Karnataka Times
Trending Stories, Viral News, Gossips & Everything in Kannada

Upi Apps: Google Pay, PhonePe ಅಪ್ಲಿಕೇಶನ್ ಬಳಸುವವರಿಗೆ ಸಿಹಿಸುದ್ದಿ! ಇನ್ಮೇಲೆ 5 ಲಕ್ಷದವರೆಗೆ ಹಣ ಕಳಿಸಬಹುದು ಷರತ್ತು ಅನ್ವಯ

advertisement

The Reserve Bank of India (RBI) : ಸ್ನೇಹಿತರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಯುಪಿಐ ಬಳಕೆದಾರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಯುಪಿಐ ಬಳಸಿ ಹಣವನ್ನು ವರ್ಗಾವಣೆ ಮಾಡುವಂತಹ ಮಿತಿಯನ್ನು ಆರ್ಬಿಐ ಹೆಚ್ಚಿಸಿದ್ದು, ಇದರಿಂದಾಗಿ ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಪೇಮೆಂಟ್ ಅಪ್ಲಿಕೇಶನ್ಗಳಾದ ಪೇಟಿಎಂ, ಗೂಗಲ್ ಪೇ ಹಾಗೂ ಫೋನ್ ಪೇ ಗಳಿಂದ( Paytm, PhonePe, Google pay)  5 ಲಕ್ಷ ಹಣವನ್ನು ವರ್ಗಾವಣೆ(Money transfer)  ಮಾಡಬಹುದು. ಈ ಮಿತಿ ಯಾರೆಲ್ಲರಿಗೆ ಅನ್ವಯವಾಗುತ್ತದೆ? ಇದರ ಮಾರ್ಗಸೂಚಿಗಳೇನು? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಕೇವಲ ಆಸ್ಪತ್ರೆ ಹಾಗೂ ಶಾಲೆಗಳಿಗೆ ಮಾತ್ರ5 ಲಕ್ಷ ಮಿತಿ ಅನ್ವಯ!

RBIನ ಗವರ್ನರ್ ಆದಂತಹ ಶಕ್ತಿಕಾಂತ್ ದಾಸ್(Shaktikanta Das )ಅವರು ಇತ್ತೀಚಿಗಷ್ಟೇ ನೀಡಿರುವ ಮಾಹಿತಿಯ ಪ್ರಕಾರ ಕೇವಲ ವಿದ್ಯಾಸಂಸ್ಥೆ ಹಾಗೂ ಆಸ್ಪತ್ರೆಗಳಿಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ನಿಮ್ಮ ಯುಪಿಐ ವಹಿವಾಟಿನ(UPI Transaction) ಮಿತಿಯು ಐದು ಲಕ್ಷವಿರುತ್ತದೆ. ಅಂದರೆ ಆಸ್ಪತ್ರೆ ಅಥವಾ ವಿದ್ಯಾಸಂಸ್ಥೆಯ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಬರೋಬ್ಬರಿ 5 ಲಕ್ಷ ಹಣವನ್ನು ವರ್ಗಾವಣೆ ಮಾಡಬಹುದು. ನ್ಯಾಷನಲ್ ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾ(NPCI) ನಿಗದಿಪಡಿಸಿರುವ ಪ್ರಕಾರ ಸಾಮಾನ್ಯ ಚಟುವಟಿಕೆಗಳ ಯುಪಿಐ ವಹಿವಾಟಿನ ಮಿತಿಯು ದಿನಕ್ಕೆ ಕೇವಲ ಒಂದು ಲಕ್ಷ ವಿರುತ್ತದೆ.

You can now transfer up to ₹5 lakh via UPI at hospitals
Image Source: Hindustan Times

advertisement

“ಜೊತೆಗೆ 15,000ಕ್ಕಿಂತ ಹೆಚ್ಚಿನ ಪುನರಾವರ್ತಿತ ವಹಿವಾಟನ್ನು (Recurring transaction) ನಡೆಸಲು ದೃಢೀಕರಣದ ಹೆಚ್ಚುವರಿ ಅಂಶ ಅಗತ್ಯವಿರುತ್ತದೆ. ಈ ಕಾರಣದಿಂದಾಗಿ ಪ್ರತಿ ವಹಿವಾಟಿಗೆ ಒಂದು ಲಕ್ಷದ ವರೆಗೂ ಮಿತಿಯನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದ್ದು, ಇದರಿಂದಾಗಿ ಇ- ಆದೇಶಗಳ ಬಳಕೆಯನ್ನು ಇನ್ನಷ್ಟು ವೇಗಗೊಳಿಸಲಿದ್ದೇವೆ” ಎಂದು RBI ನ ಗವರ್ನರ್ ಆದಂತಹ ಶಕ್ತಿಕಾಂತ್ ದಾಸ್ ಅವರು ತಿಳಿಸಿದ್ದಾರೆ.

ಒಂದು ಲಕ್ಷದ ವಹಿವಾಟಿಕೆ ದೃಢೀಕರಣದ ಬೇಕಿಲ್ಲ!

ಸ್ವತಃ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್(Shakti Kanth Dad) ಅವರ ತಿಳಿಸಿರುವ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಒಂದು ಲಕ್ಷದ ಹಣಕಾಸಿನ ವಹಿವಾಟು ಮಾಡುವಂತಹ ಸಂದರ್ಭದಲ್ಲಿ ಯಾವುದೇ ರೀತಿಯ ದೃಢೀಕರಣದ ಹೆಚ್ಚುವರಿ ಅಂಶವೂ(Additional factor of authentication) ಕಡ್ಡಾಯವಾಗಿರುವುದಿಲ್ಲ, ಬದಲಿಗೆ ದೊಡ್ಡ ಮೊತ್ತದ ಹಣದ ವಹಿವಾಟನ್ನು ನಡೆಸುವಂತಹ ವ್ಯಕ್ತಿಗಳಿಗೆ ಇ-ಮ್ಯಾಂಡೇಟ್ ಗಳನ್ನು ಸುಲಭವಾಗಿ ಒದಗಿಸುವತ್ತ ಆರ್ಬಿಐ ಕೆಲಸ ಮಾಡುತ್ತಿದೆ.

You can now transfer up to ₹5 lakh via UPI at hospitals
Image Source: Hindustan Times

advertisement

Leave A Reply

Your email address will not be published.