ವ್ಯವಸ್ಥೆ ಮಾಡಲಾಗುತ್ತೆ ಎಂದರು.

advertisement

Leave A Reply

Your email address will not be published.