Karnataka Times
Trending Stories, Viral News, Gossips & Everything in Kannada

Gruha Lakshmi Yojana: ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣದ ಬಗ್ಗೆ ಸಿಎಂ ಪ್ರಮುಖ ಮಾಹಿತಿ, ಡೇಟ್ ಇಲ್ಲಿದೆ

advertisement

ರಾಜ್ಯ ಸರ್ಕಾರದ ಬಹುಮುಖ್ಯ ಯೋಜನೆಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆ (Gruha Lakshmi Yojana), ಇತ್ತೀಚಿನ ದಿನಗಳಲ್ಲಿ ಎಲೆಕ್ಷನ್ ಮುಗಿದ ನಂತರ ಕಣ್ಮರೆ ಆಗುತ್ತೆ ಅನ್ನೋದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಆದರೆ ಈಗ ರಾಜ್ಯ ಸರ್ಕಾರವೇ ಇದರ ಬಗ್ಗೆ ಭರವಸೆ ನೀಡಿದ್ದು ಯಾವುದೇ ಕಾರಣಕ್ಕೂ ಕೂಡ ಯಾವುದೇ ಗ್ಯಾರಂಟಿ ಯೋಜನೆಗಳು ಕೂಡ ನಿಲ್ಲುವ ಪ್ರಮೇಯವೇ ಇಲ್ಲ ಎನ್ನುವುದಾಗಿ ಸ್ಪಷ್ಟವಾದ ಭರವಸೆ ನೀಡಿದೆ.

WhatsApp Join Now
Telegram Join Now

ಅದರಲ್ಲೂ ವಿಶೇಷವಾಗಿ ಈ ವಿಚಾರದ ಬಗ್ಗೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳಕರ್ (Lakshmi Hebbalkar) ಅವರೇ ಸ್ಪಷ್ಟ ಭರವಸೆಯನ್ನು ನೀಡಿರುವುದು ಪ್ರತಿಯೊಬ್ಬರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಅಡಿಯಲ್ಲಿ ಈಗಾಗಲೇ 10ನೇ ಕಂತು ಬಿಡುಗಡೆಯಾಗಿದ್ದು ಮಹಿಳೆಯರ ಖಾತೆಗೆ ಈ ಹಣ ನೇರವಾಗಿ ವರ್ಗಾವಣೆ ಆಗಿದೆ ಎನ್ನುವಂತಹ ಮಾಹಿತಿ ಸಿಕ್ಕಿದ್ದು 11ನೇ ಕಂತಿನ ಹಣ ಯಾವಾಗ ಸಿಗುತ್ತದೆ ಎನ್ನುವುದಾಗಿ ರಾಜ್ಯದಾದ್ಯಂತ ಪ್ರತಿಯೊಬ್ಬ ಮಹಿಳೆಯರು ಕೂಡ ಕಾಯುತ್ತಿದ್ದಾರೆ.

 

Image Source: Getty Images

 

advertisement

ಇದರ ನಡುವೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಕೆಲವು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗದೆ ಇರೋದಕ್ಕೆ ಅವರು ತಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ (Aadhaar-Ration Card Link) ಮಾಡದೆ ಇರುವುದು ಅಥವಾ ತಮ್ಮ ಬ್ಯಾಂಕ್ ಖಾತೆಗೆ ತಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದೆ ಇರುವಂತಹ ಕೆಲಸವನ್ನು ಮಾಡಿರುವ ಕಾರಣದಿಂದಾಗಿ ಈ ರೀತಿ ಸಮಸ್ಯೆಗಳು ಆಗ್ತಾ ಇದೆ. ಇದರ ಬಗ್ಗೆ ಇಲಾಖೆ ಹಿಂದೇನೆ ಮಹಿಳೆಯರಿಗೆ ಲಿಂಕ್ ಮಾಡೋದಕ್ಕೆ ಸೂಚನೆಯನ್ನು ನೀಡಿತ್ತು. ಇದರ ನಂತರವೂ ಕೂಡ ಲಿಂಕ್ ಮಾಡದೆ ಇರುವಂತಹ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Transfer) ಆಗದೆ ಇರುವಂತಹ ಪರಿಸ್ಥಿತಿಗಳು ಎದ್ದು ಕಾಣುತ್ತಿವೆ ಎಂದು ಹೇಳಬಹುದಾಗಿದೆ.

11ನೇ ಕಂತಿನ ಹಣ ಯಾವಾಗ ಸಿಗ್ತಾ ಇದೆ ಗೊತ್ತಾ?

 

Image Source: Deccan Herald

 

ಇನ್ನೇನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೂನ್ ತಿಂಗಳು ಮುಗಿಯುತ್ತಾ ಬಂತು. ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ 11ನೇ ಕಂತಿನ ಹಣ ಯಾವಾಗ ಬರುತ್ತದೆ ಅನ್ನೋದಾಗಿ ಕರ್ನಾಟಕದ ಪ್ರತಿಯೊಬ್ಬರು ಮಹಿಳೆಯರು ಕಾಯ್ತಾ ಇದ್ದಾರೆ. ಇದರ ಬೆನ್ನಲ್ಲೇ ಈಗ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ರವರು ಜೂನ್ 20ನೇ ದಿನಾಂಕದಂದು ಪ್ರತಿಯೊಬ್ಬರ ಖಾತೆಗೆ ಹಣ ವರ್ಗಾವಣೆ ಆಗುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುವಂತಹ ಮಾಹಿತಿಯನ್ನು ನೀಡಿದ್ದಾರೆ.

ಯಾಕೆಂದರೆ ಕೆಲವೊಂದು ಕಡೆಗಳಲ್ಲಿ ಸರ್ವರ್ ಸಮಸ್ಯೆ ಇರುವ ಕಾರಣದಿಂದಾಗಿ ಒಂದೆರಡು ದಿನ ತಡವಾದರೂ ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಆದರೆ ನಿಗದಿತ ಸಮಯದ ಆಸುಪಾಸಿನಲ್ಲಿಯೇ ಹಣ ಮಹಿಳೆಯರ ಖಾತೆಗೆ ವರ್ಗಾವಣೆ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಇಲಾಖೆ ತಿಳಿಸಿದೆ.

advertisement

Leave A Reply

Your email address will not be published.