Karnataka Times
Trending Stories, Viral News, Gossips & Everything in Kannada

PMFBY: ರೈತರಿಗೆ ಹೊಸ ಭಾಗ್ಯ ಕೊಟ್ಟ ಕೇಂದ್ರ! ಇನ್ಮೇಲೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಗೊತ್ತಾ?

advertisement

Pradhan Mantri Fasal Bima Yojana: ರಾಜ್ಯದಲ್ಲಿ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಮತ್ತು ರೈತರು‌ ಕೃಷಿಯಲ್ಲಿ ಮತ್ತಷ್ಟು ಅಭಿವೃದ್ಧಿ ಯಾಗಬೇಕು ಎಂಬ ನಿಟ್ಟಿನಲ್ಲಿ ಸರಕಾರ ರೈತರನ್ನು ಪ್ರೋತ್ಸಾಹ ನೀಡುತ್ತಲೇ‌ ಬಂದಿದೆ.ಈಗಾಗಲೇ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವನ್ನು ಕೂಡ ಬ್ಯಾಂಕ್ ಗಳು ನೀಡುತ್ತಿದೆ.

ಅದೇ ರೀತಿ ಸರ್ಕಾರವು ಪ್ರಧಾನಮಂತ್ರಿ ಫಸಲ್ ಬೆಳೆ ವಿಮೆ ಯೋಜನೆ ಮೂಲಕ ಸಾಂಪ್ರದಾಯಿಕ ಬೆಳೆಗಳಿಗೆ‌ ರೈತರಿಗೆ ಬೆಳೆ ವಿಮೆ ನೀಡುತ್ತಿದೆ.ಹಾಗಿದ್ದಲ್ಲಿ ಈ ಯೋಜನೆಯ ಪರಿಹಾರ ಎಷ್ಟು ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ. 2016 ರಂದು ಈ ಯೋಜನೆಯನ್ನು ಘೋಷಣೆ ಮಾಡಲಾಯಿತು.ಹವಾಮಾನ ವೈಪರೀತ್ಯದ ಕಾರಣದಿಂದ ರೈತರ ಬೆಳೆ ಹಾನಿ ಯಾದರೆ ಅಥವಾ ಅತಿವೃಷ್ಟಿ ಅಥವಾ ಅನಾವೃಷ್ಟಿ ಯಿಂದ ತೊಂದರೆ ಆದರೆ ಇದಕ್ಕೆ ಈ ಮೂಲಕ ಪರಿಹಾರ ನೀಡಲಾಗುತ್ತದೆ.

Pradhan Mantri Fasal Bima Yojana (PMFBY) scheme was launched in India by Ministry of Agriculture & Farmers welfare, New Delhi from Kharif 2016 season onwards
Image Source: The Week

advertisement

ಸಬ್ಸಿಡಿ ನೀಡಲಿದೆ
ಈ ಯೋಜನೆಯಡಿ, ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಲು ಪ್ರತಿ ಹೆಕ್ಟೇರಿಗೆ ಕೇವಲ 2,000 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಉಳಿದ ಮೊತ್ತವನ್ನು ಸರ್ಕಾರವು ಸಬ್ಸಿಡಿ ರೂಪದಲ್ಲಿ ನೀಡುತ್ತದೆ.ವಿಮೆ ವೆಚ್ಚದಲ್ಲಿ 50% ರಷ್ಟು ಕೇಂದ್ರ ಸರ್ಕಾರ ಮತ್ತು 50% ರಷ್ಟು ರಾಜ್ಯ ಸರ್ಕಾರ ನೀಡಲಿದೆ.ಈ ಬೆಳೆ ವಿಮೆ ಮಾಡಿಸುವುದರಿಂದ ರೈತರಿಗೆ ತಾವು ಬೆಳೆಸಿ ದಂತಹ ಬೆಳೆಗಳ ಖಾರಿಫ್ ಮತ್ತು ರಬಿ ಮುಂತಾದ ಅಪಾಯಗಳಿಂದ ರಕ್ಷಣೆ ದೊರೆಯುತ್ತದೆ.

ಎಷ್ಟು ಮೊತ್ತ ಸಿಗಲಿದೆ?
2024 ರಲ್ಲಿ, ಪಿಎಂಎಫ್‌ಬಿವೈ ಯೋಜನೆ ಅಡಿಯಲ್ಲಿ ಪ್ರತಿ ಹೆಕ್ಟೇರಿಗೆ ರೂ 25,600 ರೂ. ಬೆಳೆ ವಿಮೆ ನೀಡ್ತಾ ಇದೆ. ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಬೆಳೆ ವಿಮೆಗೆ ಒಳಪಟ್ಟ ರೈತರಿಗೆ ಈ ಸೌಲಭ್ಯ ನೀಡಲಾಗುತ್ತದೆ. ಈಗ ಸೂರ್ಯಕಾಂತಿ ಬೆಳೆಗೆ ಪ್ರತಿ ಹೆಕ್ಟೇರ್ ಗೆ 44,300 ರೂ ,ಸಾಸಿವೆ ಬೆಳೆ ಪ್ರತಿ ಹೆಕ್ಟೇರ್ ಗೆ 45,500 ರೂ, ಬಾರ್ಲಿ ಬೆಳೆಗೆ 4,410 ರೂ, ಗೋಧಿ ಬೆಳೆಗೆ 67,500, ಹತ್ತಿ 34,650 ರೂ, ಭತ್ತ ಬೆಳೆಗೆ 17,500 ರೂ ನೀಡಲಾಗುತ್ತದೆ.

Pradhan Mantri Fasal Bima Yojana (PMFBY) scheme was launched in India by Ministry of Agriculture & Farmers welfare, New Delhi from Kharif 2016 season onwards
Image Source: Public TV

ಉದ್ದೇಶ ಏನು?
ಈ ಯೋಜನೆಯ ಮೂಲಕ ಬೆಳೆ ಹಾನಿ ಸಂಭವಿಸಿದಲ್ಲಿ ರೈತರಿಗೆ ವಿಮೆ ಮತ್ತು ಅಪಾಯದ ರಕ್ಷಣೆ ನೀಡುವ ಗುರಿ ಹೊಂದಿದ್ದು ವಿಮಾ ರಕ್ಷಣೆಯ ಅಡಿಯಲ್ಲಿ, ವಿಮೆ ಮಾಡಿದ ಬೆಳೆ ನಾಶವಾದರೆ, ವಿಮಾ ಕಂಪನಿಯು ಜವಾಬ್ದಾರಿಯಾಗಿರುತ್ತದೆ.ಈ ಬಗ್ಗೆ ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಕೃಷಿ ಇಲಾಖೆಗೆ ಭೇಟಿ ನೀಡಬಹುದು.

advertisement

Leave A Reply

Your email address will not be published.