Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ಕಾರ್ಡ್ ಇರುವ ಎಲ್ಲರಿಗೂ ಸರ್ಕಾರದ ಕಡೆಯಿಂದ ಮಹತ್ವದ ಆದೇಶ!

advertisement

ಸರ್ಕಾರ ಈಗ ಒಂದು ಹೊಸ ಪೋರ್ಟಲ್ ಲಾಂಚ್ ಮಾಡೋದಕ್ಕೆ ಸಿದ್ಧತೆಯನ್ನು ನಡೆಸಿಕೊಳ್ಳುತ್ತಿದೆ. ಇದರಲ್ಲಿ ಆಧಾರ್ (Aadhaar Card) ಯುನಿಫೈಡ್ ಆಗಿರುವಂತಹ ಇ-ಕಾಮರ್ಸ್, ಯುಪಿಐ ಪೇಮೆಂಟ್ (UPI Payment), ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (Open Network for Digital Commerce) ರೀತಿಯ ಸಾಕಷ್ಟು ಸೇವೆಗಳನ್ನು ನೀವು ಒಂದೇ ಜಾಗದಲ್ಲಿ ಪಡೆದುಕೊಳ್ಳಬಹುದಾಗಿದೆ.

WhatsApp Join Now
Telegram Join Now

ಸರ್ಕಾರದ ತಯಾರಿ ಈಗಾಗಲೇ ಪ್ರಾರಂಭವಾಗಿದೆ:

ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಇದರ ಲಾಂಚ್ ಗಾಗಿ ಈಗಾಗಲೇ ಎಲೆಕ್ಟ್ರಾನಿಕ್ಸ್ ಸಚಿವಾಲಯದ ತಯಾರಿ ಪ್ರಾರಂಭವಾಗಿದೆ. ಈ ಪೋರ್ಟಲ್ ನ ಲಾಂಚ್ ಗಾಗಿ ಸಂಬಂಧಪಟ್ಟಂತಹ ಪ್ರತಿಯೊಂದು ಸಚಿವಾಲಯದಿಂದಲೂ ಕೂಡ ಬೇಕಾಗಿರುವಂತಹ ಮಾಹಿತಿಗಳನ್ನ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಇದಕ್ಕಾಗಿ DPI ಅನ್ನು ತಯಾರಿಸುವುದಕ್ಕಾಗಿ ಕೂಡ ಆದೇಶವನ್ನು ನೀಡಲಾಗಿದೆ.

 

Image Source: Navbharat Times

 

advertisement

ಜನಸಾಮಾನ್ಯರಿಗೆ ಇದರಿಂದ ಲಾಭ ಸಿಗುವುದು ಗ್ಯಾರಂಟಿ:

ಸದ್ಯದ ಮಟ್ಟಿಗೆ ನೀವು ನೋಡೋದಾದ್ರೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕೆ ಹಾಗೂ ಅವುಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಜನಸಾಮಾನ್ಯರಿಗೆ ಬೇರೆ ಬೇರೆ ಪೋರ್ಟಲ್ ಹಾಗೂ ಅಪ್ಲಿಕೇಶನ್ಗಳನ್ನು ಇರಿಸಲಾಗಿದೆ. ಆದರೆ ಒಂದು ವೇಳೆ ಈಗ ತಯಾರಿ ಮಾಡುತ್ತಿರುವಂತಹ ಪೋರ್ಟಲ್ ಜಾರಿಗೆ ಬಂದರೆ ಒಂದೇ ಸ್ಥಳದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ದೊರೆಯುತ್ತದೆ.

ಕೆಲವೊಂದು ಇಂಟರ್ನೆಟ್ ಸೇವೆ ಕೊರತೆ ಇರುವಂತಹ ಸ್ಥಳಗಳಲ್ಲಿ ಈ ರೀತಿಯ ವಿಚಾರಗಳನ್ನ ಚೆಕ್ ಮಾಡುವುದಕ್ಕಾಗಿ ಕಂಪ್ಯೂಟರ್ ಸೆಂಟರ್ ನವರು ದೊಡ್ಡ ಮೊತ್ತದ ಹಣವನ್ನು ಚಾರ್ಜ್ ಮಾಡುತ್ತಾರೆ. ಈ ರೀತಿ ಪೋರ್ಟಲ್ ಗಳನ್ನ ಅಧಿಕೃತವಾಗಿ ಲಾಂಚ್ ಮಾಡುವ ಮೂಲಕ ಎಲ್ಲಾ ಸೇವೆಗಳು ಒಂದೇ ಸ್ಥಳದಲ್ಲಿ ಸಿಗುವ ರೀತಿ ಮಾಡಬಹುದಾಗಿದೆ.

ಭಾರತದಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆನ್ಲೈನ್ ಸೇವೆಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಭಾರತ ಸರ್ಕಾರ ಕೂಡ ಆನ್ಲೈನ್ ಸೇವೆಗಳ ಮೂಲಕ ತಮ್ಮ ಯೋಜನೆಗಳನ್ನ ಪಾರದರ್ಶಕವಾಗಿ ಜನರ ವರೆಗೆ ತಲುಪಿಸುವಂತಹ ಕೆಲಸವನ್ನು ಕೂಡ ಮಾಡಿಕೊಂಡು ಬರುತ್ತಿದೆ. ಈ ವಿಚಾರದಲ್ಲಿ ಭಾರತ ಮುಂದಿನ ಐದರಿಂದ ಆರು ವರ್ಷಗಳ ಒಳಗೆ ನೂರು ಬಿಲಿಯನ್ ಡಾಲರ್ಗಳ ಮಾರ್ಕೆಟ್ ಅನ್ನು ತಲುಪಲಿದೆ ಎಂಬುದಾಗಿ ತಿಳಿದು ಬಂದಿದೆ. ಇದು ನಿಜಕ್ಕೂ ಕೂಡ ಆನ್ಲೈನ್ ಅಂದ್ರೆ ಡಿಜಿಟಲ್ ವಿಭಾಗದಲ್ಲಿ ಭಾರತದ ಅತ್ಯಂತ ದೊಡ್ಡ ಸಾಧನೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

advertisement

Leave A Reply

Your email address will not be published.