Karnataka Times
Trending Stories, Viral News, Gossips & Everything in Kannada

Easements Act: ಕೃಷಿ ಭೂಮಿಗೆ ಎತ್ತಿನಬಂಡಿ ಹಾಗು ಕಾಲುದಾರಿ ಕುರಿತು ಹೊಸ ಅಪ್ಡೇಟ್! ದಾರಿ ಇರದವರು ಕೂಡಲೇ ಈ ಅರ್ಜಿ ಹಾಕಿ

advertisement

The Indian Easements Act: ಜಮೀನಿನಲ್ಲಿ ಕೃಷಿ ಮಾಡುವಾಗ ಅನೇಕ ಸಂದರ್ಭಗಳಲ್ಲಿ ರಸ್ತೆ ವ್ಯವಸ್ಥೆ ಸರಿಯಾಗಿ ಇರದೆ ಜಮೀನಿಗೆ ಬೇಕಾದ ಪರಿಕರ ಕೊಂಡೊಯ್ಯಲು ಸಾಧ್ಯವಾಗಲಾರದು. ಹಾಗಾಗಿ ಕೃಷಿ ಮಾಡುವಾಗ ಅನೇಕ ಪರಿಕರ ಹೊತ್ತೊಯ್ಯಲು ಕಾಲುದಾರಿ ಅಥವಾ ಬಂಡಿದಾರಿ ಬೇಕಾಗಲಿದೆ. ಈ ನಿಟ್ಟಿನಲ್ಲಿ ಪಕ್ಕದ ಜಮೀನುಗಳನ್ನು ಕೇಳಿದರೆ ಅವರು ತಕರಾರು ಎತ್ತುತ್ತಾರೆ ಈ ನೆಲೆಯಲ್ಲಿ ಜಮೀನಿನ ಕಾಲು ದಾರಿ ಬಂಡಿದಾರಿ ನ್ಯಾಯಯುತವಾಗಿ ಪಡೆಯಬಹುದು. ಅದರ ವಿಸ್ತೀರ್ಣ ಎಷ್ಟು ಇರಬೇಕು ಹಾಗೂ ಇತರ ನಿಯಮದ ಬಗ್ಗೆ ಮಾಹಿತಿ ಇಲ್ಲಿದೆ.

ಕಾನೂನುಬದ್ಧ ಹಕ್ಕು?
ಭೂಮಿಯನ್ನು ಸರ್ವೇ ಮಾಡುವಾಗ ಭೂಮಿಯಲ್ಲಿ ಸಂಚಾರ ಮಾಡಲು ನಿಗಧಿತ ಪ್ರಮಾಣದ ಜಾಗ ಬಿಟ್ಟು ಇಡಬೇಕು ಎಂಬ ನಿಯಮ ಇದೆ. ಕಾಲುದಾರಿ, ಬಂಡಿ ದಾರಿಯಾಗಿರಬಹುದು ಅದನ್ನು ಖರಾ ಭೂಮಿ ಎಂದು ಕರೆಯುತ್ತಾರೆ. ಖರಾಭೂಮಿ ಬಗ್ಗೆ ತಿಳಿಯಲು ಪಹಣಿಯ ಮೂರನೇ ಕಾಲಂ ನೋಡಬೇಕಾಗುತ್ತದೆ. ಉದ್ದ ಅಗಲವನ್ನು ನೀವು ಖರಾಭೂಮಿಯ ಪತ್ರದಲ್ಲೇ ನೋಡಬಹುದಾಗಿದೆ.ಈ ಖರಾ ಭೂಮಿಯಲ್ಲಿ 2 ವಿಧವಿದೆ. ಅದನ್ನೇ ಕಾಲು ಮತ್ತು ಬಂಡಿದಾರಿ ಎಂದು ತಿಳಿಯಬಹುದು. ಹಾಗಾಗಿ ಇದಕ್ಕೆ ಸಂಬಂಧಿಸಿದ ಕಾನೂನು ಬದ್ದ ಹಕ್ಕನ್ನು Easement actಎಂದು ಕರೆಯುತ್ತಾರೆ. ಈ ಕಾಯ್ದೆಯ ಅನ್ವಯವೇ ಕೃಷಿಕರು ತಮ್ಮ ಹೊಲ ಅಥವಾ ಕೃಷಿ ಭೂಮಿಯಲ್ಲಿ ಸಂಚರಿಸಬಹುದಾಗಿದ್ದು ರೈತರಿಗೆ ಈ ಆ್ಯಕ್ಟ್ ಬಹಳ ಸಹಕಾರಿ ಆಗಿದೆ.

The Indian Easements Ac
image credit: tv9

advertisement

ಬ್ರಿಟಿಷರ ಅವಧಿಯ ಕಾಯ್ದೆ?
ಕುಟುಂಬಗಳು ಬರುಬುರುತ್ತಾ ಕಡಿಮೆ ಆಗುತ್ತಿದೆ. ಹಾಗಾಗಿ ರೈತರ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಆಸ್ತಿ ವ್ಯಾಜ್ಯ ವಾಗುತ್ತಿದೆ. ಹಾಗಾಗಿ ಇಂತಹ ಸಮಸ್ಯೆ ನಿವಾರಣೆಗೆ ಬ್ರಿಟಿಷ್ ಅವಧಿಯಲ್ಲಿ Easement act ಅನ್ನು ಜಾರಿಗೆ ತರಲಾಗಿದೆ.
ನೀವು ಜಮೀನಿಗೆ ಹೋಗಲು ದಾರಿ ಇಲ್ಲವಾದರೆ ಭಯಪಡದೆ Easement act ಪ್ರಕಾರ ಹೋಗಬಹುದಾಗಿದೆ. ಕೃಷಿಕರ ಗದ್ದೆ, ಜಮೀನು, ತೋಟ ಅಥವಾ ಕೃಷಿ ಜಾಗದಲ್ಲಿ ಇಂತಿಷ್ಟು ಓಡಾಟಕ್ಕೆ ನೀವು ಜಾಗ ನೀಡಲೇ ಬೇಕು ಎಂದು ಇದರಲ್ಲಿ ನಿಯಮ ಹೇಳಲಾಗುತ್ತದೆ. ಭೂಮಿ ದಾಖಲಿಸುವಾಗ ಈ ಬಗ್ಗೆ ಟಿಪ್ಪಣಿ ಸಹ ಮಾಡಿದ್ದಾರೆ. ಈಗ ಅದೇ ಟಿಪ್ಪಣಿ ಆಧಾರದಲ್ಲೇ ಭೂಮಿ ಹಂಚಿಕೆ ಸಹ ಆಗುತ್ತಿದೆ‌.

ನಿಯಮ ಏನು ಹೇಳುತ್ತದೆ?
ಕರ್ನಾಟಕ ಭೂ ಸುಧಾರಣಾ ಕಾಯ್ದೆ (Karnataka land revenue act1996)ರ ಪ್ರಕಾರವಾಗಿ ಕಾಲುದಾರಿ ಹಾಗೂ ಬಂಡಿದಾರಿ ವಿಸ್ತೀರ್ಣ ತಿಳಿಸಲಾಗುತ್ತಿದೆ. ಕಾಲುದಾರಿ ವಿಸ್ತೀರ್ಣದಲ್ಲಿ 8ಫೀಟ್ 2ಇಂಚು ಅಗಲ ಇರುತ್ತದೆ. ಅದರ ಉದ್ದ ಹೇಳಲಾಗದು. ಅಂದಾಜಿನ ಪ್ರಕಾರ ನಿಮ್ಮ ಜಮೀನಿನ ಉದ್ದವೆಂದೆ ಹೇಳಬಹುದು. ಬಂಡಿದಾರಿಯಲ್ಲಿ ಅಗಲ 20ಫೀಟ್ ನಿಮ್ಮ ಸರ್ವೇ ನಂಬರ್ ಮುಗಿಯುವ ವರೆಗೂ ಇದರ ಅಗಲ ಇರಲಿದೆ ಎನ್ನಬಹುದು.

The Indian Easements Ac
Image Source: Public TV

ಅರ್ಜಿ ಹಾಕಿ
ಕಾಲು ಮತ್ತು ಬಂಡಿ ದಾರಿ ಎರಡು ಸಾರ್ವಜನಿಕರ ಸ್ವತ್ತಾಗಿದ್ದು ಇದರ ತಿಳುವಳಿಕೆ ನಮಗೆ ಅಗತ್ಯವಾಗಿದೆ. ನಿಮಗೂ ಕೂಡ ಕಾಲುದಾರಿ ಇಲ್ಲ ಬಂಡಿದಾರಿ ಬೇಕಾಗಿದ್ದಲ್ಲಿ ಅಗತ್ಯ ದಾಖಲಾತಿ ಸಮೇತ ಜಿಲ್ಲಾಕೇಂದ್ರದಲ್ಲಿರುವ DDLR ಅವರಿಗೆ ಅರ್ಜಿ ಸಲ್ಲಿಸಿ ಹಕ್ಕು ಪಡೆಯಬಹುದು. ಸಿವಿಲ್ ನ್ಯಾಯಾಲಯದಲ್ಲಿ ಸಹ ಈ ಬಗ್ಗೆ ನೀವು ನ್ಯಾಯ ಪಡೆಯಲು ನಿಮಗೆ ವಿಶೇಷ ಅಧಿಕಾರ ಇರಲಿದೆ.

advertisement

Leave A Reply

Your email address will not be published.