Karnataka Times
Trending Stories, Viral News, Gossips & Everything in Kannada

UPI Payment: ಫೋನ್ ಪೇ, ಗೂಗಲ್ ಪೇ ಯಾವುದೂ ಬೇಡ! ಇಂಟರ್ನೆಟ್ ಇಲ್ಲದ ಸಮಯದಲ್ಲಿ ಹೀಗೆ ಮಾಡಿ

advertisement

UPI ಪೇಮೆಂಟ್ (UPI Payment) ವಿಧಾನ ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ನೋಡಿದರೆ ಭಾರತ ದೇಶದಲ್ಲಿ ಹೆಚ್ಚಾಗಿದೆ. ಆನ್ಲೈನ್ ಪಾವತಿ ಮಾಡುವಂತಹ ಈ ವಿಧಾನ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಭಾರತ ದೇಶದಲ್ಲಿ ಹೆಚ್ಚಾಗಿ ಬೆಳೆದು ನಿಂತಿದೆ ಎಂದು ಹೇಳಬಹುದಾಗಿದೆ. ಆದರೆ ಇವುಗಳನ್ನು ಬಳಸುವಾಗ ಇಂಟರ್ನೆಟ್ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ನೀವು UPI ಪೇಮೆಂಟ್ಸ್ ಗಳನ್ನು ಇಂಟರ್ನೆಟ್ ಇಲ್ಲದೆ ಕೂಡ ಬಳಸಿಕೊಳ್ಳಬಹುದಾಗಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

UPI ಪೇಮೆಂಟ್ (UPI Payment) ಅನ್ನು ಇಂಟರ್ನೆಟ್ ಇಲ್ಲದೆ ಪಾವತಿಸಿ

ಫೋನ್ ಪೇ ಗೂಗಲ್ ಪೇ ಇಲ್ಲವೇ paytm ನಲ್ಲಿ ಹಣವನ್ನು ಪಾವತಿ ಮಾಡುವ ಸಂದರ್ಭದಲ್ಲಿ ನೀವು ಸಾಕಷ್ಟು ಬಾರಿ ಗಮನಿಸಿರಬಹುದು. ಹಣವನ್ನು ಪಾವತಿ ಮಾಡುವ ಸಂದರ್ಭದಲ್ಲಿ ಸಾಕಷ್ಟು ಬಾರಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಹಣ ಟ್ರಾನ್ಸ್ಫರ್ ಆಗದೆ ಇರುವುದು ಅಥವಾ ಆಗಿದ್ರೂ ಕೂಡ ಅದರ ನೋಟಿಫಿಕೇಶನ್ ಬಾರದೇ ಇರುವುದು ಈ ರೀತಿ ಹಲವಾರು ಸಮಸ್ಯೆಗಳನ್ನು ನೀವು ಎದುರಿಸಿರಬಹುದಾಗಿದೆ. ಇನ್ಮುಂದೆ ಈ ರೀತಿ ಇಂಟರ್ನೆಟ್ ಸಮಸ್ಯೆಯಿಂದಾಗಿ ಈ ರೀತಿಯ ಪರಿಸ್ಥಿತಿಗಳನ್ನು ನೀವು ಎದುರಿಸಬೇಕಾದ ಅಗತ್ಯವಿಲ್ಲ

advertisement

USSD ಸರ್ವಿಸ್ ಅನ್ನು ಬಳಕೆ ಮಾಡಿ

*99# ಗೆ ಡಯಲ್ ಮಾಡುವ ಮೂಲಕ ಇಂಟರ್ನೆಟ್ ಸೇವೆ ಇಲ್ಲದೆ ಕೂಡ ನೀವು ನಿಮ್ಮ ಮೊಬೈಲ್ ಮೂಲಕ ಬ್ಯಾಂಕಿಂಗ್ ಸೇವೆಯನ್ನು ಪೂರೈಸಿಕೊಳ್ಳಬಹುದಾಗಿದೆ. ಹಿಂದಿ ಇಂಗ್ಲಿಷ್ ಸೇರಿದಂತೆ ಈ ವಿಧಾನದಲ್ಲಿ 13 ಭಾಷೆಗಳನ್ನು ನೀವು ಬಳಸಿಕೊಳ್ಳಬಹುದಾಗಿದೆ. UPI PIN ಚೇಂಜ್ ಮಾಡದೆ ಕೂಡ ನೀವು ಹಣವನ್ನು ಟ್ರಾನ್ಸ್ಫರ್ ಮಾಡಬಹುದಾಗಿದೆ.

ಬಳಕೆಯ ವಿಧಾನ

  • *99# ನಂಬರ್ ಫೋನ್ ಅನ್ನು ನಿಮ್ಮ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಇಂದ ಡಯಲ್ ಮಾಡಿ.
  •  ಇದಾದ ನಂತರ ಯಾವುದಾದರೂ ಭಾಷೆಯನ್ನು ಆಯ್ಕೆ ಮಾಡಿ ಹಾಗೂ ನಿಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಹೆಸರನ್ನು ಹೇಳಬೇಕು.
  •  ಈ ಸಂದರ್ಭದಲ್ಲಿ ನಿಮ್ಮ ಡೆಬಿಟ್ ಕಾರ್ಡ್ ನ ಲಾಸ್ಟ್ ಆರು ಅಂಕೆಗಳು ಹಾಗೂ ಎಕ್ಸ್ಪರಿ ಡೇಟ್ ಅನ್ನು ಒತ್ತಿ.
  •  ಈ ಮೂಲಕ ನೀವು ಈ ರೀತಿಯ ಪೇಮೆಂಟ್ ಮಾಡುವಂತಹ ಸೆಟ್ ಅಪ್ ಅನ್ನು ಯಶಸ್ವಿಗೊಳಿಸಿದಂತಾಯಿತು. ಇದಾದ ನಂತರ ನೀವು ಇಂಟರ್ನೆಟ್ ಇಲ್ಲದೆ ಯುಪಿಐ ಪೇಮೆಂಟ್ ಮಾಡಬಹುದಾಗಿದೆ

advertisement

Leave A Reply

Your email address will not be published.