Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಗೆ ದಂಡ ವಿಧಿಸುವ ಬಗ್ಗೆ ಹೈಕೋರ್ಟ್ ನಿಂದ ಬಂತು ಹೊಸ ಆದೇಶ!

advertisement

HSRP ನಂಬರ್ ಪ್ಲೇಟ್ ಅನ್ನು ರಾಜ್ಯ ಸಾರಿಗೆ ಇಲಾಖೆ ಹೇಳಿರುವ ಪ್ರಕಾರ ಮೇ 31ರ ಒಳಗೆ ಪ್ರತಿಯೊಬ್ಬರು ಕೂಡ ತಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಬೇಕು ಎನ್ನುವಂತಹ ನಿಯಮವನ್ನು ಜಾರಿಗೆ ತರಲಾಗಿತ್ತು. ಜೂನ್ ಒಂದನೇ ತಾರೀಖಿನ ನಂತರ ಒಂದು ವೇಳೆ ವಾಹನಗಳಿಗೆ HSRP Number Plate ಹಾಕಿಸಿಕೊಳ್ಳದೆ ಹೋದಲ್ಲಿ ದೊಡ್ಡ ಮೊತ್ತದಲ್ಲಿ ದಂಡವನ್ನು ವಿಧಿಸುವ ಬಗ್ಗೆ ಕೂಡ ಮಾತನಾಡಲಾಗಿತ್ತು. ಆದರೆ ಈಗ ಈ ವಿಚಾರದ ಬಗ್ಗೆ ಹೈಕೋರ್ಟ್ ನಿಂದ ಬೇರೆಯದೇ ರೀತಿಯಲ್ಲಿ ಸುದ್ದಿಗಳು ಕೇಳಿ ಬರ್ತಾ ಇದ್ದು ನೀವು ಇದನ್ನ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿದೆ. ಹಾಗಿದ್ರೆ ಬನ್ನಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಬಗ್ಗೆ ಹೈಕೋರ್ಟ್ ಯಾವ ರೀತಿಯ ಆದೇಶವನ್ನು ನೀಡಿದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

HSRP ನಂಬರ್ ಪ್ಲೇಟ್ ವಿಚಾರದಲ್ಲಿ ಹೈಕೋರ್ಟ್ ಆದೇಶ:

 

Image Source: Belagavi Infra

 

HSRP Number Plate ಅಳವಡಿಸಿಕೊಳ್ಳದೆ ಹೋದಲ್ಲಿ ಜುಲೈ 4ನೇ ದಿನಾಂಕದವರೆಗೆ ಯಾವುದೇ ರೀತಿಯ ದಂಡವನ್ನು ವಿಧಿಸಬಾರದು ಎನ್ನುವುದಾಗಿ ಟ್ರಾಫಿಕ್ ಪೊಲೀಸರಿಗೆ ಹೈಕೋರ್ಟ್ (High Court) ಆದೇಶ ನೀಡಿದೆ ಎಂಬುದಾಗಿ ತಿಳಿದು ಬಂದಿದೆ. ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಎರಡು ಕೋಟಿಗೂ ಹೆಚ್ಚಿನ ವಾಹನಗಳಲ್ಲಿ ಕೇವಲ 35 ರಿಂದ 40 ಲಕ್ಷ ವಾಹನಗಳು ಮಾತ್ರ HSRP ನಂಬರ್ ಪ್ಲೇಟ್ ಗಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

advertisement

ಇದೇ ನಡುವಲ್ಲಿ ಹಳೆಯ ವಾಹನಗಳ HSRP Number Plate ಅಳವಡಿಕೆ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲು ಏರಿದ ಪ್ರಕರಣ ಈಗ ಮೊದಲಿಗೆ ಜೂನ್ 12ರಂದು ಕೊನೆಯ ದಿನಾಂಕ ಎಂಬುದಾಗಿ ಪರಿಗಣಿಸಲಾಗಿತ್ತು ಹಾಗೂ ನಂತರ ಈಗ ಅದು ಮುಂದುವರೆದು ಜುಲೈ 4ಕ್ಕೆ ಕಂಡು ಬಂದಿದೆ.

 

Image Source: Spinny

 

HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಬಿ ಎನ್ ಡಿ ಎನರ್ಜಿ ಲಿಮಿಟೆಡ್ ಸಂಸ್ಥೆ ಈ ವಿಚಾರದ ವಿರುದ್ಧವಾಗಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿರುವ ಕಾರಣದಿಂದಾಗಿಯೇ ಈಗ ದಿನಾಂಕದಂದುಡಿಕೆಯನ್ನು ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. HSRP Number Plate ಅನ್ನು ನೀವು ಜುಲೈ 4ನೇ ದಿನಾಂಕದ ಒಳಗಾಗಿ ಈಗ ಬಂದಿರುವಂತಹ ಹೊಸ ಆದೇಶದ ಪ್ರಕಾರ ರಿಜಿಸ್ಟರ್ ಮಾಡಿಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.

ಕೆಲವೊಂದು ಹಳೆಯ ವಾಹನದ ಕಂಪನಿಗಳ ವಾಹನದ ರಿಜಿಸ್ಟ್ರೇಷನ್ ಮಾಡೋದು ಹೇಗೆ ಅನ್ನುವುದರ ಬಗ್ಗೆ ಕೂಡ ಇಲಾಖೆ ಮುಂದಿನ ದಿನಗಳಲ್ಲಿ ಪರಿಹಾರವನ್ನು ಜಾರಿಗೆ ತರುವಂತಹ ಸಾಧ್ಯತೆ ಇದೆ ಎಂಬುದಾಗಿ ತಿಳಿದು ಬಂದಿದೆ. ಜುಲೈ ನಾಲ್ಕರ ನಂತರ ವಾಹನಗಳು HSRP Number Plate ಇಲ್ಲದೇ ಸಿಕ್ಕಿಹಾಕಿಕೊಂಡ್ರೆ ಅವರನ್ನು ಹಿಡಿಯಲಾಗುತ್ತದೆ ಹಾಗೂ ಅವರಿಗೆ ದೊಡ್ಡ ಪ್ರಮಾಣದಲ್ಲಿ ದಂಡವನ್ನು ವಿಧಿಸಲಾಗುತ್ತದೆ ಎನ್ನುವಂತಹ ಮಾಹಿತಿ ಕೂಡ ಕೇಳಿಬಂದಿದೆ. ಹೀಗಾಗಿ ಹೈಕೋರ್ಟ್ ಆದೇಶದ ಪ್ರಕಾರ ಜುಲೈ 4ರ ಒಳಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ಅಳವಡಿಸುವ ಕೆಲಸವನ್ನು ಪೂರ್ತಿಗೊಳಿಸಿ.

advertisement

Leave A Reply

Your email address will not be published.